ಜನಪರ, ಜೀವಪರ ಸಾಹಿತ್ಯ ರಚನೆಯಾಗಲಿ : ಮಾಣಿಕ ನೇಳಗಿ

Date:

ಚಿಟಗುಪ್ಪಾ ಪಟ್ಟಣದಲ್ಲಿ ಇದೇ ಫೆ.21ರಂದು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಭ್ರಮದಿಂದ ಜರುಗಲಿದೆ. ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಹಿರಿಯ ಸಾಹಿತಿ ಮಾಣಿಕ ನೇಳಗಿ ಅವರಿಗೆ ನೀಡಲಾಗಿದೆ. ವೃತ್ತಿಯಲ್ಲಿ ಸರ್ಕಾರಿ ನೌಕರರಾದರೂ, ಅವರ ಪ್ರವೃತ್ತಿ ಬರವಣಿಗೆ. ಹೀಗೆ ವೃತ್ತಿ-ಪ್ರವೃತ್ತಿ ಒಟ್ಟಿಗೆ ಹೆಗಲೇರಿಸಿಕೊಂಡ ಅವರ ಅನುಭವ ದೊಡ್ಡದು. ʼಈದಿನ ಡಾಟ್ ಕಾಮ್ʼದೊಂದಿಗೆ ಹಂಚಿಕೊಂಡಿರುವ ಅವರ ಮಾತುಗಳ ಆಯ್ದ ಭಾಗ ಇಲ್ಲಿದೆ.

ಪ್ರ : ಸಮ್ಮೇಳನದ ಸರ್ವಾಧ್ಯಕ್ಷ ಗೌರವ ಬಗ್ಗೆ ಏನು ಅನಿಸುತ್ತದೆ?

ಉ : ವೃತ್ತಿ ಬದುಕಿನೊಂದಿಗೆ ಎಲೆ ಮರೆ ಕಾಯಿಯಂತೆ ಕವಿತೆ, ಕತೆ ಗೀಚುವ ನನಗೆ ಅನಿರೀಕ್ಷಿತವಾಗಿ ಜನರ ಪ್ರೀತಿ, ಗೌರವದಿಂದ ಸಮ್ಮೇಳನ ಗೌರವ ಸಾಧ್ಯವಾಗಿದೆ. ಈ ಗೌರವ ನನ್ನ ಬದುಕಿನ ಅತ್ಯಂತ ಅವಿಸ್ಮರಣೀಯವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರ : ಸಾಹಿತ್ಯದ ಬಗ್ಗೆ ತಮಗೆ ಆಸಕ್ತಿ ಬೆಳೆದಿದ್ದು ಹೇಗೆ?

ಉ : ನಮ್ಮದು ಧಾರ್ಮಿಕ, ಸಾಂಸ್ಕೃತಿಕ ವಾತಾವರಣದ ಕುಟುಂಬ. ತಂದೆ ಕಲ್ಲಪ್ಪ ಅವರು ಭಜನೆ ಕಲಾವಿದರು. ಹೀಗಾಗಿ ನನಗೆ ಚಿಕ್ಕಂದಿಂದಲೇ ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಲೋಕದಲ್ಲಿ ಆಸಕ್ತಿ ಬೆಳೆಯಿತು. 1990ರಲ್ಲಿ ಪಿಯುಸಿ ಓದುವಾಗ ಸಾಹಿತ್ಯ ಕೃಷಿ ಮಾಡಬೇಕೆಂಬ ಒಲವು ಮೂಡಿತು. ನಾನು ಗೀಚಿದ ಕವಿತೆಗಳಿಗೆ ಜಿಲ್ಲಾ, ರಾಜ್ಯದ ವಿವಿಧ ಪತ್ರಿಕೆಗಳು ಜೀವ ತುಂಬಿದವು. ಅದು ನನ್ನ ಬರವಣಿಗೆಯ ಉತ್ಸಾಹ ಇಮ್ಮಡಿಗೊಳಿಸಿತು.

ಪ್ರ : ತಮ್ಮ ಚೊಚ್ಚಿಲ ಕವನ ಸಂಕಲನ ಯಾವಾಗ ಪ್ರಕಟವಾಯ್ತು?

