ಧಾರವಾಡದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಹಾಗೂ ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜ. 11 ರಂದು ಸಂಜೆ 4ಕ್ಕೆ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸಾವಿತ್ರಿಬಾಯಿ ಫುಲೆ, ಶೇಖ್ ಫಾತಿಮಾ ಹಾಗೂ ರಮಾಬಾಯಿ ಅಂಬೇಡ್ಕರ್ ಜಯಂತಿ ಹಾಗೂ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ, ದಿನದರ್ಶಿಕೆ ಬಿಡುಗಡೆ ನಡೆಯಲಿದೆ.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಸಮಾರಂಭ ಉದ್ಘಾಟಿಸುವರು. ಸಂಸದ ಸಾಗರ್ ಖಂಡ್ರೆ, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ದಿನ ದರ್ಶಿಕೆ, ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರ ಪಾಕೆಟ್ ಡೈರಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ನರಸಾರೆಡ್ಡಿ ಪೊಲೀಸ್ ಪಾಟೀಲ ಅವರು ಲೇಖಕಿ ಶೈಲಜಾ ಜಿ.ಹುಡಗೆ ರಚಿತ ಕೃತಿ ಬಿಡುಗಡೆ ಮಾಡುವರು ಎಂದು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್, ಪರಿಷತ್ ಕಲಬುರಗಿ ವಿಭಾಗೀಯ ಸಂಚಾಲಕ ಕಲಾಲ್ ದೇವಿಪ್ರಸಾದ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಲವಂತರಾವ್ ರಾಠೋಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣದ ಬಸವ ಮಹಾಮನೆ ಟ್ರಸ್ಟ್ ಅಧ್ಯಕ್ಷ ಡಾ.ಸಿದ್ಧರಾಮ ಶರಣರು ಬೆಲ್ದಾಳ, ಧನ್ನೂರದ ಸುವರ್ಣಾ ಮಾತಾಜಿ ಸಾನಿಧ್ಯ ವಹಿಸುವರು. ಸಾವಿತ್ರಿಬಾಯಿ ಫುಲೆ ಅವರ ಕುರಿತು ಅಖಿಲ ಕರ್ನಾಟಕ ಸರ್ಕಾರಿ ಮಹಿಳಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಬಿ.ಜೆ. ಪಾರ್ವತಿ ಸೋನಾರೆ, ಶೇಖ ಫಾತಿಮಾ ಅವರ ಕುರಿತು ಮರಕುಂದಾ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕಿ ದಿಲ್‍ಕಿಸ್ ಫಾತಿಮಾ ಉಪನ್ಯಾಸ ನೀಡಲಿದ್ದಾರೆ.
ಇದನ್ನೂ ಓದಿ : ಬೀದರ್ | ಕೆಡಿಪಿ ಸಭೆಯಲ್ಲೇ ಬಿಜೆಪಿ-ಕಾಂಗ್ರೆಸ್ ಶಾಸಕರ ಜಟಾಪಟಿ: ಹಿನ್ನೆಲೆ ಏನು?
ಧಾರವಾಡದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ರಾಜ್ಯ ಅಧ್ಯಕ್ಷ ಸಂಗಮೇಶ ಡಿ. ಖಿನ್ನಿನಾಯ್ಕರ್, ಉಪಾಧ್ಯಕ್ಷ ವಿಜಯಕುಮಾರ ಎ., ಮಹಾ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಹಿರೇಗೌಡರು, ಕೋಶಾಧ್ಯಕ್ಷ ಡಾ. ಸೋಮಶೇಖರ ಹಲಗೆ ಮುಖ್ಯ ಅತಿಥಿಗಳಾಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಬಿರಾದಾರ, ಪ್ರಮುಖರಾದ ವಿಶ್ವನಾಥ ದೀನೆ, ಡಾ.ಅಬ್ದುಲ್ ಖದೀರ್, ಮಂಜೂರ್ ಇರ್ಫಾನ್, ಮಹಮ್ಮದ್ ಸಲಾವುದ್ದೀನ್ ಫರ್ಹಾನ್, ಶಾಂತಕುಮಾರ ರಾಠೋಡ್, ಸುರೇಶ ಚನಶೆಟ್ಟಿ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಎಚ್.ಜಿ, ಪ್ರೇಮಸಾಗರ ದಾಂಡೇಕರ್, ಶಿವಶಂಕರ ಟೋಕರೆ, ಮದರ್ ಖಾನ್ ಪಠಾಣ, ಡಿ. ಝಾಕೀರ್ ಹುಸೇನ್, ಶಾಮಸುಂದರ ಖಾನಾಪುರಕರ್, ಸಂಜೀವಕುಮಾರ ಸ್ವಾಮಿ, ದಾನಿ ಬಾಬುರಾವ್, ಸಾರಿಕಾ ಗಂಗಾ, ಬಾಲಾಜಿ ಬಿರಾದಾರ, ಡಾ. ಆರ್ಶಿಯಾ ಜಬೀನ್ ಖಾನ್, ದಿಲೀಪಕುಮಾರ ಡೊಂಗರಗೆ, ಗಣಪತಿ ಭಕ್ತಾ, ವಿಜಯಕುಮಾರ ಪಾಟೀಲ, ಶಿವಕುಮಾರ ಸದಾಫುಲೆ, ಸಂಜೀವ ಬಿ. ಸೂರ್ಯವಂಶಿ, ದಯಾನಂದ ಮಮದೆ, ವಿಷ್ಣುಕಾಂತ ರಾಠೋಡ್, ಗೋವಿಂದ ಪೂಜಾರಿ, ವೈಜಿನಾಥ ಸಾಳೆ, ಮಲ್ಲಿಕಾರ್ಜುನ ಟಂಕಸಾಲೆ, ಕುಪೇಂದ್ರ ಜಗಶೆಟ್ಟಿ, ಚನ್ನಬಸಪ್ಪ ಬಿರಾದಾರ, ಲಿಂಗಾನಂದ ಗೌಡ, ಇಂದ್ರಕಾಂತ ದೊಡ್ಡೆ, ಕಸ್ತೂರಿ ಪಟಪಳ್ಳಿ ಅತಿಥಿಗಳಾಗಿ ಪಾಲ್ಗೊಳ್ಳುವರು.





