ಬೀದರ್‌ | ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ್ ಯುದ್ದ ವಿಶ್ವಕ್ಕೆ ಮಾದರಿ: ಶಿವರಾಜ ಕುದುರೆ

Date:

ಹೆಣ್ಣು, ಹೊನ್ನು ಮಣ್ಣಿಗಾಗಿ ನಡೆಯದೆ ಸ್ವಾಭಿಮಾನಕ್ಕಾಗಿ ನಡೆದ ಭೀಮಾ ಕೋರೆಗಾಂವ ಯುದ್ದ ವಿಶ್ವಕ್ಕೆ ಮಾದರಿಯಾಗಿದೆ. ಇಂದಿನ ಯುವ ಸಮುದಾಯ ಸ್ವಾಭಿಮಾನದ ಕಿಚ್ಚು ಬೆಳಸಿಕೊಳ್ಳಲು ಭೀಮಾ ಕೋರೆಗಾಂವ ಚರಿತ್ರೆ ಅರಿತುಕೊಳ್ಳಬೇಕು ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಶಿವರಾಜ ಕುದುರೆ ಕರೆ ನೀಡಿದರು

ಬೀದರ್‌ ನಗರದ ಮೈಲೂರನ ವಿಶ್ವ ಶಾಂತಿ ಬುದ್ಧ ಅಭಿವೃದ್ಧಿ ಸಮಿತಿಯಿಂದ ನಡೆದ 206ನೇ ಭೀಮಾ ಕೋರೆಗಾಂವ ವಿಜಯೋತ್ಸವದ ಮೆರವಣಿಗೆಯನ್ನು ತಥಾಗತ್ ಗೌತಮ ಬುದ್ಧ ಜಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಭೀಮಾ ಕೋರೆಗಾಂವ ವಿಜಯೋತ್ಸವದ ಸವಿನೆನಪಿಗಾಗಿ ಮೈಲೂರನಲ್ಲಿ ವಿಶ್ವ ಶಾಂತಿ ಬುದ್ಧ ನಗರ ಮಹಾದ್ವಾರವು ವಿಶ್ವ ಶಾಂತಿ ಬುದ್ಧ ವಿಹಾರ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಸಂಜುಕುಮಾರ ಮೇತ್ರೆ, ಅಧ್ಯಕ್ಷ ರಾಜಕುಮಾರ ಭಾವಿಕಟ್ಟಿ ಜಂಟಿಯಾಗಿ ರಿಬ್ಬನ್‌ ಕತ್ತರಿಸುವ ಮೂಲಕ ಅನಾವರಣಗೊಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭೀಮಾ ಕೋರೆಗಾಂವ ವಿಜಯೋತ್ಸವ ಅಂಗವಾಗಿ ಹಳೆ ಮೈಲೂರ ಅಂಬೇಡ್ಕರ್ ಭವನದಿಂದ ಆರಂಭಗೊಂಡು ಬುದ್ದ ವಿಹಾರ, ಶಾಸ್ತ್ರಿ ನಗರ ಅಂಬೇಡ್ಕರ್ ಭವನ, ಗಾಂಧಿನಗರ ಅಂಬೇಡ್ಕರ್ ವೃತ, ಸಿಎಂಸಿ ಕಾಲೋನಿಯ ಅಂಬೇಡ್ಕರ್ ಭವನದ ಮಾರ್ಗವಾಗಿ ಮರಳಿ ಹಳೆ ಮೈಲೂರ ಅಂಬೇಡ್ಕರ್ ಭವನಕ್ಕೆ ಬಂದು ಕೊನೆಗೊಂಡಿತ್ತು.

ಈ ಸುದ್ದಿ ಓದಿದ್ದೀರಾ? ಬೀದರ್‌ | ನಾಳೆಯಿಂದ ಪೆಟ್ರೋಲ್‌, ಡಿಸೇಲ್‌ ಸಿಗುತ್ತದೆ; ಸುಳ್ಳು ಸುದ್ದಿಗೆ ಕಿವಿಗೊಡಬಾರದು : ಜಿಲ್ಲಾಧಿಕಾರಿ ಗೋವಿಂದರೆಡ್ಡಿ

ಕಾರ್ಯಕ್ರಮದಲ್ಲಿ ವಿಶ್ವ ಶಾಂತಿ ಬುದ್ಧ ವಿಹಾರ ಅಭಿವೃದ್ಧಿ ಸಮಿತಿಯ ಸಲಹೆಗಾರ ಶಂಬುಲಿಂಗ ಕುದರೆ, ಜಗನಾಥ ಬಡಿಗೇರ, ಸಹ ಕಾರ್ಯದರ್ಶಿ ಪ್ರಶಾಂತ ಭಾವಿಕಟ್ಟಿ, ಸದಸ್ಯರಾದ ಆಕಾಶ ಕುದುರೆ, ಸುನೀಲ ನವಲಸಪೂರ, ಮಹೇಶ ಗೋರನಾಳಕರ್, ಸುಜೀತ ವಂಟೆ, ಪ್ರಮುಖರಾದ ಕೋಳಾರ ಗ್ರಾ.ಪಂ ಸದಸ್ಯ ವಿಜಯಕುಮಾರ್ ಭಾವಿಕಟ್ಟಿ, ಸಂತೋಷ ಬ್ಯಾಗಿ, ಗುರು ಕುದುರೆ, ಅಜಯ ಕುದರೆ, ಶಾಲಿವಾನ ಬಡಿಗೇರ, ರಾಹುಲ್ ಹಳ್ಳಿಕರ್, ಅಮರ ವಂಟೆ, ಕಿಟ್ಟು ,ಭಾವಿಕಟ್ಟಿ , ಜಗನಾಥ ಗಾಯಕವಾಡ,ಸಿದ್ದಾರ್ಥ ಕೋಟೆರ್,ಪ್ರಕಾಶ ಭಾವಿಕಟ್ಟಿ, ರಾಹುಲ್ ಕುದರೆ, ಅಶ್ವಿನ್ ಪೂಜಾರಿ ಹಾಗೂ ಭೀಮಾ ಕೋರೆಗಾಂವ ವಿಜಯೋತ್ಸವ ಸಮಿತಿಯ ಅಧ್ಯಕ್ಷ ಬುಧ್ದಾನಂದ ಬಡಿಗೇರ್, ಉಪಾಧ್ಯಕ್ಷ ಈಶ್ವರ ಬಡಿಗೇರ್ ಕಾರ್ಯದರ್ಶಿ ವಿಷ್ಣುಕಾಂತ ಪೂಜಾರಿ, ಖಜಾಂಚಿ ಶಿವಾನಂದ ಕುದುರೆ, ಇನ್ನಿತರರು ಉಪಸ್ಥಿತರಿದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...