ಬೀದರ್ ಜಿಲ್ಲೆಯ ನೂತನ ಕಮಲನಗರ ತಾಲೂಕು ಪಟ್ಟಣದಲ್ಲಿ ದಿವಾಣಿ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ದಂಡನೀಯ ನ್ಯಾಯಾಲಯ, ಔರಾದ್(ಬಿ) ಸಂಚಾರಿ ನ್ಯಾಯಾಲಯ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಭಾನುವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ʼನೂತನ ತಾಲೂಕು ಕಚೇರಿಯಲ್ಲಿ ಸಂಚಾರಿ ನ್ಯಾಯಾಲಯ ಆರಂಭಗೊಂಡಿರುವುದು ಸ್ಥಳೀಯ ನಾಗರಿಕರಿಗೆ ನ್ಯಾಯ ಸೇವೆಗಳು ತ್ವರಿತವಾಗಿ ಹಾಗೂ ಹತ್ತಿರದಲ್ಲೇ ಲಭ್ಯವಾಗಲು ನೆರವಾಗಲಿದೆ. ಮುಂದಿನ ದಿನಗಳಲ್ಲಿ ಖಾಯಂ ನ್ಯಾಯಾಲಯ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಮಿ ಹಾಗೂ ಅನುದಾನವನ್ನು ಮೀಸಲಿಟ್ಟು, ಶೀಘ್ರದಲ್ಲೇ ಅದರ ಭೂಮಿಪೂಜೆ ನೆರವೇರಿಸಲಾಗುವುದುʼ ಎಂದು ಭರವಸೆ ನೀಡಿದರು.
ʼಈ ಸಂಚಾರಿ ನ್ಯಾಯಾಲಯದ ಪ್ರಾರಂಭವು ಕಮಲನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ನ್ಯಾಯ ವ್ಯವಸ್ಥೆಯನ್ನು ಇನ್ನಷ್ಟು ಸುಲಭವಾಗಿ, ಸಿಗಲು ಮಹತ್ವದ ಹೆಜ್ಜೆಯಾಗಲಿದೆʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ʼಮನರೇಗಾʼ ದುರ್ಬಲಗೊಳಿಸಲು ‘ವಿಬಿ-ಜಿ ರಾಮ್ ಜಿ’ ಮಸೂದೆ ಜಾರಿ : ಸಚಿವ ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವಕುಮಾರ ಹಂಚಾಟೆ ಸೇರಿದಂತೆ ಜಿಲ್ಲೆಯ ಪ್ರಮುಖ ನ್ಯಾಯಾಧೀಶರು, ಔರಾದ್ ತಾಲೂಕು ವಕೀಲ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.





