ಬೀದರ್‌ | ಎಸ್‌ಐಆರ್ ಹೆಸರಿನಲ್ಲಿ ಭಾರತ ಇಸ್ರೇಲೀಕರಣ ಮಾಡುವ ಹುನ್ನಾರ : ಪರಕಾಲ ಪ್ರಭಾಕರ

Date:

ಮತದಾರರ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಭಾರತವನ್ನು ಇಸ್ರೇಲೀಕರಣ ಮಾಡುವುದು ಕೇಂದ್ರ ಸರ್ಕಾರದ ಹುನ್ನಾರ ನಡೆಸಲಾಗುತ್ತಿದೆ ಎಂದು ಆರ್ಥಿಕ ತಜ್ಞ, ರಾಜಕೀಯ ವಿಶ್ಲೇಷಕ ಪರಕಾಲ ಪ್ರಭಾಕರ ಹೇಳಿದರು.

ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಮಂಗಳವಾರ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿ ವತಿಯಿಂದ ಆಯೋಜಿಸಿದ ಎಸ್ಐಆರ್ ಕುರಿತು ಚಿಂತನ-ಮಂಥನ ಸಮಾವೇಶದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ʼಭಾರತ ದೇಶದಾದ್ಯಂತ ಎಸ್‌ಐಆರ್‌ ಪ್ರಕ್ರಿಯೆ ಮುಗಿದ ನಂತರ ಹಿಂದೂಗಳಷ್ಟೇ ಮತದಾರರ ಪಟ್ಟಿಯಲ್ಲಿ ಮತದಾರರಾಗಿ ಉಳಿಯಲಿದ್ದಾರೆ. ಇಸ್ರೇಲ್‌ನಲ್ಲಿ ಜ್ವೀಸ್‌ಗಳಿಗಷ್ಟೇ ಮತದಾನದ ಹಕ್ಕಿದೆ. ಹಾಗೇ ಭಾರತದಲ್ಲಿ ಹಿಂದೂಗಳಿಗಷ್ಟೇ ಮತದಾನದ ಹಕ್ಕು ಕೊಡುವುದು ಇದರ ಹಿಂದಿನ ಉದ್ದೇಶ. ಮತದಾರರ ಪಟ್ಟಿಯಲ್ಲಿ ಯಾರ ಹೆಸರುಗಳಿರುತ್ತವೆಯೋ ರಾಜಕೀಯ ಪಕ್ಷಗಳು ಅವರ ಬಗ್ಗೆಯಷ್ಟೇ ಮಾತಾಡುತ್ತವೆ. ಎಸ್‌ಐಆರ್‌ ಬಗ್ಗೆ ರಾಜಕೀಯ ಪಕ್ಷಗಳು ಮಾತಾಡುತ್ತವೆ ಎಂದು ಕುಳಿತರೆ ಏನೂ ಆಗಲ್ಲ. ಮತದಾರರ ಪಟ್ಟಿಯ ಶುದ್ಧೀಕರಣ ನಡೆಸಲಾಗುತ್ತಿದೆ ಎಂಬ ಭಾವನೆ ಮನಸ್ಸಿನಿಂದ ತೆಗೆದು ಹಾಕಿ ಬೀದಿಗಿಳಿಯಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಬೇಕುʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಕಾರ್ಯವೂ ಈ ದೇಶದಲ್ಲಿ ನಡೆಯುತ್ತಿರುವ ರಕ್ತರಹಿತ ರಾಜಕೀಯ ನರಮೇಧವಾಗಿದೆ. ಎಸ್‌ಐಆರ್‌ ಮೂಲಕ ರಾಜಕೀಯ ಮತ್ತು ಸಾಮಾಜಿಕ ಅಸ್ಮಿತೆಯನ್ನು ಗುರಿ ಮಾಡಲಾಗುತ್ತಿದೆ. ಆಳುವ ಪಕ್ಷವೇ ಎಸ್‌ಐಆರ್‌ ಹೆಸರಿನಲ್ಲಿ ರಕ್ತರಹಿತ ರಾಜಕೀಯ ನರಮೇಧಕ್ಕೆ ಮುಂದಾಗಿದೆ. ಎಸ್‌ಐಆರ್‌ನಿಂದ ಜನ ಸಾಯುವುದಿಲ್ಲ. ಆದರೆ, ಅವರ ನಾಗರಿಕತ್ವ ಸತ್ತು ಹೋಗುತ್ತದೆʼ ಎಂದರು.

