ಔರಾದ್ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ : ವಿವಿಧ ಸಮಿತಿಗಳ ರಚನೆ :
ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಫೆ.4ರಂದು ನಡೆಯುವ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿ ಆಚರಣೆಗಾಗಿ ವಿವಿಧ ಸಮಿತಿಗಳು ರಚಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ತಿಳಿಸಿದ್ದಾರೆ.
ಔರಾದ್ ಪಟ್ಟಣದ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಎರಡನೇ ಪೂರ್ವಭಾವಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ, ಆಹಾರ ಸಮಿತಿಗೆ ಮಹಾದೇವ ಘುಳೆ, ಅತಿಥಿ ಸತ್ಕಾರ ಸಮಿತಿಗೆ ವಿಶ್ವನಾಥ ಬಿರಾದಾರ, ಶಿಸ್ತು ಪಾಲನಾ ಸಮಿತಿ, ವೇದಿಕೆ ಸಮಿತಿಗೆ ಯಶವಂತರಾವ ಡೊಂಬಾಳೆ, ಸಂಘಟನಾ ಸಮಿತಿಗೆ ಸುನೀಲ ಮಿತ್ರ, ಹಣಕಾಸು ಸಮಿತಿಗೆ ಶಿವರಾಜ ಅಲ್ಮಾಜೆ, ಸಾಂಸ್ಕೃತಿಕ ಸಮಿತಿ ಶಾಲಿವಾನ ಉದಗಿರೆ, ಸ್ಮರಣ ಸಂಚಿಕೆ ಸಮಿತಿ ಶಿವಲಿಂಗ ಹೇಡೆ, ಮೆರವಣಿಗೆ ಸಮಿತಿ ಸಂಜೀವ ಶೆಟಕಾರ, ನಗರ ಅಲಂಕಾರ ಸಮಿತಿಗೆ ರಾಜ್ಕುಮಾರ ಎಡವೆ, ನೋಂದಣಿ ಸಮಿತಿಗೆ ಗೋವಿಂದರಾವ ಪಾಟೀಲ, ವೈದ್ಯಕೀಯ ಸಮಿತಿಗೆ ಡಾ.ಗಾಯತ್ರಿ, ಮಳಿಗೆ ಸಮಿತಿಗೆ ಗುರುನಾಥ ರೆಡ್ಡಿ, ಚಿತ್ರಕಲೆ ಸಮಿತಿ ಅನಿಲಕುಮಾರ ಕಟ್ಟೆ, ಮಹಿಳಾ ಸಮಿತಿಗೆ ಮಾರ್ತಮ್ಮ ಮಾಳಗೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಡಾ.ವೈಜಿನಾಥ ಬುಟ್ಟೆ, ಶಿವಾಜಿರಾವ ಪಾಟೀಲ, ಅಮೃತರಾವ ಬಿರಾದಾರ, ತುಳಸಿರಾಮ ಬೆಂದ್ರೆ, ಗುರುನಾಥ ದೇಶಮುಖ, ಬಸವರಾಜ ಶೆಟಕಾರ, ಶರಣಪ್ಪ ಪಾಟೀಲ, ವಿರೇಶ ಅಲ್ಮಾಜೆ, ಆನಂದ ದ್ಯಾಡೆ, ರತ್ನದೀಪ ಕಸ್ತೂರೆ, ಸಂಜೀವ ಬಿರಾದರ, ಕೈಲಾಸಪತಿ ಕೇದಾರೆ, ಪ್ರಕಾಶ ಭಂಗಾರೆ, ದತ್ತಾತ್ರಿ ಮಸ್ಕಲೆ, ರವಿ ಡೋಳೆ, ಚನ ಮುಕ್ತೆದಾರ, ಬಾಲಾಜಿ ದಾಮಾ, ಮಾಧವ ಮಾಳಕಾರಿ, ಧನರಾಜ ಮಾನೆ, ಆನಂದ ಕಾಂಬಳೆ, ಆನಂದ ಪವಾರ, ಅಶೋಕ ಶೆಂಬೆಳ್ಳಿ, ಮಲ್ಲಿಕಾರ್ಜುನ ಟೆಕರಾಜ, ಮಹಾದೇವ ಶಿಂಧೆ, ಸಂದೀಪ ಪಾಟೀಲ ಸೇರಿದಂತೆ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜ.17ಕ್ಕೆ ಉಚಿತ ಸಿ.ಇ.ಟಿ ಕಾರ್ಯಾಗಾರ :
ವಿನ್ನರ್ ಹಾಗೂ ಸ್ಪರ್ಧಾ ಜಿನಿಯಸ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ಬೀದರ್ ನಗರದ ತಾಯಿ ಮತ್ತು ಮಗು ವೃತ್ತ ಸಮೀಪದ ಶರಣ ನಗರದಲ್ಲಿ ಜ.17 ರಂದು ಬೆಳಿಗ್ಗೆ 11ಕ್ಕೆ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ.) ಕುರಿತು ಉಚಿತ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದಲ್ಲಿ ಖ್ಯಾತ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ಮಾಡಲಿದ್ದಾರೆ. ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯಲಿರುವ ಜಿಲ್ಲೆಯ ಅಭ್ಯರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆಯಬೇಕು ಎಂದು ಕೇಂದ್ರದ ನಿರ್ದೇಶಕಿ ಪೂಜಾ ಎಚ್.ಪಾಟೀಲ ಹಾಗೂ ಮಹಾದೇವಿ ಎಂ.ಬುಕ್ಕಾ ಕೋರಿದ್ದಾರೆ.
