ಚಿಂತಾಮಣಿ : ದ್ವಿಚಕ್ರ ವಾಹನಕ್ಕೆ ಅಡ್ಡಗಟ್ಟಿ ಮೊಬೈಲ್ ನಗದು ಹಣ ದೋಚಿದ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಪಲ್ಲಿ ಸಮೀಪ ರಾತ್ರಿ ಸುಮಾರು 09:00 ಗಂಟೆ ಸಮಯದಲ್ಲಿ ನಡೆದಿದೆ.
ಚಿಂತಾಮಣಿ ತಾಲ್ಲೂಕಿನ ಉಪ್ಪರಪೇಟೆ ಗ್ರಾಮದವರಾದ ರಿಹಾನ್ ಮತ್ತು ಉವೆಸ್ ಇವರಿಬ್ಬರು ಚಿಂತಾಮಣಿ ನಗರದ ವೆಂಕಟಗಿರಿ ಕೋಟೆಯಲ್ಲಿ ಚೀಟಿ ಹಣವನ್ನು ತೆಗೆದುಕೊಂಡು ತಮ್ಮ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಕೋನಪಲ್ಲಿ ಸಮೀಪದ ಮೋರಿ ಬಳಿ ನಾಲ್ಕು ಜನ ಖದೀಮರು ದ್ವಿಚಕ್ರ ವಾಹನಕ್ಕೆ ಅಡ್ಡಗಟ್ಟಿ ಎರಡು ಮೊಬೈಲ್ ಹಾಗೂ ಏಳು ಸಾವಿರ ಹಣ,ಬೆಳ್ಳಿಯ ಚೈನು ಕಿತ್ತುಕೊಂಡು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಘಟನೆಯ ವಿಷಯ 112 ಪೊಲೀಸರಿಗೆ ಮುಟ್ಟಿಸಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಾಂತರ ಠಾಣೆಗೆ ದೂರು ನೀಡಿ ಎಂದು ಹೇಳಿ ವಾಪಸ್ ಹೋಗಿದ್ದಾರೆ.
ಇದನ್ನು ಓದಿದ್ದೀರಾ..? ಜೈಲಿನಲ್ಲಿ ಮೊದಲನೇ ದಿನ ಕಳೆದ ರಾಜೀವ್ ಗೌಡ
ಇಂತಹ ಘಟನೆಗಳು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಬಹಳಷ್ಟು ಕಂಡು ಬರುತ್ತಿದ್ದು ಪೊಲೀಸರು ಕೂಡಲೇ ಇಂತಹ ಘಟನೆಗಳು ಮುಂದುವರಿಯದಂತೆ ಬ್ರೇಕ್ ಹಾಕಬೇಕಾಗಿದೆ