ʼಎಸ್‌ಐಆರ್‌ ಎರಡನೇ ಹಂತದ ಕೆಲಸ ಮುಗಿದ ನಂತರ ದೇಶದಲ್ಲಿ 6.20 ಕೋಟಿ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ. ಜಗತ್ತಿನ ಶೇ 85 ರಾಷ್ಟ್ರಗಳಲ್ಲಿ ಇದಕ್ಕಿಂತ ಕಡಿಮೆ ಜನಸಂಖ್ಯೆ ಇದೆ. ಎಸ್‌ಐಆರ್‌ ಸಂಪೂರ್ಣ ಮುಗಿದ ನಂತರ ದೇಶದಲ್ಲಿ ಒಟ್ಟು 16.50 ಕೋಟಿ ಜನ ಮತದಾನದಿಂದ ವಂಚಿತರಾಗಲಿದ್ದಾರೆ. ಮತದಾನದ ಹಕ್ಕಿನ ಜೊತೆಗೆ ನಾಗರಿಕತ್ವ ಕೂಡ ಕಳೆದುಕೊಳ್ಳಲಿದ್ದಾರೆ. ಇದಕ್ಕಾಗಿ ದೇಶದಲ್ಲಿ ಒಂದು ಹನಿ ರಕ್ತ ಕೂಡ ಹರಿಯುವುದಿಲ್ಲʼ ಎಂದು ಹೇಳಿದರು.

DSC 8882
ಚಿಂತಕ ಶಿವಸುಂದರ ಮಾತನಾಡಿದರು.

ʼನಾವು ಎಷ್ಟು ದಿನ ಇಂತಹ ಸಭೆ, ಸಮಾರಂಭ, ಚರ್ಚೆಗಳು ನಡೆಸುತ್ತೇವೊ ಎಂಬುದು ಗೊತ್ತಿಲ್ಲ. ಮುಂದಿನ 15ನೇ ಆಗಸ್ಟ್ ಸ್ವಾತಂತ್ರ್ಯ ದಿನಾಚರಣೆ ಇನ್ನೆಷ್ಟು ವರ್ಷಗಳು ಕೆಂಪು ಕೋಟೆ ಮೇಲೆ ರಾಷ್ಟ್ರ ಧ್ವಜ ಹಾರಿಸುತ್ತೇವೊಎಂಬುದು ನನಗೆ ಗೊತ್ತಿಲ್ಲ. ಭವಿಷ್ಯ ಈ ವರ್ಷ ಹಾರಿಸಬಹುದು, ಆದರೆ ಮುಂದಿನ ವರ್ಷ ಧ್ವಜ ಹಾರಿಸಲಾಗುತ್ತದೆ ಎಂದು ನನಗೆ ಹೇಳುವುದಕ್ಕೆ ಆಗುವುದಿಲ್ಲ. ಧ್ವಜ ಹಾರಿಸಲಾಗುವುದು, ಆದರೆ ಅದು ತಿರಂಗಾ ಇರುತ್ತದೆಯೇ? ಎನ್ನುವುದು ನನಗೆ ಗೊತ್ತಿಲ್ಲʼ ಎಂದು ಕಳವಳ ವ್ಯಕ್ತಪಡಿಸಿದರು.