ಕಾರ್ಯಾಗಾರದ ಕುರಿತು ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 8970850873 ಅಥವಾ 9902580095 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಬೀದರ ಕೋಟೆ ಮೇಲೆ ಏರ್ ಶೋ :
ಬೀದರ ಕೋಟೆ ಆವರಣದ ಮೇಲೆ ಭಾರತೀಯ ವಾಯುಪಡೆ ವತಿಯಿಂದ ಮೇಲೆ ನಾಳೆ (ಜ.16) ರಂದು ಮಧ್ಯಾಹ್ನ 3 ಗಂಟೆಗೆ ಬೀದರ್ ಏರ್ ಶೋ ಹಮ್ಮಿಕೊಳ್ಳಲಾಗಿದೆ. ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ಸ್ ತಂಡದಿಂದ ಏರ್ ಶೋ ನಡೆಯಲಿದ್ದು, ಇದರಲ್ಲಿ ಅದ್ಭುತ ವೈಮಾನಿಕ ಕಸರತ್ತುಗಳನ್ನು ಕಾಣಬಹುದಾಗಿದೆ.
ʼಬೀದರ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಏರ ಶೋ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ 3 ಗಂಟೆಯೊಳಗೆ ಸಾರ್ವಜನಿಕರು ಬೀದರ ಕೋಟೆಯ ಒಳಗಡೆ ನಿಗದಿತ ಸ್ಥಳದೊಳಗೆ ಉಪಸ್ಥಿತರಿದ್ದು, ಬೀದರ ಏರ್ ಶೋ ವೀಕ್ಷಿಸಬಹುದಾಗಿದೆʼ ಎಂದು ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.17ಕ್ಕೆ ಜನ ಸಂಪರ್ಕ ಸಭೆ :
ಬೀದರ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಔರಾದ(ಬಿ), ಭಾಲ್ಕಿ, ಬೀದರ, ಕಮಠಾಣ ಉಪ ವಿಭಾಗದಲ್ಲಿ ಜ.17 ರಂದು ವಿವಿಧ ಉಪ ವಿಭಾಗಗಳಲ್ಲಿ ಜನ ಸಂಪರ್ಕಸಭೆ ಹಾಗೂ ಕೆಇಆರ್‍ಸಿಯ (ಎಸ್.ಒ.ಪಿ.) ಮಾನದಂಡಗಳನ್ನು ಕುರಿತು ಅರಿವು ಅರಿವು ಮೂಡಿಸುವಿಕೆ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಇಂಜಿನಿಯರರು(ವಿ)/ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಗುವಿಸಕಂನಿ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ ಎಂದು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯುಂತರರು(ವಿ) ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜನವರಿ 17 ರಂದು ಬೆಳಿಗ್ಗೆ 9 ಗಂಟೆಗೆ ಔರಾದ್ (ಬಿ) ಉಪ ವಿಭಾಗ ಕಛೇರಿಯಲ್ಲಿ, ಬೀದರ (ನಗರ ಉಪ ವಿಭಾಗ ಕಚೇರಿಯಲ್ಲಿ, ಕಮಠಾಣ ಉಪ ವಿಭಾಗ ಕಚೇರಿಯಲ್ಲಿ ಹಾಗೂ ಬೆಳಿಗ್ಗೆ 11 ಗಂಟೆಗೆ ಭಾಲ್ಕಿ ಉಪ ವಿಭಾಗ ಕಚೇರಿಯಲ್ಲಿ, ಬೀದರ (ಗ್ರಾಮೀಣ) ಉಪ ವಿಭಾಗ ಕಚೇರಿಗಳಲ್ಲಿ ಸಭೆಗಳು ನಡೆಯಲಿದ್ದು, ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಸದರಿ ಸಭೆಯಲ್ಲಿ ಉಪಸ್ಥಿತರಿದ್ದು ಕುಂದುಕೊರತೆಯ ಅರ್ಜಿಗಳನ್ನು ಸಲ್ಲಿಸಲು ಅವರು ತಿಳಿಸಿದ್ದಾರೆ.
