ಬಿಜಾಪುರಕ್ಕೆ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಯಾಕೆ ಬೇಡ?

Date:

ಪಿಪಿಪಿ ಮಾದರಿಯು ‘ಸಾರ್ವಜನಿಕದ ಹೆಸರಲ್ಲಿ ಖಾಸಗಿಯ ಹಿತ ಕಾಯುವ’ ಹೊಸ ಮುಖದ ಶೋಷಣಾ ವ್ಯವಸ್ಥೆಯಾಗಿದೆ. ಸರ್ಕಾರಗಳು ಒಂದೊಂದೇ ಸರ್ಕಾರಿ ಸಂಸ್ಥೆಯನ್ನು ಪಿಪಿಪಿ ಹೆಸರಿನಲ್ಲಿ ಖಾಸಗಿಯವರಿಗೆ ಒಪ್ಪಿಸಿ, ಮಧ್ಯದಲ್ಲಿ ಕಮಿಷನ್ ರಾಜಕಾರಣ ಮಾಡಬಯಸುತ್ತವೆ.

ದೀಪಾವಳಿಯ ಶುಭಾಶಯಗಳೊಂದಿಗೆ ಈ ಲೇಖನ ಪ್ರಾರಂಭಿಸುತ್ತೇನೆ. ದೀಪವು ಮನೆಯನ್ನು ಬೆಳಗಿಸುತ್ತದೆ, ಮನಸ್ಸಿಗೆ ಪ್ರಜ್ಞೆ ನೀಡುತ್ತದೆ. ಆದರೆ ಅದೇ ದೀಪ ಬೆಂಕಿಯಾಗಿ ಮಾರ್ಪಟ್ಟರೆ ಪ್ರಕೃತಿಯೇ ಭಸ್ಮವಾಗುತ್ತದೆ. ಮನೆ ಬೆಳಗಬೇಕಾದ ದೀಪ ಬೆಂಕಿಯಾಗುವ ಅಪಾಯವಿದೆ ಎಂಬ ಆತಂಕ ಎದುರಾಗಿದೆ. ಅದು ನಮ್ಮೂರ ಬಿಜಾಪುರದ ಕುರಿತಾದ ಚಿಂತನೆಯಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ‘ಜಿಲ್ಲೆಗೊಂದು ವೈದ್ಯಕೀಯ ಕಾಲೇಜುಗಳು ಸಾರ್ವಜನಿಕ ಹಿತಕ್ಕಾಗಿ ಸರ್ಕಾರಿ ಸ್ವಾಮ್ಯದಲ್ಲಿ ಪ್ರಾರಂಭವಾಗುತ್ತವೆ,’ ಎಂದಾಗ ಇಡೀ ದೇಶದ ಜನತೆ ಸಂತಸಪಟ್ಟರು. ಬಡವರ ಮಕ್ಕಳು ‘ನಾನೂ ಡಾಕ್ಟರ್ ಆಗುತ್ತೇನೆ’ ಎಂಬ ಕನಸು ಕಂಡರು. ‘ಉಚಿತ ಅಥವಾ ಕಡಿಮೆ ವೆಚ್ಚದ ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ’ ಎಂಬ ನಿರೀಕ್ಷೆ ಸಾಮಾನ್ಯರ ಮನದಲ್ಲಿ ಮೂಡಿತು. ಅಂತಹ ಘೋಷಣೆಯೊಂದನ್ನು ನಮ್ಮ ರಾಜ್ಯ ಸರ್ಕಾರವೂ ನೀಡಿತ್ತು.

ನಾನು ವಿಜಾಪುರಿಗನು. “ನನ್ನ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಬರುತ್ತಿದೆ” ಎಂಬ ಸುದ್ದಿಯಿಂದ ನಾನು ಸಹ ಉತ್ಸುಕನಾದೆ. ಆದರೆ ಕೆಲವೇ ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು “ವಿಜಾಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲಾಗುತ್ತದೆ” ಎಂದು ಸದನದಲ್ಲಿ ಘೋಷಿಸಿದರು. ಆಗ ನನ್ನ ಉತ್ಸಾಹ ಆತಂಕಕ್ಕೆ ದೂಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪಿಪಿಪಿ ಮಾದರಿ ಎಂದರೇನು?

