ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು, ಕಂಪಲಾಪುರ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಭಾರತೀಯ ಸೇನೆ ಮದ್ರಾಸ್ ರೆಜಿಮೆಂಟ್ ಯೋಧರ ರ್ಯಾಲಿ ಮೈಸೂರಿನ ಮಾರ್ಗವಾಗಿ ಮಡಿಕೇರಿಗೆ ತೆರಳುವ ಮಾರ್ಗ ಮಧ್ಯೆ ಶಿವು ಸೈನಿಕ ಅಕಾಡೆಮಿಯವರು ಸ್ವಾಗತಿಸಿದ್ದಾರೆ.
ದೇಶ ಕಾಯುವ ಯೋಧರ ಹಿತ ಕಾಯುವ ಸಲುವಾಗಿ, ನಿವೃತ್ತ ಜೀವನದಲ್ಲಿ ಎದುರಾಗುವ ಏರುಪೇರುಗಳ ಸಮಸ್ಯೆ ಆಲಿಸಲು ಹೊರಡುವ ಯೋಧರ ತಂಡ ತಮಿಳುನಾಡಿನ ಊಟಿಯಿಂದ ಹೊರಟು ಮೈಸೂರು ಮಾರ್ಗವಾಗಿ ಮಡಿಕೇರಿ ತಲುಪಿದೆ.
ಮಾರ್ಗ ಮಧ್ಯೆ ನಿವೃತ್ತ ಯೋಧರ ಭೇಟಿ ಮಾಡುತ್ತಾ, ಯೋಗಕ್ಷೇಮ ವಿಚಾರಿಸಿ. ನಿವೃತ್ತ ಜೀವನದಲ್ಲಿ ಏನಾದರೂ ತೊಡಕಿದ್ದರೆ, ಸೇನೆಯ ನಿವೃತ್ತಿ ವೇತನ ಇತ್ಯಾದಿ ಸಂಬಂಧ, ಆರೋಗ್ಯ ಇನ್ನಿತರ ಸೇವೆಗಳ ಕುರಿತಾಗಿ ಮಾಹಿತಿ ಕಲೆ ಹಾಕುತ್ತ ವರದಿ ಮಾಡಲು ರ್ಯಾಲಿ ಕೈಗೊಂಡಿರುತ್ತಾರೆ.

ಮಡಿಕೇರಿಯಿಂದ ಮಂಗಳೂರು ಮಾರ್ಗವಾಗಿ, ಹಾಸನದಿಂದ ಮಂಡ್ಯ ತೆರಳಿ ಅಲ್ಲಿಂದ ತಮ್ಮ ಕೇಂದ್ರ ಸ್ಥಾನಕ್ಕೆ ತಲುಪಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ. ರ್ಯಾಲಿ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಮನೀಶ್, ಪ್ರಕಾಶ್ ಹಾಗು ಶ್ರೀನಿವಾಸ್ ನೇತೃತ್ವದ 11 ಜನ ಯೋಧರ ತಂಡವನ್ನು ಆತ್ಮೀಯವಾಗಿ ಸ್ವಾಗತಿಸಿದ ಶಿವು ಸೈನಿಕ ಅಕಾಡೆಮಿ ಸದಸ್ಯರು ಗೌರವಿಸಿ ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ಯೋಧರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ದೇಶ, ಗಡಿ, ಸೈನಿಕರ ಕುರಿತಾಗಿ ಮಹತ್ವದ ವಿಚಾರಗಳನ್ನು ಹಂಚಿಕೊಂಡರು. ದೇಶದ ರಕ್ಷಣೆಗೆ ಯೋಧರಾಗುವಂತೆ ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹೆಚ್ ಡಿ ಕೋಟೆ | ‘ಕಬಿನಿ ಉಳಿಸಿ, ಅರಣ್ಯ ರಕ್ಷಿಸಿ’ ಅನಿರ್ದಿಷ್ಟಾವಧಿ ಧರಣಿಗೆ ಜಿಲ್ಲಾಧಿಕಾರಿ ಸ್ಪಂದನೆ; ಕಾಲಾವಕಾಶ ಕೋರಿಕೆ
ರ್ಯಾಲಿ ವೇಳೆ ಸ್ಥಳೀಯವಾಗಿ ಮಾಜಿ ಯೋಧರಾದ ಶಿವು, ಮಹಾದೇವ್, ಸಂದೇಶ್, ಗಣೇಶ್, ರೇವಣ್ಣ, ಭರತ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.