ಉ : ಸರ್ಕಾರಿ ನೌಕರಿಯ ಕೆಲಸ ಮಧ್ಯ ನನ್ನ ಸಾಹಿತ್ಯ ಕೃತಿಗಳ ಪ್ರಕಟಣೆ ಸಾಧ್ಯವಾಗಲಿಲ್ಲ. 2000ನೇ ಇಸವಿ ನಂತರ ಕೃತಿಗಳ ಪ್ರಕಟಣೆ ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರದ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡೆ. ನನ್ನ ಓದು-ಬರಹ ಅಭಿರುಚಿಗೆ ಮತ್ತಷ್ಟು ಇಂಬು ನೀಡಿತು. 2021ರಲ್ಲಿ ʼಬದಲಾಗೋಣʼ ಎಂಬ ನನ್ನ ಪ್ರಥಮ ಕವನ ಸಂಕಲನ ಪ್ರಕಟವಾಗಿತು. ಅಲ್ಲಿಂದ ನಿರಂತರವಾಗಿ ಬರವಣಿಗೆ ಜೊತೆಗೆ ಪುಸ್ತಕ ಪ್ರಕಟಣೆಯ ಕಡೆಗೆ ಆಸಕ್ತಿ ಬೆಳೆಯಿತು.

ಪ್ರ : ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ತಮ್ಮ ಅಭಿಪ್ರಾಯವೇನು?

ಉ : ಇಂದು ಎಲ್ಲೆಡೆ ಆಂಗ್ಲ ಮಾಧ್ಯಮ ಶಾಲೆಗಳ ಗಾಳಿ ಬೀಸುತ್ತಿದೆ. ಇದರಿಂದ ಕನ್ನಡ ಬೆಳವಣಿಗೆಗೆ ಹಿನ್ನಡೆಯಾಗುತ್ತದೆ. ಇಂಗ್ಲಿಷ್‌ ವ್ಯಾಮೋಹದಿಂದ ಮಕ್ಕಳಲ್ಲಿ ಗ್ರಾಮೀಣ ಸೊಗಡು ಜೊತೆಗೆ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಭಾಷೆ ದೂರವಾದರೆ ನಮ್ಮತನ ಮರೆಯಾಗುವ ಸಾಧ್ಯತೆ ಇದೆ. ಮನೆಯಿಂದಲೇ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸುವ ಕೆಲಸ ಆರಂಭವಾಗಬೇಕು. ಖಾಲಿ ಇರುವ ಕನ್ನಡ ಶಿಕ್ಷಕರ ಭರ್ತಿಗೆ ಕ್ರಮಗೊಳ್ಳಬೇಕು.

ಪ್ರ : ಹೊಸ ಬರಹಗಾರರ ಸಾಹಿತ್ಯ ಹೇಗಿರಬೇಕು?

ಉ : ಹೊಸ ತಲೆಮಾರಿನ ಬರಹಗಾರರಿಗೆ ಸಾಮಾಜಿಕ ಚಿಂತನೆ ದೃಷ್ಟಿಕೋನವಿರಬೇಕು. ಜನಪರ ಸಮಾಜ ಕಟ್ಟುವ ಮನಸ್ಸಿರಬೇಕು. ದೀನ, ದಲಿತರ ಬಗ್ಗೆ ಕಾಳಜಿ, ಭಾವೈಕ್ಯತೆಗೆ ಹೆಚ್ಚು ಒತ್ತು ಕೊಡಬೇಕು. ಎಲ್ಲಿ ಮೌಢ್ಯ, ಶೋಷಣೆ, ಅನ್ಯಾಯ ಇರುತ್ತದೆಯೊ ಅದನ್ನು ತಿವಿದು ಹೇಳುವ ಎದೆಗಾರಿಕೆ ಇರಬೇಕು. ಇಂದಿನ ಆಧುನಿಕ ತಂತ್ರಜ್ಞಾನವನ್ನು ಸಮರ್ಥ ಸದ್ಬಳಕೆಯಿಂದ ಸಾಹಿತ್ಯ ಕೃಷಿಗೆ ಮುಂದಾಗಬೇಕು.