PPP (Public–Private Partnership) ಎಂದರೆ ಸಾರ್ವಜನಿಕ–ಖಾಸಗಿ ಭಾಗಿದಾರಿ ಮಾದರಿ. ಅದರ ಅರ್ಥ: ಸರ್ಕಾರ (Public) ಮತ್ತು ಖಾಸಗಿ ಸಂಸ್ಥೆ (Private) ಸೇರಿ ಸಾರ್ವಜನಿಕ ಯೋಜನೆಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವುದು. ಈ ಮಾದರಿಯಲ್ಲಿ ಸರ್ಕಾರ ಭೂಮಿ, ಕಟ್ಟಡ, ಮೂಲಸೌಕರ್ಯ ಒದಗಿಸುತ್ತದೆ; ಖಾಸಗಿಯವರು ಹೊಸ ಉಪಕರಣಗಳು, ನವೀಕರಣ ಮತ್ತು ನಿರ್ವಹಣೆಯನ್ನು ಕೈಗೊಳ್ಳುತ್ತಾರೆ. ಈ ಪಿಪಿಪಿ ಮಾದರಿಯನ್ನು ಕೈಗೆತ್ತಿಕೊಳ್ಳಲು ಈ ಕೆಳಗಿನ ಮೂಲ ಉದ್ದೇಶಗಳಿವೆಯಂದು ಹೇಳುತ್ತದೆ ಸರ್ಕಾರ.
1) ಸರ್ಕಾರದ ಹಣಕಾಸಿನ ಭಾರ ಕಡಿಮೆ ಮಾಡುವುದು.
2) ಖಾಸಗಿ ವಲಯದ ತಂತ್ರಜ್ಞಾನ, ಕಾರ್ಯಕ್ಷಮತೆಯನ್ನು ಬಳಸುವುದು.
3) ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವುದು.

ಆದರೆ, ಪ್ರಾಯೋಗಿಕವಾಗಿ ಈ ಮಾದರಿಯು ‘ಸಾರ್ವಜನಿಕದ ಹೆಸರಲ್ಲಿ ಖಾಸಗಿಯ ಹಿತ ಕಾಯುವ’ ಹೊಸ ಮುಖದ ಶೋಷಣಾ ವ್ಯವಸ್ಥೆಯಾಗಿದೆ. ವಿಜಾಪುರದ ಜಿಲ್ಲಾ ಆಸ್ಪತ್ರೆಯು ಅತ್ಯಂತ ದೊಡ್ಡ ಸರ್ಕಾರಿ ಆಸ್ಪತ್ರೆ. 149 ಎಕರೆ ವ್ಯಾಪ್ತಿಯ, 140 ವರ್ಷಗಳ ಪಾರಂಪರ್ಯವಿರುವ ಸಂಸ್ಥೆ. ಅದಿಂದು ಪಿಪಿಪಿ ಹೆಸರಿನಲ್ಲಿ ಖಾಸಗಿಯವರ ಕೈಗೆ ಹೋಗುವ ಅಪಾಯ ಎದುರಾಗಿದೆ. ಇದು ಸರ್ಕಾರಿ ಸಂಪತ್ತಿನ ಖಾಸಗೀಕರಣದ ನೂತನ ಮುಖ.

ಈ ಲೇಖನ ಓದಿದ್ದೀರಾ?: ಬರ-ನೆರೆ ಪರಿಹಾರ | ಹತ್ತು ವರ್ಷಗಳಲ್ಲಿ ಕರ್ನಾಟಕಕ್ಕೆ ಆದ ನಷ್ಟವೆಷ್ಟು? ಕೇಂದ್ರ ಸರ್ಕಾರ ಕೊಟ್ಟಿದ್ದೆಷ್ಟು?

ಸ್ವಾತಂತ್ರ್ಯ ನಂತರದ ಭಾರತ ಸರ್ಕಾರಗಳು ಬ್ಯಾಂಕ್, ಇನ್ಸುರನ್ಸ್, ವಿಮಾನಯಾನ, ಎನರ್ಜಿ ಸಂಸ್ಥೆಗಳನ್ನು ರಾಷ್ಟ್ರೀಕರಿಸಿದ್ದವು. ಬಡವರ ಹಿತಕ್ಕಾಗಿ, ಶೋಷಣೆಯನ್ನು ತಡೆಗಟ್ಟಲು. ಆದರೆ, ಇಂದಿನ ಸರ್ಕಾರಗಳು ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ. ಒಂದೊಂದೇ ಸರ್ಕಾರಿ ಸಂಸ್ಥೆಯನ್ನು ಪಿಪಿಪಿ ಹೆಸರಿನಲ್ಲಿ ಖಾಸಗಿಯವರಿಗೆ ಒಪ್ಪಿಸಿ, ಮಧ್ಯದಲ್ಲಿ ಕಮಿಷನ್ ರಾಜಕಾರಣ ಮಾಡಬಯಸುತ್ತವೆ. ಇದು ‘ರಾಷ್ಟ್ರ ನಿರ್ಮಾಣದಿಂದ ಸ್ವಾರ್ಥ ನಿರ್ಮಾಣದತ್ತ ಸಾಗುತ್ತಿರುವ ಚಿಂತಾಜನಕ ಬೆಳವಣಿಗೆ’.

