ಬೀದರ್‌ | ಬಹುತ್ವ, ಸೌಹಾರ್ದತೆ ಭಾರತದ ನಾಡಿಮಿಡಿತ : ಭೀಮಾಶಂಕರ ಬಿರಾದರ್

Date:

ಬಹುತ್ವದ ಆಳವಾದ ಅಧ್ಯಯನದೊಂದಿಗೆ  ಭಾರತದ ಸೌಹಾರ್ದತೆ ಕಾಪಾಡಬೇಕಾಗಿದೆ. ಬಹುತ್ವ ಮತ್ತು ಸೌಹಾರ್ದತೆ ಭಾರತದ ನಾಡಿಮಿಡಿತಗಳಾಗಿವೆ ಎಂದು ಬಸವಕಲ್ಯಾಣ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.

ಬೀದರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಸಾಹಿತ್ಯ ಸಂಘದ ಸಹಯೋಗದಲ್ಲಿ ‘ಭಾಷಾ ಸೌಹಾರ್ದ ಸಂಸ್ಕೃತಿ ಕುರಿತು ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣದ ಎರಡನೇ ಗೋಷ್ಠಿಯಲ್ಲಿ ‘ಸೌಹಾರ್ದ ಭಾರತ ‘ ಕುರಿತು ಮಾತನಾಡಿದ ಅವರು, ‌ʼಸಾಂಸ್ಕೃತಿಕ ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯ, ಸಾಮಾಜಿಕ ಸಹಿಷ್ಣುತೆಗಳು ಸೌಹಾರ್ದ ಭಾರತದ ತಾತ್ವಿಕತೆಗಳಾಗಿವೆʼ ಎಂದರು.

ʼಬಹುಭಾಷಿಕ, ಬಹುಸಾಂಸ್ಕೃತಿಕವಾದ ಭಾರತೀಯ ಸಾಮಾಜಿಕ ರಚನೆಯಲ್ಲಿ ಕೂಡಿ ಬಾಳುವ ಭಾವನಾತ್ಮಕ ನಿಲುವೇ ಸೌಹಾರ್ದತೆಯಾಗಿದೆ. ಸಮಾಜ ವಿಜ್ಞಾನಿಗಳು, ದಾರ್ಶನಿಕರು ಮಾತನಾಡಿದ ಸಮಾನತೆಯ ಅಂಶಗಳಲ್ಲಿಯೇ ಸೌಹಾರ್ದತೆ ಅಡಗಿದೆ. ಮಾನವೀಯತೆ ತತ್ವವೇ ಸೌಹಾರ್ದ ಬದುಕಿನ ಬುನಾದಿಯಾಗಿದೆ. ಧಾರ್ಮಿಕ ಅನನ್ಯಯ ಸಂಬಂಧಗಳು, ವೃತ್ತಿ ಅನನ್ಯತೆಯ ಸಂಬಂಧಗಳು, ವ್ಯಕ್ತಿ ಅನನ್ಯತೆಯ ಸಂಬಂಧಗಳು ಕಾಪಿಟ್ಟುಕೊಳ್ಳುವ ತತ್ವವು ಸೌಹಾರ್ದತೆ ಮೈಗೂಡಿಸಿಕೊಂಡಿದೆ. ಸೌಹಾರ್ದತೆ ಹಾಳುಗೆಡವಿ ಆಳುವ ಅಧಿಕಾರ ಕೇಂದ್ರಗಳು ಯಾವುವು ಎಂಬ ಅರಿವು ಮೂಡಿಸುವ ಕೆಲಸ ಇಂದು ಆಗಬೇಕಿದೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಉದಗೀರ ಉದಯಗಿರಿ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ರಮೇಶ ಮೂಲಗೆ ಮಾತನಾಡಿ, ʼಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ತತ್ವವನ್ನು ನಮ್ಮ ಸಾಹಿತ್ಯ ಸದಾ ಸಾರುತ್ತದೆ. ಮಾತಿನಲ್ಲಿ ಮಾತ್ರ ಸೌಹಾರ್ದತೆ ಕುರಿತು ಹೇಳದೆ ಬದುಕಿನಲ್ಲಿ ಅಳವಡಿಸಿಕೊಂಡರೆ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯʼ ಎಂದರು.

ಡಾ.ಸಂಗಶೆಟ್ಟಿ ಪಾಟೀಲ, ಪ್ರಾಚಾರ್ಯ  ಡಾ. ಶಂಕರ ಗಣಗೊಂಡ , ಡಾ. ಜಗನ್ನಾಥ ಹೆಬ್ಬಾಳೆ, ಡಾ.ಉಮಾಕಾಂತ ಪಾಟೀಲ, ಮಾತನಾಡಿದರು. 

ಇದನ್ನೂ ಓದಿ : ಬೀದರ್ | ಎಲ್ಲರೂ ಒಗ್ಗೂಡಿದಾಗ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ

ಕಾರ್ಯಕ್ರಮದಲ್ಲಿ ರಾಜಕುಮಾರ ಅಲ್ಲೂರೆ, ಸಂಜುಕುಮಾರ ತಾಂದಳೆ, ಮಹಾದೇವಿ ಹೆಬ್ಬಾಳೆ, ಲಕ್ಷ್ಮಿಕಾಂತ ಪಂಚಾಳ, ಅಶೋಕ ಕೋರೆ,  ಮಕ್ತಂಬಿ ಎಂ, ರೂತಾ, ಈಶ್ವರಯ್ಯ ಕೋಡಂಬಲ್, ಸ್ವರೂಪಾರಾಣಿ ನಾಗೂರೆ, ಸುನಿತಾ ಕೂಡ್ಲಿಕರ, ಸಂಗಪ್ಪ ತೌಡಿ, ಬಸವರಾಜ ಖಂಡಾಳೆ, ಅಶೋಕ ಕೋರೆ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...