ಪ್ರ : ಚಿಟಗುಪ್ಪಾ ತಾಲೂಕು ಅಭಿವೃದ್ಧಿ ಮುನ್ನೋಟ ಏನು?

ಉ : ಚಿಟಗುಪ್ಪಾ ಈ ಹಿಂದೆ ಹುಮನಾಬಾದ್‌ ತಾಲೂಕಿಗೆ ಒಳಪಟ್ಟಿತು, ಕಳೆದ ಎಂಟು ವರ್ಷಗಳ ಹಿಂದೆ ಪ್ರತ್ಯೇಕ ತಾಲೂಕು ಕೇಂದ್ರವಾಗಿದೆ. ತಾಲೂಕು ಪಂಚಾಯತ್‌ ಕಚೇರಿ, ಪುರಸಭೆ ಸೇರಿದಂತೆ ವಿವಿಧ ಕಚೇರಿಗಳಿವೆ. ಆದರೆ ಸಂಪೂರ್ಣ ತಾಲೂಕು ಕೇಂದ್ರವಾಗಿ ಇನ್ನೂ ಅಭಿವೃದ್ಧಿಯಾಗಬೇಕಿದೆ. ತಾಲೂಕು ಆಡಳಿತದ ಎಲ್ಲ ಕಚೇರಿಗಳ ಆರಂಭವಾಗಬೇಕಿದೆ. ಉನ್ನತ ಶಿಕ್ಷಣಕ್ಕೆ ಸಾಕಷ್ಟು ಅಧ್ಯಯನ ಕೇಂದ್ರ, ತಾಂತ್ರಿಕ ಶಿಕ್ಷಣ ಕಾಲೇಜುಗಳ ಅಗತ್ಯವಿದೆ. ಇನ್ನು ಕೃಷಿ, ಅರಣ್ಯ, ಕೈಗಾರಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿ ಆಗಬೇಕು. ತಾಲೂಕಿನ ಕಲೆ, ಸಾಹಿತ್ಯ, ಸಂಸ್ಕೃತಿ, ಐತಿಹಾಸಿಕ ಸ್ಥಳಗಳ ಉಳಿಸಿ, ಬೆಳೆಸಬೇಕು.

ಸಮ್ಮೇಳನಾಧ್ಯಕ್ಷರ ಪರಿಚಯ :

ಮಾಣಿಕ ನೇಳಗಿ ಅವರು ಬೀದರ್‌ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ತಾಳಮಾಡಗಿ ಗ್ರಾಮದಲ್ಲಿ 22ನೇ ಜುಲೈ 1970ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಪೂರ್ಣಗೊಳಿಸಿ, ಪದವಿ ಶಿಕ್ಷಣವನ್ನು ಹುಮನಾಬಾದ್‌ ಪಟ್ಟಣದಲ್ಲಿ ಮುಗಿಸಿದ್ದಾರೆ. ಇನ್ನು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಎಂಎ ಕನ್ನಡ ಪದವಿ ಪಡೆದಿದ್ದಾರೆ.

ಸಾಹಿತ್ಯಿಕ ಕೃಷಿಯಲ್ಲಿ ಎಲೆಮರೆ ಕಾಯಿಯಂತೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಾಣಿಕ ನೇಳಗಿ ಅವರು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದು ಅನೇಕ ಕಷ್ಟಗಳಲ್ಲಿ ಬೆಳೆದು ಉತ್ತಮ ವ್ಯಾಸಂಗ ಮಾಡುವ ಮೂಲಕ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡವರು. ಸರ್ಕಾರಿ ಕೆಲಸದ ಜೊತೆ ಕನ್ನಡ ಸಾಹಿತ್ಯದ ನಂಟು ಬೆಳೆಸಿಕೊಂಡಿದ್ದಾರೆ.