ವಿಜಾಪುರದಲ್ಲಿ ಪಿಪಿಪಿ ಮಾದರಿ ಅನಗತ್ಯ ಎಂಬ ಕಾರಣಗಳನ್ನು ತಮ್ಮ ಮುಂದಿಡುತ್ತಿದ್ದೇನೆ.

  1. ವೈದ್ಯಕೀಯ ಕಾಲೇಜಿಗೆ ಬೇಕಾದ ಭೂಮಿ ಮತ್ತು ಆಸ್ಪತ್ರೆ ಈಗಾಗಲೇ ಇದೆ. ವಿಜಾಪುರದ ಜಿಲ್ಲಾ ಆಸ್ಪತ್ರೆ ದೆಹಲಿ ಏಮ್ಸ್‌ಗಿಂತಲೂ ವಿಶಾಲವಾದ 149 ಎಕರೆ ಪ್ರದೇಶದಲ್ಲಿ ನಿರ್ಮಿತವಾಗಿದೆ. ಇದು ಭಾರತದ ಅತಿ ದೊಡ್ಡ ಆಸ್ಪತ್ರೆ ಆವರಣಗಳಲ್ಲಿ ಒಂದಾಗಿರಬಹುದು.
  2. ಆಸ್ಪತ್ರೆಯಲ್ಲಿ ಈಗಾಗಲೇ 626 ಹಾಸಿಗೆಗಳು ಇದ್ದು, ಇತ್ತೀಚೆಗೆ 300 ಹೊಸ ಹಾಸಿಗೆಗಳು ಸೇರಿಸಲಾಗಿದೆ. ಅಂದರೆ ಒಟ್ಟಾರೆ 1,000 ರೋಗಿಗಳನ್ನು ಏಕಕಾಲದಲ್ಲಿ ಚಿಕಿತ್ಸೆ ನೀಡುವ ಸಾಮರ್ಥ್ಯ ಈ ಆಸ್ಪತ್ರೆಗಿದೆ. ಇದು ರಾಜ್ಯದ ಅತಿ ದೊಡ್ಡ ಜಿಲ್ಲಾಸ್ಪತ್ರೆ ಎಂಬ ಖ್ಯಾತಿ ಪಡೆದಿದೆ.
  3. ಇದರಡಿ ಈಗಾಗಲೇ ಪ್ಯಾರಾ ಮೆಡಿಕಲ್ ಕಾಲೇಜು, ನರ್ಸಿಂಗ್ ಡಿಗ್ರಿ ಮತ್ತು ಡಿಪ್ಲೋಮಾ ಕೋರ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ವೈದ್ಯಕೀಯ ಕಾಲೇಜಿನೊಂದಿಗೆ ಸಮನ್ವಯಗೊಳಿಸಬಹುದು.
  4. ಈ ಆಸ್ಪತ್ರೆ ವರ್ಷಕ್ಕೆ ಎರಡು ಲಕ್ಷ ಹೊರರೋಗಿಗಳನ್ನೂ ಮತ್ತು 40 ಸಾವಿರ ಒಳರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ಬಡವರ ನಿಜವಾದ ಸಂಜೀವಿನಿ.
  5. ಈಗಾಗಲೇ ಇಲ್ಲಿ ಸೂಪರ್ ಸ್ಪೆಷಾಲಿಟಿ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಹೃದಯ ಮತ್ತು ಕ್ಯಾನ್ಸರ್ ತಜ್ಞರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಹಾಯಕ್ಕೆ ಸಿಟಿ ಸ್ಕ್ಯಾನ್ ಮತ್ತು ಎಂ.ಆರ್‌.ಐ ಸೌಲಭ್ಯಗಳೂ ಸೇರಿವೆ.
  6. ಡಿ.ಎನ್.ಬಿ (DNB) ಕೋರ್ಸ್‌ಗಳು ಈಗಾಗಲೇ ಇಲ್ಲಿ ನಡೆಯುತ್ತಿವೆ. General Medicine, Pediatrics, Anesthesia, Surgery ಮುಂತಾದ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ಈ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಸಂಸ್ಥೆಗೆ ಕೇವಲ ಹೊಸ ಕಟ್ಟಡವಲ್ಲ, ಹೊಸ ದೃಷ್ಟಿಕೋನ ಬೇಕಾಗಿದೆ. ಸರ್ಕಾರದಿಂದಲೇ ನಿರ್ವಹಿತ ನಿಜವಾದ ಸಾರ್ವಜನಿಕ ವೈದ್ಯಕೀಯ ಕಾಲೇಜು ಇಂದಿನ ಅವಶ್ಯಕತೆ. ಆಗಲೇ ಬಡವರ ದೀನದಲಿತರ ಹಿತ ಕಾಯಬಹುದು. ಬಡವರ ಆಸೆಯನ್ನು ದೀಪದಂತೆ ಬೆಳಗಿಸಲು ಇದು ಅವಶ್ಯಕ. ಆದರೆ, ಖಾಸಗಿ ಸಂಸ್ಥೆಯು ಸರ್ಕಾರದ ಸೌಲಭ್ಯ ಪಡೆದು ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿ, ಮತ್ತು ಸುಸಜ್ಜಿತ ಆಸ್ಪತ್ರೆಯನ್ನು ತನ್ನ ಲಾಭಕ್ಕಾಗಿ ಬಳಿಸಿಕೊಳ್ಳುವುದಿಲ್ಲ ಎನ್ನುವುದು ಯಾವ ಗ್ಯಾರಂಟಿ? ಈಗಾಗಲೇ ಎರಡು ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ವಿಜಾಪುರ ನಗರದಲ್ಲಿವೆ. ಮೂರನೆಯ ವೈದ್ಯಕೀಯ ಕಾಲೇಜು ಮತ್ತೆ ಖಾಸಗಿ ಸಂಸ್ಥೆಗೆ ವಹಿಸಿದರೆ 27 ಲಕ್ಷ ಜನಸಂಖ್ಯೆಯ ವಿಜಾಪುರ ಜಿಲ್ಲೆಯ ಆರೋಗ್ಯದ ಭವಣೆ ನೀಗಲಾರದು. ದಿಪಾವಳಿಯ ಶುಭ ಸಂದರ್ಭದಲ್ಲಿ ಅದೇ ದೀಪ ಬೆಂಕಿಯಾಗಿ ಮಾರ್ಪಡುವ ಪಿಪಿಪಿ ಮಾದರಿಯನ್ನು ತಡೆಯುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ.

