ಹುಲಸೂರ | ಬೇಲೂರ ಉರಿಲಿಂಗಪೆದ್ದಿ ಮಠದಲ್ಲಿ ನಾಳೆಯಿಂದ 2 ದಿನ ಪ್ರಥಮ ಪ್ರಕಾಶಕರ ಸಮ್ಮೇಳನ

Date:

ಹುಲಸೂರ ತಾಲೂಕಿನ ಬೇಲೂರು ಉರಿಲಿಂಗಪೆದ್ದಿ ಮಠದ ಆವರಣದಲ್ಲಿ ನಾಳೆಯಿಂದ (ಫೆ.7, 8) ಎರಡು ದಿನ ಉರಿಲಿಂಗಪೆದ್ದಿ ಮತ್ತು ಕಾಳವ್ವೆ ಉತ್ಸವ ಲಿಂಗೈಕ್ಯ ಪೂಜ್ಯ ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೋತ್ಸವ ಮತ್ತು ಪ್ರಥಮ ಪ್ರಕಾಶಕರ ಸಮ್ಮೇಳನವನ್ನು ನಡೆಯಲಿದೆ ಎಂದು ಮಠದ ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ ತಿಳಿಸಿದರು.

ಕಳೆದ ಹದಿನೆಂಟು ವರ್ಷದಿಂದ ಈ ರೀತಿಯ ಉತ್ಸವ ಮಾಡುತ್ತಿದ್ದು, ಈ ವರ್ಷ ಕಾಳವ್ವೆಯ ಉತ್ಸವ ಅದ್ದೂರಿಯಾಗಿ ನಡೆಯಲಿದೆ. ಸಮಾರಂಭದಲ್ಲಿ ಉರಿಲಿಂಗಪೆದ್ದಿ ಪ್ರಶಸ್ತಿ, ಕಾಳವ್ವೆ ಪ್ರಶಸ್ತಿ, ಕರುನಾಡು ಹಾಗೂ ಧರಿ ಶ್ರೀ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಅಕ್ಷರ ಸಂಸ್ಕೃತಿಯ ಚಿಂತನೆ, ಪ್ರಕಾಶಕ-ಲೇಖಕ-ಓದುಗರು ತ್ರಿವೇಣಿ ಸಂಗಮ ಕುರಿತು ಚಿಂತನೆ ಮಾಡಲು ಪ್ರಕಾಶಕರ ಸಮಸ್ಯೆ ಸವಾಲುಗಳನ್ನು ಬಗ್ಗೆ ಸಂವಾದ ಮಾಡಲಾಗುವುದು. ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರನ್ನಾಗಿ ಹಿರಿಯ ಪುಸ್ತಕೋದ್ಯಮಿ, ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಪ್ರಕಾಶನದ ಪ್ರಕಾಶಕರಾದ ಡಾ.ಬಸವರಾಜ ಜಿ.ಕೊನೇಕ ಅವರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾಳೆ ಬೆಳಗ್ಗೆ 8:30 ಕ್ಕೆ ಬೇಲೂರ ಗ್ರಾಮದ ಡಾ.ಬಿ.ಆರ್.‌ ಅಂಬೇಡ್ಕರ್‌ ಭವನದಿಂದ ಆರಂಭವಾಗುವ ಮೆರವಣಿಗೆಯು ಉರಿಲಿಂಗಪೆದ್ದಿ ಮಠದವರೆಗೆ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಉದ್ಘಾಟನೆ ಸಮಾರಂಭ ನಡೆಯಲಿದೆ. ಎರಡು ದಿನದ ಸಮ್ಮೇಳನದಲ್ಲಿ ವಿವಿಧ ಚಿಂತನ ಗೋಷ್ಠಿಗಳು ಜರುಗಲಿವೆ. ಸಮ್ಮೇಳನದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು, ಚಿಂತಕರು ಪಾಲ್ಗೊಳ್ಳಲಿದ್ದಾರೆ.

ಸರ್ವಾಧ್ಯಕ್ಷರ ಪರಿಚಯ:

