ಚಿಂತಾಮಣಿ:ಶಬರಿ ಜನಸೇವಾ ಟ್ರಸ್ಟ್ ವತಿಯಿಂದ ಡಾ!ಪುನೀತ್ ರಾಜಕುಮಾರ್ ರವರ 51 ನೇ ಹುಟ್ಟುಹಬ್ಬದ ಪ್ರಯುಕ್ತ ಚಿಂತಾಮಣಿ ನಗರದ ವಿದ್ಯಾ ಗಣಪತಿ ಮಂದಿರದಲ್ಲಿ ಭಾರತ ರೆಡ್ ಕ್ರಾಸ್ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಹಲವು ಯುವಕರು ನಾ ಮುಂದು ತಾ ಮುಂದು ಎಂದು ರಕ್ತದಾನ ಮಾಡಲು ಮುಂದಾದರು, ಇಂದು ನಡೆದ ರಕ್ತದಾನ ಶಿಬಿರದಲ್ಲಿ 65 ಯೂನಿಟ್ ರಕ್ತ ಸಂಗ್ರಹವಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾರಾಯಣರೆಡ್ಡಿ ರವರು ಮಾತನಾಡಿ ಸುಮಾರು ವರ್ಷಗಳಿಂದ ಶಬರಿ ಟ್ರಸ್ಟ್ ವತಿಯಿಂದ ವಿವಿಧ ಭಾಗಗಳಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳು ಮಾಡುತ್ತಿದ್ದು ಪುನೀತ್ ರಾಜಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಶಬರಿ ಜನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಬಡಗವಾರಹಳ್ಳಿ ಶಬರೀಶ್ ಮಾತನಾಡಿ ಅಪ್ಪು ಎಂದೇ ಜನಪ್ರಿಯರಾಗಿರುವ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬವು ಕರ್ನಾಟಕದಾದ್ಯಂತ ಅಭಿಮಾನಿಗಳಿಗೆ ಒಂದು ಹಬ್ಬದ ದಿನವಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಮಸೀದಿ ದರ್ಶನ ಕಾರ್ಯಕ್ರಮದ ಮೂಲಕ ಧರ್ಮ ಸೌಹಾರ್ದ ಸಂದೇಶ
ಈ ಸಂದರ್ಭದಲ್ಲಿ ಉಮಾಪತಿ ಮಂಜುನಾಥ್,ಮುಕ್ತೇಶ್,ಗಾಯತ್ರಿ, ಗಿರೀಶ್,ವಿಶ್ವನಾಥ್,ಸುದರ್ಶನ್,ಶಿವಾರೆಡ್ಡಿ, ಕೃಷ್ಣ,ಅಲಂಗಿರಿ,ಸಂತೋಷ,ಸಂದೀಪ್,ಮಂಜುನಾಥ್, ಸೇರಿದಂತೆ ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.





