ಭಾರತೀಯ ಸೇನೆಯ ಅಗ್ನಿಪಥ ಯೋಜನೆಯಡಿ ನೇಮಕಾತಿಗಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಫೆಬ್ರವರಿ 13, 2026 ರಿಂದ ಏಪ್ರಿಲ್ 1, 2026 ರವರೆಗೆ ನಡೆಯಲಿದೆ.
Army Recruiting Office Belagavi ಮತ್ತು Headquarters Recruiting Zone Bengaluru ಅವರ ಸಹಯೋಗದಲ್ಲಿ ನಡೆಯುವ ಈ ನೇಮಕಾತಿಗೆ ಬೆಳಗಾವಿ, ಬೀದರ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಅಭ್ಯರ್ಥಿಗಳು http://www.joinindianarmy.nic.in/ ನಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಲಭ್ಯ ಹುದ್ದೆಗಳು : ಅಗ್ನಿವೀರ ಜನರಲ್ ಡ್ಯೂಟಿ, ಅಗ್ನಿವೀರ ಟೆಕ್ನಿಕಲ್, ಅಗ್ನಿವೀರ ಟ್ರೇಡ್ಸ್‌ಮನ್, ಅಗ್ನಿವೀರ ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್
ಶೈಕ್ಷಣಿಕ ಅರ್ಹತೆ : ಜನರಲ್ ಡ್ಯೂಟಿ / ಟೆಕ್ನಿಕಲ್ / ಟ್ರೇಡ್ಸ್‌ಮನ್ (10ನೇ ಪಾಸ್)ಟ್ರೇಡ್ಸ್‌ಮನ್ ಕೆಲವು ಹುದ್ದೆಗಳಿಗೆ 8ನೇ ಪಾಸ್
ವಯೋಮಿತಿ, ಸಂಪೂರ್ಣ ಅರ್ಹತೆ ಹಾಗೂ ಇತರೆ ವಿವರಗಳಿಗೆ 13-02-2026 ರಂದು Army Recruiting Office Belagavi ಹೊರಡಿಸಿದ ಅಧಿಕೃತ ಅಧಿಸೂಚನೆಯನ್ನು ವೀಕ್ಷಿಸಬಹುದು ಎಂದು ರಿಕ್ರೂಟಿಂಗ್ ನಿರ್ದೇಶಕ ಕರ್ನಲ್ ಎ.ಕೆ.ಉಪಾಧ್ಯಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





