ಮರಕ್ಕೆ ಕಟ್ಟಿಹಾಕಿದ ಐದು ಮೇಕೆಗಳನ್ನು ಎರಡು ತೋಳಗಳು ದಾಳಿ ನಡೆಸಿ ಹರಿದು ಕೊಲೆಗೈದ ಘಟನೆ ಹುಮನಾಬಾದ್ ತಾಲೂಕಿನ ಮೋಳಕೆರಾ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಮೋಳಕೆರಾ ಗ್ರಾಮದ ಭಾಗೀರತಿಬಾಯಿ ಗಂಡ ಅಣೆಪ್ಪ ಜಮಾದಾರ ಎಂಬುವವರು ಜಮೀನಿನಲ್ಲಿ ಕಟ್ಟಿದ ಮೇಕೆಗಳ ಮೇಲೆ ಎರಡು ತೋಳಗಳು ದಾಳಿ ಮಾಡಿದ್ದರಿಂದ 5 ಮೇಕೆ ಸಾವನ್ನಪ್ಪಿವೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಪಶು ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ತಹಶೀಲ್ದಾರ್ ಕಚೇರಿಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಅಂದಾಜು ₹60-70 ಸಾವಿರ ಬೆಲೆ ಬಾಳುವ ಮೇಕೆಗಳನ್ನು ತೋಳಗಳು ತಿಂದು ಹಾಕಿದೆ. ಇದರಿಂದ ರೈತ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ಕುರಿಗಾಹಿಗೆ ಪರಿಹಾರ ಒದಗಿಸಬೇಕೆಂದು ಹೋರಾಟಗಾರ ಅರವಿಂದ ಜೋಗಿರೆ ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಜಿಲ್ಲಾದ್ಯಂತ ಸುಸೂತ್ರವಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ : 956 ವಿದ್ಯಾರ್ಥಿಗಳು ಗೈರು