ಮಾಣಿಕ ನೇಳಗಿ ಅವರು 1999ರಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೇಮಕರಾಗಿ ಕೆಲ ತಿಂಗಳ ಕಾಲ ಗದಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಮರಳಿ ಜಿಲ್ಲೆಗೆ ಬಂದು ವಿವಿಧ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸಿ, ಸದ್ಯ ಔರಾದ್‌ ತಾಲೂಕು ಖಜಾನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2021ರಲ್ಲಿ ʼಬದಲಾಗೋಣʼ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಅವರು, ʼಭರವಸೆʼ, ʼದಾಂಪತ್ಯ ಸವಿʼ, ʼಹರಿತವಾಗಲಿʼ, ʼಧ್ವನಿಯಾಗಿ, ʼಮಾತನಾಡುʼ ಇವರ ಪ್ರಕಟಿತ ಕೃತಿಗಳು. ಇನ್ನು ʼರುಕ್ಮಿಯ ಆತುರʼ ಅವರ ಅಪ್ರಕಟಿತ ಕಥಾಸಂಕಲನ ಮುದ್ರಣ ಹಂತದಲ್ಲಿದೆ. ಮಾಣಿಕ ನೇಳಗಿ ಅವರು ರಾಜ್ಯ, ಜಿಲ್ಲೆಯ ನಾನಾ ಸಭೆ, ಸಮ್ಮೇಳನಗಳಲ್ಲಿ ಭಾಗವಹಿಸಿ ಉಪನ್ಯಾಸ ಮಂಡಿಸಿದ್ದು, ವಿವಿಧ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇವರ ಕವಿತೆಗಳು ದೂರದರ್ಶನ ಚಂದನ ವಾಹಿನಿ, ಆಕಾಶವಾಣಿ ಬಾನುಲಿಯಲ್ಲಿ ಪ್ರಸಾರಗೊಂಡಿವೆ.

ನುಡಿ ಜಾತ್ರೆಯ ತೇರು ಎಳೆಯಲು ಚಿಟಗುಪ್ಪಾ ಸಜ್ಜು :

ಬೀದರ್‌ ಜಿಲ್ಲೆಯ ನೂತನ ತಾಲೂಕು ಕೇಂದ್ರ ಚಿಟಗುಪ್ಪ ಪಟ್ಟಣದಲ್ಲಿ ಇದೇ ಫೆ.21ರಂದು ನಡೆಯಲಿರುವ ಚಿಟಗುಪ್ಪ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಾಭಿಮಾನಿಗಳು ಹಗಲಿರುಳು ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ನುಡಿ ಜಾತ್ರೆಯ ತೇರು ಎಳೆಯುವುದಕ್ಕೆ ಪಟ್ಟಣ ಸಜ್ಜಾಗಿದೆ.

ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದವರಾದ ಮಾಣಿಕ ಕಲ್ಲಪ್ಪ ನೇಳಗಿ ಅವರು ವೃತ್ತಿಯಲ್ಲಿ ಖಜಾನಾಧಿಕಾರಿ. ಆದರೆ ಪ್ರವೃತ್ತಿಯಲ್ಲಿ ಅವರು ಸಾಹಿತಿಗಳಾಗಿ ಗುರುತಿಸಿಕೊಂಡಿರುವ ಅವರಿಗೆ ಈ ಬಾರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ಸಿಕ್ಕಿದೆ.

2023 ಹಾಗೂ 2024ರ ನವೆಂಬರ್‌ ತಿಂಗಳಲ್ಲಿ ನಡೆದಿತ್ತು. 2025ರಲ್ಲಿ ಸಮ್ಮೇಳನ ಜರುಗಲಿಲ್ಲ. ಇದೀಗ ನುಡಿ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಸಾಹಿತ್ಯ ಸಮ್ಮೇಳನ ಪ್ರಯುಕ್ತ ಪಟ್ಟಣ ಸಿಂಗಾರಗೊಂಡು ಕನ್ನಡ ನುಡಿ ಹಬ್ಬದ ವಾತಾವರಣ ಉಂಟಾಗಿದೆ. ಪಟ್ಟಣದ ಜೈ ಭವಾನಿ ಕಲ್ಯಾಣ ಮಂಟಪದಲ್ಲಿ ʼನುಡಿ ಹಬ್ಬʼ ಆಚರಣೆ ಭವ್ಯದಿಂದ ನಡೆಯಲಿದ್ದು, ಸಾಹಿತ್ಯಾಭಿಮಾನಿಗಳ ಸ್ವಾಗತಕ್ಕೆ ಸಜ್ಜಾಗಿದೆ.