ಅಂಕಣಕಾರ, ಚಿಂತಕ ಶಿವಸುಂದರ್ ಅವರು ಮಾತನಾಡಿ, ʼನಿರಂತರವಾಗಿ ಈ ದೇಶದ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿ ಈಗ ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ ಮೂಲಕ ಕ್ಲೈಮ್ಯಾಕ್ಸ್‌ ಹಂತ ತಲುಪಿದೆ. ಆಳುವ ಪಕ್ಷ ಸಂವಿಧಾನದ ಮೇಲೆ ನಡೆಸುತ್ತಿರುವ ದಾಳಿ ಒಂದು ಪುಸ್ತಕದ ಮೇಲಿನ ದಾಳಿಯಲ್ಲ. ಈ ದೇಶದ ಜನರ ಮೇಲಿನ ದಾಳಿಯಾಗಿದೆʼ ಎಂದು ಹೇಳಿದರು.

ʼಮತಪಟ್ಟಿ ಪರಿಷ್ಕರಣೆಗೆ ಯಾರೂ ವಿರೋಧಿಸುತ್ತಿಲ್ಲ. ಆದರೆ, ಅದಕ್ಕೆ ಸಂಬಂಧಿಸಿದ ಮಾನದಂಡಗಳು ಸೂಕ್ತವಲ್ಲ. ಈ ದೇಶದ ಬಹುಸಂಖ್ಯಾತ ಜನರ ಬಳಿ ಅವರ ಪೂರ್ವಜರು, ಅವರ ದಾಖಲೆಗಳೇ ಇಲ್ಲ. ಹೀಗಿರುವಾಗ ಈ ದೇಶದ ನಾಗರಿಕ ಎನ್ನುವುದಕ್ಕೆ ಯಾವುದಾದರೂ ಪುರಾವೆ ಕೊಡಬೇಕೆಂದು ಷರತ್ತು ವಿಧಿಸಿರುವುದು ದೊಡ್ಡ ಹುನ್ನಾರʼ ಎಂದು ಆರೋಪಿಸಿದರು.

ʼಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಭಾರತದ ನಾಗರಿಕನಲ್ಲ ಎಂದರ್ಥ. ಬದುಕಿ ಸತ್ತಂತೆ. ಈ ದೇಶವನ್ನು ಆಳುತ್ತಿರುವವರು ಸಾವರ್ಕರ್‌ ಸಿದ್ದಂತದ ಮನಃಸ್ಥಿತಿ ಹೊಂದಿದ್ದಾರೆ. ಮೇಲ್ಜಾತಿಯ ಬ್ರಾಹ್ಮಣಶಾಹಿ ಮೌಲ್ಯಗಳು ಹೊಂದಿರುವವರು ಮಾತ್ರ ಈ ದೇಶದ ನಾಗರಿಕರು. ಉಳಿದವರಿಗೆ ದೇಶದ ನಾಗರಿಕರಾಗಲು ಅರ್ಹತೆಯಿಲ್ಲ. ಅಬ್ಬಬ್ಬಾ ಎಂದರೆ ಅವರು ಎರಡನೇ ದರ್ಜೆ ಪ್ರಜೆಗಳಾಗಿ ಬದುಕಬೇಕು ಎಂಬುದು ಎಸ್‌ಐಆರ್‌ ಉದ್ದೇಶ. ದೇಶದ 12 ರಾಜ್ಯಗಳಲ್ಲಿ ಈಗಾಗಲೇ 30 ಕೋಟಿಗಿಂತ ಅಧಿಕ ಜನರನ್ನು ಮತದಾರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ನಡೆದಿದೆʼ ಎಂದು ವಿಶ್ಲೇಷಿಸಿದರು.