ಸಾರ್ವಜನಿಕರ ಅಭಿಪ್ರಾಯಕ್ಕೆ ರಾಜಕೀಯ ನಾಯಕರು ಮನ್ನಣೆ ಕೊಡುವ ಭರವಸೆಯು ಬಿಜಾಪುರಿಗರು ಇಟ್ಟುಕೊಂಡಿದ್ದಾರೆ. ಒಬ್ಬ ಸಚಿವರು ‘ಇದು ಪೂರ್ವ ದಿಕ್ಕು ಎಂದರೆ ಇನ್ನೊಬ್ಬ ಸಚಿವರು ಅಲ್ಲ ಅದು ಪಶ್ಚಿಮ ದಿಕ್ಕು’ ಎನ್ನುವ ವಿರುದ್ಧ ಧೊರಣೆ ಹೊಂದಿರುವ ಬಿಜಾಪುರದ ಸಚಿವದ್ವಯರು ಈ ವಿಷಯದಲ್ಲಿ ಸಮಾನ ಮನಸ್ಕರಾಗಿರುವುದು ಬಿಜಾಪುರಿಗರ ಅಪಾರ ಸಂತಸಕ್ಕೆ ಕಾರಣವಾಗಿದೆ. ಇವರೊಂದಿಗೆ ಹಿರಿಯ ಶಾಸಕರಾದ ನಾಡಗೌಡರು, ಅವರ ಪಕ್ಕದಲ್ಲಿ ಕಿರಿಉರಿನ ಪಡ್ನಾಡಗೌಡರು, ಚಿಕ್ಕ ವಯಸ್ಸಿನ ಚೊಕ್ಕ ನಾಯಕನೆಂದು ಪ್ರಸಿದ್ಧಿಗೆ ಬರುತ್ತಿರುವ ಸಿಂದಗಿ ಶಾಸಕರು ಕೈಜೋಡಿಸಬೇಕಾಗಿದೆ.

ಮೇಲಾಗಿ ವಿಜಾಪುರದ ನಗರ ಶಾಸಕರು, ಪಕ್ಷಾತೀತವಾಗಿ ತಮ್ಮ ನಗರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜನ್ನು ತಂದರೆ ಸುಂದರ ನಗರವಾಗಿ ಮಾರ್ಪಡುತ್ತಿರುವ ವಿಜಾಪುರದ ಗರಿಮೆಗೆ ಕಿರೀಟ ಪ್ರಾಯವಾಗಲಿದೆ. ಇವರೊಂದಿಗೆ ದೇ. ಹಿಪ್ಪರಿಗಿಯ ಶಾಸಕ ಅಳಿಯ ರಾಜುಗೌಡ ಕೈ ಜೋಡಿಸಿದರೆ ನನ್ನಂತಹವರ ಸಂತಸಕ್ಕೆ ಪಾರವೆ ಇರದು.

ಇವರ ಜೋತೆ ಓದುಗರಾದ ನೀವು, ಪಾಲುದಾರರಾಗಲಿರುವ ವಿಜಾಪುರಿಗರು ಸರ್ಕಾರವನ್ನು ಒತ್ತಾಯಿಸಲು ತಯಾರಾಗಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...