ಬೀದರ್ ನಗರದ ಬರೀದಶಾಹಿ ಉದ್ಯಾನದಲ್ಲಿರುವ ಹಿರಿಯರ ಯೋಗ ತಂಡ ಹಾಗೂ ಪಾಪನಾಶ ನಗೆಕೂಟದ ವತಿಯಿಂದ ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಯುವ ದಿನದ ಅಂಗವಾಗಿ ಸ್ವಾಮಿ ವಿವೇಕಾನಂದರ 164ನೇ ಜಯಂತಿಯನ್ನು ಆಚರಿಸಲಾಯಿತು.
ನಗೆಕೂಟದ ಹಿರಿಯರಾದ ಸಿದ್ದಪ್ಪ ಕಾವಡಿಮಟ ಅವರು ಮಾತನಾಡಿ, ʼಸ್ವಾಮಿ ವಿವೇಕಾನಂದರ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಯುವಜನತೆಗೆ ಕರೆ ನೀಡಿದರು. ಯುವಕರು ಉನ್ನತ ಗುರಿಯನ್ನು ಹೊಂದಿ, ಅದನ್ನು ಸಾಧಿಸಲು ಕಠಿಣ ಪರಿಶ್ರಮ ಮಾಡಬೇಕುʼ ಎಂದು ಸಲಹೆ ನೀಡಿದರು.
ಹಿರಿಯ ಯೋಗ ಸಾಧಕ ವೀರಭದ್ರಪ್ಪ ಉಪ್ಪಿನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ʼಇಂದಿನ ಯುವಕ-ಯುವತಿಯರು ಪಾಶ್ಚಾತ್ಯ ಶೈಲಿಯ ಆಕರ್ಷಣೆಯಿಂದ ಹೊರಬಂದು, ನಿರ್ದಿಷ್ಟ ಗುರಿಯೊಂದಿಗೆ ಶ್ರಮಪಟ್ಟು ಜೀವನ ರೂಪಿಸಬೇಕು. ವಿವೇಕಾನಂದರ ಚಿಂತನೆ ಇಂದಿನ ಸಮಾಜಕ್ಕೆ ಆದರ್ಶವಾಗಿವೆʼ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜನವರಿ 30, 31 ಹಾಗೂ ಫೆಬ್ರುವರಿ 1ರಂದು ಬೀದರ್‌ನಲ್ಲಿ ನಡೆಯಲಿರುವ 24ನೇ ವಚನ ವಿಜಯೋತ್ಸವದ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

ವಚನ ವಿಜಯೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿದ ಗಂಗಪ್ಪ ಸಾವಳೆ ಅವರು ಮಾತನಾಡಿ, ʼಕಳೆದ 23 ವರ್ಷಗಳಿಂದ ನಿರಂತರವಾಗಿ ಯಶಸ್ವಿಯಾಗಿ ನಡೆಯುತ್ತಿರುವ ವಚನ ವಿಜಯೋತ್ಸವವು ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶಿಷ್ಟ ದಾಖಲೆ ನಿರ್ಮಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕುʼ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಬೀದರ್ | ಮುಗಿಯದ ಸಮುದಾಯ ಮಹಿಳಾ ಶೌಚಾಲಯ ಕಾಮಗಾರಿ : ತೆರೆಯದ ಬಾಗಿಲು!
ಕಾರ್ಯಕ್ರಮದಲ್ಲಿ ಪ್ರಮುಖರಾದ ದಾಸಪ್ಪ ಬೋರಗುಂಡೆ, ನಿಜಲಿಂಗಪ್ಪ ತಗಾರೆ, ಮಲ್ಲಿಕಾರ್ಜುನ ಹಂಡೆ, ರಮೇಶ ಕಪಲಾಪುರ, ವೀರಶೆಟ್ಟಿ, ಈಶ್ವರ ಕನೆರಿ, ಮಹಾಲಿಂಗಪ್ಪ ಬೆಲ್ದಾಳೆ, ಪ್ರಭುಶೆಟ್ಟಿ ಮೂಲಗೆ, ಜಿ.ಬಿ.ವಿಸಾಜಿ, ಚಂದ್ರಪ್ಪ ಬಿರಾದಾರ, ರವಿ ದೇಶಮುಖ, ಬಿ.ಎನ್.ಸ್ವಾಮಿ, ಶೇಷಪ್ಪ, ಚಂದ್ರಕಾಂತ ಪಾಟೀಲ, ಅಶ್ವಿನಿ ಕೋಟಗೆ, ಡಾ.ಸಿ.ಎಸ್. ಮಾಲಿಪಾಟೀಲ್, ನೀಲಮ್ಮ, ಶಂಕರ ಚಿದ್ರಿ, ರಾಚಯ್ಯ ಸ್ವಾಮಿ, ಮೋಹನ ಎಳನೂರ್, ಚೆನ್ನಯ್ಯ ಹಿರೇಮಠ, ಗುಂಡಪ್ಪ, ಹಿಪ್ಪಳಗಾವ ಪಾಟೀಲ್, ರಾಜಪ್ಪ, ಬಂಡೆಪ್ಪ, ಶಿವರಾಜ, ಬಸವರಾಜ್ ಗಾದಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.





