ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸಿ, ರೈತರ ಸಾಲ ಮನ್ನಾ ಮಾಡಿ : ಸರ್ಕಾರಕ್ಕೆ ಬಹಿರಂಗ ಪತ್ರ (ಬಿಎಸ್‌ಎಸ್‌ಕೆ)ಯನ್ನು ಸರ್ಕಾರ ವಹಿಸಿಕೊಂಡು ಪುನರಾರಂಭಿಸುವಂತೆ ಬೀದರ್ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಸಂಬಂಧ ಬೀದರ್ ನಗರದಲ್ಲಿ ರಾಜ್ಯ ಸರ್ಕಾರಕ್ಕೆ ಬಹಿರಂಗ ಪತ್ರ ಬಿಡುಗಡೆ ಮಾಡಿದ ಮೋರ್ಚಾದ ಪದಾಧಿಕಾರಿಗಳು ಬೀದರ ಸಹಕಾರ ಸಕ್ಕರೆ ಕಾರ್ಖಾನೆಯು ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಸುಮಾರು 25 ಸಾವಿರಕ್ಕೂ ಹೆಚ್ಚು ರೈತರು ಷೇರು ಪಡೆದಿದ್ದಾರೆ. ಕಾರ್ಖಾನೆ ಮುಚ್ಚಿರುವುದರಿಂದ ರೈತರು, ಕಾರ್ಮಿಕರು ಹಾಗೂ ಅವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಸುಮಾರು ಸಾವಿರ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆʼ ಎಂದು ಆರೋಪಿಸಲಾಗಿದೆ.
ಕಾರ್ಮಿಕರಿಗೆ ಸುಮಾರು ₹32.99 ಕೋಟಿ ಸಂಬಳ ಬಾಕಿ ಹಾಗೂ ₹2 ಕೋಟಿ ಉಪದಾನ ಹಣ ಪಾವತಿಸಬೇಕಿದೆ. ಕಳೆದ 2024 ಡಿಸೆಂಬರ್‌ನಲ್ಲಿ ನಡೆದ ಸಭೆಯಲ್ಲಿ 2025-26 ಹಂಗಾಮಿನಲ್ಲಿ ಕಾರ್ಖಾನೆ ಪ್ರಾರಂಭಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಅಕ್ಟೋಬರ್ 2025ರಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಮೋರ್ಚಾ ಅಸಮಾಧಾನ ವ್ಯಕ್ತಪಡಿಸಿದರು.
ದೇಶ ಕೃಷಿ ಪ್ರಧಾನವಾಗಿದ್ದರೂ ರೈತರ ಬೆಳೆಗಳಿಗೆ ಸಮರ್ಪಕ ಬೆಲೆ ದೊರೆಯುತ್ತಿಲ್ಲ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನು ತರಲಾಗಿಲ್ಲ. ರೈತರ ಸಾಲಭಾರ ಹಾಗೂ ಆತ್ಮಹತ್ಯೆಗಳ ವಿಚಾರ ಆತಂಕ ಮೂಡಿಸಿದೆ. ಬ್ಯಾಂಕುಗಳು ರೈತರಿಂದ ದಬ್ಬಾಳಿಕೆ ಮೂಲಕ ಸಾಲ ವಸೂಲಿ ಮಾಡುತ್ತಿದ್ದಾರೆʼ ಎಂದು ಆರೋಪಿಸಿದರು.
ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ವಹಿಸಿಕೊಂಡು 2026-27 ಹಂಗಾಮಿನಲ್ಲಿ (ಅ.2026) ಪ್ರಾರಂಭಿಸಲು ಬಜೆಟ್‌ನಲ್ಲಿ ಹಣ ಕಾಯ್ದಿರಿಸುವುದು. ಕರ್ನಾಟಕದ ಎಲ್ಲಾ ರೈತರ ಎಲ್ಲಾ ತರಹದ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಮುಖ ಬೇಡಿಕೆ ಮಂಡಿಸಿದರು.
ಇದನ್ನೂ ಓದಿ : ಬೀದರ | 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ : ನಾಳೆ ಕಚೇರಿ ಉದ್ಘಾಟನೆ, ಸಮ್ಮೇಳನ ವೆಬ್‍ಸೈಟ್ ಅನಾವರಣ
ಸಂಯುಕ್ತ ಕಿಸಾನ್ ಮೋರ್ಚಾದ ಗೌರವಾಧ್ಯಕ್ಷ ಶಿವರಾಯ ಮುದಾಳೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಬಾಬುರಾವ ಹೊನ್ನಾ, ರೈತ ಸಂಘ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಶಾಂತಮ್ಮ ಮೂಲಗೆ ಸೇರಿದಂತೆ ಪ್ರಮುಖರಾದ ನಾಗಶೆಟ್ಟಿ ಲಂಜವಾಡಕರ್, ಬಸವರಾಜ ಅಷ್ಟೂರೆ, ವಿಠಲರೆಡ್ಡಿ, ಅರುಣ ಪಾಟೀಲ್, ವೀರಶೆಟ್ಟಿ ವಟಂಬೆ, ಮಹೇಶ ನಾಡಗೌಡ, ನಜೀರ ಅಹ್ಮದ್, ಎಂ.ಡಿ.ಖಮರ್ ಪಟೇಲ್, ನನ್ನೆಸಾಬ್ ಎಂ.ಡಿ.ಶಫಾಯತ್ ಅಲಿ, ಜಯಶೀಲ ಕುಮಾರ, ಸೂರ್ಯಕಾಂತ, ಕೋಂಡಿಬಾ ಪಾಂಡ್ರೆ ಇದ್ದರು.