WhatsApp Image 2026 02 19 at 4.05.30 PM
ಕಸಾಪ ಜಿಲ್ಲಾ, ತಾಲೂಕು ಘಟಕದ ಪದಾಧಿಕಾರಿಗಳು ಸಮ್ಮೇಳನ ಸರ್ವಾಧ್ಯಕ್ಷರಾದ ಮಾಣಿಕ ನೇಳಗಿ ದಂಪತಿಗೆ ಅಧಿಕೃತವಾಗಿ ಆಮಂತ್ರಣ ಪತ್ರ ನೀಡಿ ಆಹ್ವಾನಿಸಿದರು.

ಪಟ್ಟಣದ ಪ್ರಮುಖ ಬೀದಿಗಳು ಕನ್ನಡ ಧ್ವಜ, ಬ್ಯಾನರ್‌ಗಳು ಕಂಗೊಳಿಸುತ್ತಿವೆ. ಸಮ್ಮೇಳನದ ಪ್ರಧಾನ ವೇದಿಕೆಗೆ ಲಿಂ.ಸುಭಾಷ ಐನಾಪುರೆ, ಲಿಂ.ಬಸವರಾಜ ಮಂಗಲಗಿ ಹೆಸರಿನ ಮಂಟಪ ಹಾಗೂ ಮಹಾದ್ವಾರಕ್ಕೆ ವೀರಶೆಟ್ಟಿ ಮುಲ್ಲಾ ಬಗದಲ ಅವರ ಹೆಸರು ಇಡಲಾಗಿದೆ. ಸಮ್ಮೇಳನ ಪ್ರಯುಕ್ತ ಭಾಷಣ, ಪ್ರಬಂಧ ಸ್ಪರ್ಧೆಗಳು ನಡೆದಿದ್ದು, ಸಮ್ಮೇಳನದ ದಿನ ರಂಗೋಲಿ, ಚಿತ್ರಕಲೆ, ಚಿತ್ರ ಪ್ರದರ್ಶನ ನಡೆಲಿವೆ ಎಂದು ಕಸಾಪ ಪದಾಧಿಕಾರಿಗಳು ತಿಳಿಸಿದ್ದಾರೆ.

ಅಂದು ಸರ್ಕಾರಿ ಕನ್ಯಾ ಪ್ರೌಢ ಶಾಲೆ ಆವರಣದಲ್ಲಿ ಬೆಳಗ್ಗೆ 7:30ಕ್ಕೆ ಧ್ವಜಾರೋಹ ಹಾಗೂ ಮೆರವಣಿಗೆಗೆ ಚಾಲನೆ ದೊರೆಯಲಿದೆ. ತಹಸೀಲ್ದಾರ್‌ ಮಂಜುನಾಥ ಪಾಂಚಾಳ, ಮಾಜಿ ಪುರಸಭೆ ಅಧ್ಯಕ್ಷ ದಿಲೀಪಕುಮಾರ ಬಗದಲ್‌, ಬಿಎಸ್‌ಎಸ್‌ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ್‌, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕಸಾಪ ತಾಲೂಕಾಧ್ಯಕ್ಷ ಅನೀಲಕುಮಾರ ಸಿಂಧೆ ನೇತ್ರತ್ವದಲ್ಲಿ ರಾಷ್ಟ್ರಧ್ವಜ, ನಾಡಧ್ವಜ, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬಳಿಕ ಅಲಂಕೃತ ರಥದಲ್ಲಿ ಸರ್ವಾಧ್ಯಕ್ಷರಾದ ಮಾಣಿಕ ನೇಳಗಿ ಹಾಗೂ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆಯು ಬಸವೇಶ್ವರ ವೃತ್ತ, ಗಾಂಧೀಜಿ ವೃತ್ತದ ಮಾರ್ಗವಾಗಿ ಪ್ರಧಾನ ವೇದಿಕೆಗೆ ಸಾಗಲಿದೆ.