ವಿಭಾಗ ಮಟ್ಟದ ದಸಂಸ ಎರಡು ದಿನಗಳ ಅಧ್ಯಯನ ಶಿಬಿರ :
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಕಲಬುರಗಿ ವಿಭಾಗದ ವತಿಯಿಂದ ವಿಭಾಗದ ಪದಾಧಿಕಾರಿಗಳಿಗೆ ಎರಡು ದಿನಗಳ ಅಧ್ಯಯನ ಶಿಬಿರವನ್ನು ಕೊಪ್ಪಳ ಜಿಲ್ಲೆಯ ಕುಷ್ಠಗಿ ತಾಲೂಕಿನ ತಾವರಗೇರಾ ಪಟ್ಟಣದ ಬುದ್ಧ ವಿಹಾರದಲ್ಲಿ ಜನವರಿ 17 ಮತ್ತು 18 ರಂದು ಹಮ್ಮಿಕೊಳ್ಳಲಾಗಿದೆ ಎಂದು ಬೀದರ ಜಿಲ್ಲಾ ಸಂಚಾಲಕ ರಮೇಶ ಮಂದಕನಳ್ಳಿ ತಿಳಿಸಿದ್ದಾರೆ.
ಶಿಬಿರವನ್ನು ಪ್ರೊ.ಬಿ.ಕೃಷ್ಣಪ್ಪ ಅವರ ಪತ್ನಿ ಇಂದಿರಾ ಅವರು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ವಹಿಸಲಿದ್ದಾರೆ. ಅಧ್ಯಯನ ಶಿಬಿರದಲ್ಲಿ ಪ್ರಮುಖರಾದ ರಮೇಶ ಡಾಕುಳಗಿ, ರಾಮಣ್ಣ ಕಲ್ಲದೇವನಹಳ್ಳಿ, ನಾಗಣ್ಣ ಬಡಿಗೇರ ಹಾಗೂ ಶ್ರೀನಿವಾಸ್ ಖೇಳಗಿ ಸೇರಿದಂತೆ ಹಿರಿಯ ಚಿಂತಕರು, ಹೋರಾಟಗಾರರು ಭಾಗವಹಿಸಲಿದ್ದಾರೆ.
ಅಂಬೇಡ್ಕರ್‌ವಾದ ಚಳವಳಿ ಮತ್ತು ಮಹಿಳಾ ವಿಮೋಚನೆ, ಅಂಬೇಡ್ಕರ್ ದೃಷ್ಟಿಯಲ್ಲಿ ಜಾತಿ–ವರ್ಗ ಪ್ರಶ್ನೆ ಮತ್ತು ಬೌದ್ಧ ಧಮ್ಮ, ರಾಷ್ಟ್ರೀಯ ಶಿಕ್ಷಣ ನೀತಿಗಳು ಹಾಗೂ ವರ್ತಮಾನ ಸಮಸ್ಯೆಗಳು, ದಲಿತ ಸಂಘರ್ಷ ಸಮಿತಿಯ ಉಗಮ–ಬೆಳವಣಿಗೆ ಮತ್ತು ವರ್ತಮಾನ ಸವಾಲುಗಳು, ಭಾರತ ಸಂವಿಧಾನದ ಆಶಯಗಳು ಹಾಗೂ ರಾಷ್ಟ್ರವಿರೋಧಿ ಕೋಮುವಾದ ವಿಷಯಗಳ ಕುರಿತು ಶಿಬಿರದಲ್ಲಿ ಸುದೀರ್ಘ ಉಪನ್ಯಾಸಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಪುರಾತನ ʼಕರೇಜ್ʼಗೆ ಹಾನಿ : ಡಿಸಿ ಶಿಲ್ಪಾ ಶರ್ಮಾ ಭೇಟಿ, ಪರಿಶೀಲನೆ
ಪ್ರತಿ ಜಿಲ್ಲೆಯಿಂದ ಸುಮಾರು 50 ಮಂದಿ ಪದಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಅಧ್ಯಯನ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ ಅವರು, ಬೀದರ ಜಿಲ್ಲೆಯಿಂದ 50 ಮಂದಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದಿದ್ದಾರೆ.
–ನಿಮ್ಮ ಊರು, ನಗರ, ಪಟ್ಟಣದ ಕುಂದು ಕೊರತೆಗಳ ಪೋಟೋ, ವಿಡಿಯೋ ಮಾಹಿತಿಯನ್ನು
ಈದಿನ.ಕಾಮ್ ನ್ಯೂಸ್ ಬೀದರ್ ಸಹಾಯವಾಣಿ 9035053805 ವಾಟ್ಸಪ್ ನಂಬರ್‌ಗೆ ಕಳುಹಿಸಿ.





