ಹೊಲದಲ್ಲಿ ಆಕಳು ಮೇಯಿಸುತ್ತಿದ್ದಾಗ ಸಿಡಿಲು ಬಡಿದು ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮುತ್ತಂಗಿ ಗ್ರಾಮದ ವೈಜಿನಾಥ ಶೇರಗಾರ್(60) ಮೃತ ರೈತ. ಇವರ ಮಗ ಶ್ರೀನಿವಾಸ ಎಂಬುವವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಭಾನುವಾರ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಮಳೆಯಾಗಿತ್ತು. ಸೋಮವಾರ ಕೂಡ ಸಂಜೆ ಮೋಡ ಕವಿದ ವಾತಾವರಣವಿತ್ತು, ಕೆಲವೆಡೆ ಮಳೆಯಾಗಿದೆ.