ಸಮ್ಮೇಳನ ಉದ್ಘಾಟನೆ :

ಬೆಳಗ್ಗೆ 10:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಗದಗನ ಹಿರಿಯ ಸಾಹಿತಿ ಸಿದ್ದು ಯಾಪಲಪರವಿ ಸಮಾರಂಭದ ಉದ್ಘಾಟಿಸುವರು. ಹುಮನಾಬಾದ್ ಶಾಸಕ‌‌ ಸಿದ್ದಲಿಂಗಪ್ಪಾ ಪಾಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.‌ ಚಿಟಗುಪ್ಪಾ ಹಿರೇಮಠ ಸಂಸ್ಥಾನದ ಗುರುಲಿಂಗ ಶಿವಚಾರ್ಯ ಸಾನಿಧ್ಯ ವಹಿಸುವರು. ಬೀದರ್‌ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ತಿನ ಶಾಸಕರಾದ ಭೀಮರಾವ ಪಾಟೀಲ್‌, ಚಂದ್ರಶೇಖರ ಪಾಟೀಲ್‌ ಹಾಗೂ ಶಶೀಲ್‌ ನಮೋಶಿ ಅವರು ಪುಸ್ತಕ ಬಿಡುಗಡೆ ಮಾಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ನುಡಿ ಹೇಳಲಿದ್ದಾರೆ. ಸಮಾರಂಭದಲ್ಲಿ ಗಣ್ಯರು, ಮುಖಂಡರು, ಕಸಾಪ ಪದಾಧಿಕಾರಿಗಳು ಉಪಸ್ಥಿತರಿರುವರು.

ಮಧ್ಯಾಹ್ನ 1 ಗಂಟೆಗೆ ವಿಶೇಷ ಉಪನ್ಯಾಸ ಗೋಷ್ಠಿ ಪ್ರಾರಂಭಗೊಳ್ಳಲಿದ್ದು, ಪ್ರಾಧ್ಯಾಪಕ ರವೀಂದ್ರ ಗಾರ್ಲೆ ಅವರು ʼಸಮ್ಮೇನಾಧ್ಯಕ್ಷರ ಬದುಕು-ಬರಹʼ ಕುರಿತು ಉಪನ್ಯಾಸ ನೀಡಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ಚಿಟಗುಪ್ಪಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಜಯಕುಮಾರ ಸಿಂಧೆ ವಹಿಸುತ್ತಾರೆ. ಸಾಹಿತಿಗಳು, ಕಸಾಪ ಪದಾಧಿಕಾರಿಗಳು ಗೋಷ್ಠಿಯಲ್ಲಿ ಭಾಗವಹಿಸುತ್ತಾರೆ.

ಸಂಕಿರಣ ಗೋಷ್ಠಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದ್ದು, ʼಕನ್ನಡ ಶಾಲೆಗಳ ಉಳಿವು, ಪಾಲಕರ ಜವಾಬ್ದಾರಿ’ ಎಂಬ ವಿಷಯ ಕುರಿತು ಪ್ರಾಧ್ಯಾಪಕ ರಾಜಕುಮಾರ ಆಲ್ಲೂರೆ ಉಪನ್ಯಾಸ ನೀಡಲಿದ್ದಾರೆ. ಸಾಹಿತಿ ಶೈಲಜಾ ಹುಡಗೆ ಅವರು ʼಜನಪದ ಹಾಗೂ ಮಹಿಳಾ ಸಾಹಿತ್ಯʼ ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾಹಿತಿ ಐ.ಎಸ್.ಶಕೀಲ್‌ ಅವರು ʼಚಿಟಗುಪ್ಪಾ ತಾಲೂಕಿನ ಐತಿಹಾಸಿಕ ಹಿನ್ನೆಲೆʼ ಎಂಬ ವಿಷಯ ಬಗ್ಗೆ ವಿಶೇಷ ಉಪನ್ಯಾಸ ನೀಡುವವರು. ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಆಶಯ ನುಡಿ ನುಡಿಯಲಿದ್ದು, ಮುಖಂಡರು, ಚಿಂತಕರು ಗೋಷ್ಠಿಯಲ್ಲಿ ಗೌರವ ಉಪಸ್ಥಿತಿ ಇರಲಿದ್ದಾರೆ.

