ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

Date:

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ್ ಕಳವಳ ವ್ಯಕ್ತಪಡಿಸಿದರು.

ಬೀದರ್ ನಗರದ ಖಾಸಗಿ ಸಭಾಂಗಣದಲ್ಲಿ ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ನಡೆದ ಮೂರು ಗ್ರಂಥಗಳ ಲೋಕಾರ್ಪಣೆ, ಕವಿಗೋಷ್ಠಿ, ಸಂಗೀತ, ಹಾಸ್ಯ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ʼಸಾಹಿತಿ, ಬರಹಗಾರರು ಅಧ್ಯಯನ, ಪುಸ್ತಕ ಪ್ರಕಟಣೆಯ ಜೊತೆಗೆ ಯುವ ಜನಾಂಗವನ್ನು ಕನ್ನಡ ಸಾಹಿತ್ಯ, ಸಂಸ್ಕೃತಿಯತ್ತ ಕರೆತರುವ ಪ್ರಯತ್ನ ಮಾಡಬೇಕಿದೆ. ಕನ್ನಡವನ್ನು ಕಟ್ಟಿದ ನಾಡಿನ ಸಾಹಿತಿ, ಚಿಂತಕರ ನುಡಿಸೇವೆ ಉಳಿಸಿ ಬೆಳೆಸುವ ಹೊಣೆಗಾರಿಕೆ ಇಂದಿನ ಯುವ ಜನಾಂಗದ ಮೇಲಿದೆʼ ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಧ್ಯಕ್ಷತೆ ವಹಿಸಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ್ ಅತಿವಾಳೆ ಮಾತನಾಡಿ, ʼಸಮಾಜ ಬದಲಾವಣೆಯಲ್ಲಿ ಕವಿಗಳ ಪಾತ್ರ ಮಹತ್ವದಾಗಿದೆ. ಸಾಮಾಜಿಕ ಜವಾಬ್ದಾರಿಯಿಂದ ಗಟ್ಟಿ ಕವಿತೆ ರಚಿಸುವ ಮುಖಾಂತರ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕಿದೆʼ ಎಂದರು.

ಸಾಹಿತಿ ಶ್ರೇಯಾ ಮಹೇಂದ್ರಕರ್ ಮಾತನಾಡಿ, ʼಸಾಹಿತ್ಯವು ಸಂಸ್ಕೃತಿಯ ಪ್ರತೀಕವಾಗಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಾಹಿತ್ಯ ಉತ್ತಮ ಸಂದೇಶ ನೀಡಬೇಕುʼ ಎಂದು ಹೇಳಿದರು

ಸಾನಿಧ್ಯ ವಹಿಸಿದ್ದ ಎನ್.ಬಿ.ರೆಡ್ಡಿ ಗುರೂಜಿ ಅವರು ಮೂರು ಗ್ರಂಥಗಳನ್ನು ಲೋಕಾರ್ಪಣೆಗೊಳಿಸಿದರು. ನಿವೃತ್ತ ಪ್ರಾಧ್ಯಾಪಕ ಶಿವಕುಮಾರ್ ಅವರು ‘ಸಂತ ಗೋರ ಕುಂಬಾರ’ ಗ್ರಂಥ ಪರಿಚಯಿಸಿದರು. ಕಲಾವಿದ ಪ್ರಕಾಶ ಕುಲಕರ್ಣಿ ಮುಗನೂರ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕಿರಣ ಮಹಾರಾಜ, ಅಂಕಿತಾ ಮಹೇಶ ಬಚ್ಚಣ್ಣಾ, ನಿಜಲಿಂಗಪ್ಪ ತಗಾರೆ, ಅರವಿಂದ ಕುಲಕರ್ಣಿ, ವೀರಭದ್ರಪ್ಪ ಉಪ್ಪಿನ, ಶ್ರೀಕಾಂತ ಪಾಟೀಲ, ಹಣ್ಮು ಪಾಜಿ, ಸುಬ್ಬಣ್ಣ ಕರಕನಳ್ಳಿ, ರಘುಶಂಖ ಭಾತಂಬ್ರಾ, ಬಿ.ಎಂ.ಶಶಿಕಲಾ, ಕಾಶಿನಾಥ ಪೋಸ್ತೆ, ನಿಜಲಿಂಗ ರಗಟೆ, ಗೌರಮ್ಮ ನಿಟ್ಟೂರ, ಮಾಣಿಕ ನೇಳಗೆ, ರಮೇಶ್ ಬಿರಾದರ, ಗುರುಸಿದ್ದಪ್ಪ ಬಿರಾದರ್ ಸೇರಿದಂತೆ ಅನೇಕರಿಗೆ ಸನ್ಮಾನಿಸಲಾಯಿತು.

ಸಾಹಿತಿಗಳಾದ ಚನ್ನಮ್ಮ ವಲ್ಲೆಪುರೆ, ವಿದ್ಯಾವತಿ ಹಿರೇಮಠ, ಮಹೇಶ್ವರಿ ಹೇಡೆ, ಪ್ರೇಮ ಅವಿನಾಶ, ಎಸ್.ಬಿ.ಕುಚಬಾಳ, ಶಿವಲಿಂಗ ಹೇಡೆ ಸೇರಿದಂತೆ ಅನೇಕರು ಸ್ವರಚಿತ ಕವಿತೆ ವಾಚಿಸಿದರು. ಮಲ್ಲಿಕಾರ್ಜುನ ರಾಂಪುರೆ, ಚಂದ್ರಕಾಂತ್ ಪೂಜಾರಿ, ಗಂಗಮ್ಮ, ಕರಬಸಪ್ಪ, ಹಾವಗಿರಾವ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಇದನ್ನೂ ಓದಿ : ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಪ್ರಮುಖರಾದ ಕಲ್ಯಾಣರಾವ ಮದರಗಾಂವ್, ಶಿವರಾಜ್ ಕಾಳಶೆಟ್ಟಿ, ಎಂ.ಜಿ.ದೇಶಪಾಂಡೆ, ಬಾಬುರಾವ ಗೊಂಡಾ ಸ್ವಾಗತಿಸಿದರು, ಯೋಗೇಂದ್ರ ಯದಲಾಪೂರೆ, ಗಂಗಾಧರ ತಡಕಲ್, ಬಸವರಾಜ ನಿಟ್ಟೂರೆ, ಚಂದ್ರಕಲಾ ಸೇರಿದಂತೆ ಶಿಲ್ಪಾ ಮಜಗೆ ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...

ಔರಾದ್‌ | ರಸ್ತೆ ದುರಸ್ತಿ ಕಾಮಗಾರಿ ಕಳಪೆ : ತನಿಖೆಗೆ ಆಗ್ರಹ

ಔರಾದ್‌ ತಾಲೂಕಿನ ಮಮದಾಪುರ ಗ್ರಾಮದಿಂದ ಅಲ್ಲಾಪುರ ಗ್ರಾಮದ ಮಾರ್ಗವಾಗಿ ಮಹಾರಾಷ್ಟ್ರದ ಕುನಮಾರಪಳ್ಳಿ...