ಡಾ.ಬಸವರಾಜ ಕೊನೇಕ ಅವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ 1952 ರಲ್ಲಿ ಜನಿಸಿದರು. ಈ.ಎಸ್.ಭಾವಿಕಟ್ಟಿಯವರ ಪುಸ್ತಕ ಅಂಗಡಿಯಲ್ಲಿ ಕೆಲಸ ಮಾಡಿ 1976ರಲ್ಲಿ ಕಲಬುರಗಿಯಲಗಲಿ ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆ ಪ್ರಾರಂಭಿಸಿದರು. ಸಣ್ಣ ಗೂಡಂಗಡಿಯನ್ನು ಪ್ರಾರಂಭಿಸಿ ಷೋರೂಮ್, ಬುಕ್ ಮಹಲ್‌ವರೆಗೆ 49 ವರ್ಷದಲ್ಲಿ ಬೆಳೆದು ಕಲ್ಯಾಣ ಕರ್ನಾಟಕದ ಪ್ರಥಮ ಪ್ರಕಾಶನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿ ಪುಸ್ತಕ ಪ್ರಕಟ, ಲೇಖಕರನ್ನು ಬೆಳೆಸಿದ್ದಾರೆ. ವರ್ಗ, ವರ್ಣ, ಲಿಂಗ ಭೇದ ಇಲ್ಲದೇ ಜಾತ್ಯತೀತವಾಗಿ ಪ್ರತಿಭಾವಂತ ಲೇಖಕರ ಇಲ್ಲಿಯವರೆಗೆ ಸುಮಾರು 3,700 ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಉತ್ತಮ ಪ್ರಕಾಶಕ ಪ್ರಶಸ್ತಿ, ಬೆಸ್ಟ್ ಪಬ್ಲೀಷರ್ ದಿಲ್ಲಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ಶರಣ ಬಸವ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಲಭಿಸಿವೆ. ಈ ಹಿಂದೆ ಗಡಿನಾಡು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವಕ್ಕೆ ಪಾತ್ರರಾಗಿದ್ದಾರೆ.

ಉರಿಲಿಂಗಪೆದ್ದಿ, ಕಾಳವ್ವೆ ಪ್ರಶಸ್ತಿ,

ಪ್ರತಿ ವರ್ಷದಂತೆ ಈ ವರ್ಷವೂ ಬೇಲೂರಿನ ಉರಿಲಿಂಗಪೆದ್ದಿ ಮಠದ ಶರಣ ಉರಿಲಿಂಗಪೆದ್ದಿ ಮತ್ತು ಶರಣೆ ಕಾಳವ್ವೆ ಉತ್ಸವ, ಲಿಂ.ಪೂಜ್ಯಶ್ರೀ ಶಿವಲಿಂಗೇಶ್ವರ ಶಿವಯೋಗಿಗಳವರ ಪುಣ್ಯ ಸ್ಮರಣೆ ಅಂಗವಾಗಿ ಜರುಗುವ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಉರಿಲಿಂಗಪೆದ್ದಿ, ಕಾಳವ್ವೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

WhatsApp Image 2026 02 06 at 9.58.49 PM
ಡಾ.ವೈ.ಎಚ್.ಭಜಂತ್ರಿ , ಎಂ.ರಾಜೇಶ್ವರಿ ವೆಂಕಟೇಶ, ಪದ್ಮಶ್ರೀ ರಾಗಂ

ಇದನ್ನೂ ಓದಿ : ಬೀದರ್ | ವಸತಿ ಗೃಹದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆತ್ಮಹತ್ಯೆ

ಮಠದ ಪ್ರತಿಷ್ಠಿತ ಉರಿಲಿಂಗಪೆದ್ದಿ ಪ್ರಶಸ್ತಿಗೆ ಧಾರವಾಡದ ಹಿರಿಯ ಸಾಹಿತಿ, ವಿಶ್ರಾಂತ ಪ್ರಾಧ್ಯಾಪಕ ಡಾ.ವೈ.ಎಚ್.ಭಜಂತ್ರಿ ಮತ್ತು ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣದ ಪಲ್ಲವ ಪ್ರಕಾಶನದ ಪ್ರಕಾಶಕಿ ಎಂ.ರಾಜೇಶ್ವರಿ ವೆಂಕಟೇಶ ಅವರಿಗೆ ಮತ್ತು ಬೆಂಗಳೂರಿನ ಸಾಹಿತಿ ಚಿಂತಕಿ ಪದ್ಮಶ್ರೀ ರಾಗಂ ಅವರಿಗೆ ಕಾಳವ್ವೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ಪೀಠಾಧಿಪತಿ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿ ಮತ್ತು ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ 10:45 ಗಂಟೆಯಿಂದ ಶರಣ ಊರಿಲಿಂಗಪೆದ್ದಿ ಮತ್ತು ಶರಣೆ ಕಾಳವ್ವೆ ಉತ್ಸವ ಮತ್ತು ಪ್ರಥಮ ಪ್ರಕಾಶಕರ ಸಮ್ಮೇಳನ ನೇರಪ್ರಸಾರವನ್ನು ʼಈದಿನ.ಕಾಮ್‌ʼ ಯೂಟ್ಯೂಬ್‌ ಹಾಗೂ ಫೇಸ್ಬುಕ್‌ನಲ್ಲಿ ಇರಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...