DSC 8857

ʼಎಸ್‌ಐಆರ್‌ ಎಂದರೆ ಮೋದಿ ಸರ್ಕಾರವು ದೇಶದ 140 ಕೋಟಿ ಜನರ ಮೇಲೆ ನೀವೆಲ್ಲರೂ ವಿದೇಶಿಯರು ಎಂದು ಹಾಕುವ ಎಫ್‌ಐಆರ್‌ ಆಗಿದೆ. ಎಸ್‌ಐಆರ್‌ ಎನ್‌ಆರ್‌ಸಿಯ ಮೊದಲ ಹಂತವಾಗಿದೆ. ಎಸ್‌ಐಆರ್‌ ಈ ದೇಶದ ಬಡವರ, ಮುಸ್ಲಿಂರ, ಆದಿವಾಸಿಗಳ, ಮಹಿಳೆಯರ ನಾಗರಿಕತೆಯನ್ನು ಕಿತ್ತುಕೊಳ್ಳುವ ಮಹಾ ಹುನ್ನಾರವಾಗಿದೆ. ಎಸ್‌ಐಆರ್‌ ಸಂಪೂರ್ಣವಾಗಿ ರದ್ದಾಗಬೇಕು. ಇಲ್ಲದಿದ್ದರೆ ದೇಶದ ಪ್ರಜಾತಂತ್ರ ರದ್ದಾಗುತ್ತದೆʼ ಎಂದು ತಿಳಿಸಿದರು.

ನಾಗರಿಕ ಹಕ್ಕುಗಳ ಪ್ರತಿಪಾದಕಿ ತಾರಾರಾವ್ ಅವರು ಮಾತನಾಡಿ, ʼನಾವೆಲ್ಲರೂ ಇಲ್ಲಿಯವರೆಗೆ ಮಾತನಾಡಿ ಕುಗ್ಗಿದ್ದೇವೆ. ಈಗ ನಾವು ಎಸ್‌ಐಆರ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿ ಬೀದಿಗಿಳಿಯಬೇಕಿದೆ. ಭಾರತ ಸ್ವಾತಂತ್ರ್ಯಕ್ಕಾಗಿ ನಡೆದ ಚಳವಳಿ ರೀತಿಯಲ್ಲಿ ದೇಶದಲ್ಲಿ ಮತ್ತೊಮ್ಮೆ ಎಸ್‌ಐಆರ್ ವಿರುದ್ಧ ಜನಾಂದೋಲನ ನಡೆಸುವುದು ಅಗತ್ಯವಾಗಿದೆʼ ಎಂದು ಕರೆ ನೀಡಿದರು.

ಇದನ್ನೂ ಓದಿ : ಔರಾದ್‌ | ಕಲುಷಿತ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ : ಆಸ್ಪತ್ರೆಗೆ ಡಿಸಿ, ಶಾಸಕ ಚವ್ಹಾಣ ಭೇಟಿ

ಎಸ್‌ಐಆರ್‌ ವಿರೋಧಿ ಜನಾಂದೋಲನ ಸಮಿತಿಯ ಪ್ರಮುಖರಾದ ಶ್ರೀಕಾಂತ್ ಸ್ವಾಮಿ, ಜಗದೀಶ್ವರ ಬಿರಾದಾರ, ಓಂಪ್ರಕಾಶ್ ರೊಟ್ಟೆ, ವಿನಯಕುಮಾರ್ ಮಾಳಗೆ, ವಿಠಲದಾಸ ಪ್ಯಾಗೆ, ಮುಹಮ್ಮದ್‌ ನಿಜಾಮೋದ್ದಿನ್‌, ಅಬ್ದುಲ್ ಮನ್ನಾನ್ ಸೇಠ್, ಮೌಲಾನಾ ಮೌನಿಶ್ ಕಿರ್ಮಾನಿ, ಬಸವರಾಜ ಮಾಳಗೆ, ಚನ್ನಬಸವಾನಂದ ಸ್ವಾಮೀಜಿ, ಮಂಜುಳಾ ಮೇತುಶೀಲಾ, ಮಲ್ಲಿಗೆ ಸಿರಿಮನೆ, ಮಹೇಶ್ ಗೊರನಾಳಕರ್, ಸಂದೀಪ ಮುಕಿಂದೆ, ಸತ್ಯದೇವಿ ಮಾತಾಜಿ, ಡಾ.ಮಕ್ಸೂದ್ ಚಂದಾ ಸೇರಿದಂತೆ ಅಮೃತರಾವ ಚಿಮಕೋಡೆ, ಕಾಶಿನಾಥ ಚಲ್ವಾ ಸೇರಿದಂತೆ ಅನೇಕರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...