ಒಳಮೀಸಲಾತಿಯಿಂದ ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತತ್‌ಕ್ಷಣ ಸರಿಪಡಿಸಬೇಕೆಂದು ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹಾದೇವಪ್ಪ, ಗೃಹ ಸಚಿವ ಡಾ.ಜಿ.ಪರಮೇಶ್ವರ, ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ಬೀದರ್ ನಗರಕ್ಕೆ ಆಗಮಿಸಿದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷ ಡಾ.ಮೂರ್ತಿ ಎಲ್. ಅವರಿಗೆ ಬೀದರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತ್ಯೇಕವಾಗಿ ಮನವಿ ಪತ್ರ ನೀಡಲಾಯಿತು.
ಹಕ್ಕೋತ್ತಾಯಗಳೇನು?
ಒಳಮೀಸಲಾತಿ ಗೊಂದಲಗಳು ಪರಿಹಾರವಾಗುವ ತನಕ ಹಳೆಯ ಮೀಸಲಾತಿ ಪದ್ಧತಿಯನ್ನೇ ಅನ್ವಯಿಸಿ, ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು. ಪರಿಶಿಷ್ಟ ಜಾತಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಜಾರಿಗೆ ತಂದಿರುವ ಒಳಮೀಸಲಾತಿ ವರದಿ ಸಂಬಂಧಿತ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರವಾಗುವ ತನಕ, ಪ್ರಸ್ತುತ ಶೈಕ್ಷಣಿಕ ಕ್ಷೇತ್ರ ಮತ್ತು ಉದ್ಯೋಗಗಳಿಗೆ ಅನ್ವಯಿಸುತ್ತಿರುವ ಒಳಮೀಸಲಾತಿಯ ಕಾರ್ಯಚಟುವಟಿಕೆಗಳಿಗೆ ತಕ್ಷಣ ತಡೆಯಾಜ್ಞೆ ನೀಡಬೇಕು. ಹೊಸ ಜಾತಿ ಪ್ರಮಾಣ ಪತ್ರಗಳ ವಿತರಣೆ ತುರ್ತಾಗಿ ನಿಲ್ಲಿಸಿ, ಈಗಾಗಲೇ ನೀಡಿರುವ ಹಳೆಯ ಜಾತಿ ಪ್ರಮಾಣ ಪತ್ರಗಳನ್ನೇ ಮುಂದುವರೆಸಬೇಕು. ಒಳಮೀಸಲಾತಿಗೆ ಸಂಬಂಧಿಸಿದ ರೋಸ್ಟರ್ ಬಿಂದುಗಳನ್ನು ಪರಿಷ್ಕರಿಸಿ, ನ್ಯಾಯಸಮ್ಮತವಾಗಿ ಸರಿಪಡಿಸಬೇಕುʼ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ʼಒಳಮೀಸಲಾತಿ ಅನ್ಯಾಯವನ್ನು ಒಂದು ವಾರದೊಳಗೆ ಬಗೆಹರಿಯದಿದ್ದರೆ ಸಮುದಾಯದಿಂದ ಸಭೆ ನಡೆಸಿ ಬೀದರ ಬಂದ್‌ಗೆ ಕರೆ ನೀಡಲಾಗುವುದುʼ ಎಂದು ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮಹೇಶ ಗೋರನಾಳಕರ ಎಚ್ಚರಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ ನಾಟೆಕರ್, ಪ್ರಕಾಶ ರಾವಣ್, ಭೀಮರಾವ ಮಾಲಗತ್ತಿ, ರಾಹುಲ್ ಡಾಂಗೆ, ಪವನ ಮಿಠಾರೆ, ಸಂಜುಕುಮಾರ ಸಾಗರ, ವಿನೋದ ಬಂದಗೆ, ಸೂರ್ಯಕಾಂತ ಸಾಧೂರೆ, ಅರುಣ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಫೆ.26ರಂದು ರಮಾತಾಯಿ ಅಂಬೇಡ್ಕರ್ ಜಯಂತ್ಯುತ್ಸವ, ಸಾಂಸ್ಕೃತಿಕ ಸಂಭ್ರಮ
ಬಲಗೈ ಸಮುದಾಯದ ಹೋರಾಟಗಾರರಾದ ಮಾರುತಿ ಬೌದ್ಧೆ, ಅನೀಲಕುಮಾರ ಬೆಲ್ದಾರ, ಕಾಶಿನಾಥ ಚೆಲ್ವಾ, ವಿಠಲದಾಸ ಪ್ಯಾಗೆ, ಕೆ.ಪುಂಡಲಿಕರಾವ, ಅರವಿಂದಕುಮಾರ ಅರಳಿ, ಶಂಕರ ದೊಡ್ಡಿ, ವಿಜಯಕುಮಾರ ಗಾಯಕವಾಡ, ಶಂಭುಲಿಂಗ ಕುದರೆ, ಶ್ರೀಪತರಾವ ದಿನೆ, ಶಿವಕುಮಾರ ನೀಲಿಕಟ್ಟಿ, ದಶರಥ ಗುರು, ಸಂದೀಪ್ ಕಾಂಟೆ, ಸುನೀಲ ಸಂಗಮ್, ಪ್ರದೀಪ್ ಜಂಜಿರೆ, ದೇವೆಂದ್ರ ಸೋನಿ, ಭರತ ಕಾಂಬಳೆ, ಸಂಜುಕುಮಾರ ಲಾಧಾ, ತುಕಾರಾಮ ಹಸನ್ಮುಖಿ, ಶಿವಮೂರ್ತಿ ಸುಬಾನೆ, ಅಶೋಕ ಮಾಳಗೆ, ಉದಯ ನಾಯಕ, ಪುಟ್ಟರಾಜ ದೀನೆ, ಸುಭಾಷ ಲಾಧಾ, ಝರೇಪ್ಪಾ ಬೆಲ್ದಾರ್, ಗೋಪಾಲ ಸಾಗರ, ಮೋಹನ ಡಾಂಗೆ, ಬಸವರಾಜ ಅಲಿಯಂಬರ, ರಾಹುಲ್ ಹಾಲೆಪೂರ್ಗಿಕರ್, ಮಲ್ಲಿಕಾರ್ಜುನ ಮೊಳಕೇರೆ, ಬಾಬು ಆಣದೂರ, ಅರ್ಜುನ ಸಾಗರ, ಶರಣು ಫುಲೆ, ಧನರಾಜ ಜ್ಯೋತಿ, ಸುನೀಲ ಮಿತ್ರಾ, ಲೋಕೆಶ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





