ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಭಾನುವಾರ ಸಂಜೆ ಸುರಿದ ತುಂತುರು ಮಳೆಯ ಸಿಂಚನ ಇಳೆ ತಂಪುಗೊಳಿಸಿದೆ. ಜನರು ಧಗೆಯಿಂದ ನಿಟ್ಟುಸಿರು ಬಿಡುವಂತಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ಬೇಸಿಗೆ ಬಿಸಿಲು ಪ್ರಖರವಾಗಿದೆ. ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದರಿಂದ ಜನ ಮಧ್ಯಾಹ್ನ ರಸ್ತೆಗಿಳಿಯಲು ಹಿಂಜರಿಯುವಂತಾಗಿದೆ. ಕೂಲಿಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಬಿಸಿಲಿನಲ್ಲೇ ಬೆವರಿಳಿಸುವುದು ಸಾಮಾನ್ಯವಾಗಿದೆ.
ಕಾದ ಹೆಂಚಿನಂತಾಗಿದ್ದ ಇಳೆಗೆ ಭಾನುವಾರ ಸಂಜೆ ಗುಡುಗು, ತಂಪು ಗಾಳಿಯೊಂದಿಗೆ ಭೂಮಿಗೆ ಮಳೆಹನಿಗಳು ತಲುಪುತ್ತಿದ್ದಂತೆ ಜನರ ಮನ ತಣಿಯಿತು.
ಜಿಲ್ಲೆಯ ಭಾಲ್ಕಿ, ಹುಲಸೂರ, ಔರಾದ್ ಸೇರಿದಂತೆ ವಿವಿಧೆಡೆ ಸಣ್ಣ ಮಳೆಯಾಗಿದ್ದು, ಗುಡುಗು, ಮಿಂಚು ಸಹಿತ ತಂಪು ಗಾಳಿ ಬೀಸಿದೆ. ಕೆಲವೆಡೆ ರಾತ್ರಿ ಮಳೆ ಬರುವ ಸಾಧ್ಯತೆ ಇದೆ. ಇನ್ನು ಬೀದರ್, ಭಾಲ್ಕಿ, ಔರಾದ್ ತಾಲೂಕಿನ ಕೆಲವೆಡೆ ಮಳೆ ಇನ್ನೂ ಸಾಧಾರಣ ಮಳೆ ಮುಂದುವರೆದಿರುವುದು ಖಚಿತ ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ : ಬೀದರ್ | ಮಾ.17 ರಂದು ಬಲಗೈ ಸಮುದಾಯಗಳ ಪ್ರತಿಭಟನೆ : ಕರಪತ್ರ ಬಿಡುಗಡೆ
ಫೋಟೊ-ವಿಡಿಯೊ : ಶ್ರೀಧರ ಸೋಮನೋರ್, ಲೋಕೇಶ ಕಾಂಬಳೆ