ಮಧ್ಯಾಹ್ನ 4ಕ್ಕೆ ನಡೆಯುವ ಕವಿಗೋಷ್ಠಿಯಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಚಿತ್ರಶೇಖರ ಚಿರಳ್ಳಿ ವಹಿಸಲಿದ್ದಾರೆ. ಸಾಹಿತಿ ಬಸವರಾಜ ಬಲ್ಲೂರ ಆಶಯ ನುಡಿ ಹೇಳಲಿದ್ದಾರೆ. 24 ಕವಿಗಳು ತಮ್ಮ ಸ್ವರಚಿತ ಕವಿತೆಯನ್ನು ವಾಚಿಸುತ್ತಾರೆ. ಕವಿಗೋಷ್ಠಿ ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೈದ ಸಾಧಕರಿಗೆ ವಿಶೇಷ ಸನ್ಮಾನ ನಡೆಯಲಿದೆ. ಸಂಜೆ 5.30ಕ್ಕೆ ಬಹಿರಂಗ ಅಧಿವೇಶನ, ಸಂಜೆ 6ಕ್ಕೆ ಸಮಾರೋಪ ಭಾಷಣವನ್ನು ಸಾಹಿತಿ ಎಂ.ಎಸ್.ಮನೋಹರ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ರಾಜಶೇಖರ ಪಾಟೀಲ್‌, ಬಂಡೆಪ್ಪ ಖಾಸೆಂಪುರ, ಮಾಜಿ ಶಾಸಕ ಸುಭಾಷ ಕಲ್ಲೂರ ಭಾಗವಹಿಸಲಿದ್ದಾರೆ.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ʼಐತಿಹಾಸಿಕ ನೆಲವಾದ ಚಿಟಗುಪ್ಪಾ ಪಟ್ಟಣದಲ್ಲಿ ಮೂರನೇ ತಾಲೂಕು ಸಮ್ಮೇಳನವನ್ನು ಅತ್ಯಂತ ಅರ್ಥಪೂರ್ಣ ಹಾಗೂ ಉಲ್ಲಾಸದಿಂದ ನಡೆಸಲಾಗುತ್ತಿದೆ. ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿ, ಭಾಷೆಯ ಚಿಂತನ-ಮಂಥನ ನಡೆಸಲಾಗುವುದ. ಈ ಭಾಗದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡೋಣʼ ಎಂದರು.

ಇದನ್ನೂ ಓದಿ : ಶಿವಾಜಿ ಯಾರು? ಚಿಂತಕ ಗೋವಿಂದ ಪಾನ್ಸರೆ ಪುಸ್ತಕದೊಳಗಿಂದ ಶಿವಾಜಿ ಮಹಾರಾಜರ ಚರಿತ್ರೆ

ʼ2023, 2024ರಲ್ಲಿ ಎರಡು ತಾಲೂಕು ಸಮ್ಮೇಳನಗಳು ಸೇರಿದಂತೆ ಜಿಲ್ಲೆಯಲ್ಲಿ ಅತಿ ಹೆಚ್ಚು ವಲಯ ಸಮ್ಮೇಳನಗಳನ್ನು ನಡೆಸಿದ ಶ್ರೇಯಸ್ಸು ಚಿಟಗುಪ್ಪಾ ತಾಲೂಕಿನ ಕಸಾಪ ತಂಡಕ್ಕಿದೆ. ಇದೀಗ ಮೂರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಹ ಅತ್ಯಂತ ಅರ್ಥಪೂರ್ಣ ಅಷ್ಟೇ ಅದ್ದೂರಿಯಾಗಿ ಯಶಸ್ವಿಯಾಗಲಿದೆ. ಕಸಾಪ ತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕುʼ ಎಂದು ಕಸಾಪ ತಾಲೂಕು ಅನೀಲಕುಮಾರ ಸಿಂಧೆ ವಿನಂತಿಸಿದ್ದಾರೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...