ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಬೆಂಗಳೂರು ಕಲಿ-ಕಲಿಸು ಯೋಜನೆಯ ಭಾಗವಾಗಿ ಮಕ್ಕಳಿಗೆ ನೀಲಗಾರರ ಸಮುದಾಯದ ಕಲಾ ಅಂತರ್ಗತ ಕಲಿಕೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಚಿಕ್ಕ ಹುಣಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಸಂಗ್ರಹಿಸಿದ ಕಥೆಗಳ ಆಧಾರಿತ ‘ಚಿಕ್ಕ ಹುಣಸೂರಿನ ಚಿಲುಮೆಗಳು’ ಪುಸ್ತಕ ಬಿಡುಗಡೆ ಮಾಡಿದರು.
‘ಜಾನಪದ ಜಾತ್ರೆ’ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಪಿ. ಮಹದೇವ್ ಉದ್ಘಾಟಿಸಿದರು. ಶಾಲೆಯ ಮಕ್ಕಳು ಪಟ್ಟಣ ವ್ಯಾಪ್ತಿಗೆ ಒಳಪಡುವ ಬೀದಿಗಳಲ್ಲಿ ಹಾಗೂ ಮುಖ್ಯ ರಸ್ತೆಯ ವೃತ್ತಗಳಲ್ಲಿ ಕಂಸಾಳೆ, ಕೋಲಾಟ, ಮಾರಿ ಕುಣಿತ, ಪೂಜಾ ಕುಣಿತಗಳ ಪ್ರದರ್ಶನ ನೀಡುತ್ತಾ ಸಾರ್ವಜನಿಕರ ಗಮನ ಸೆಳೆದರು.
ಈ ವಿಶೇಷ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ಸಾಂಸ್ಕೃತಿಕ ನಗರಿ ಮೈಸೂರಿನ ನಿರೀಕ್ಷೆಗಳೇನು? ಕಳೆದ ಬಜೆಟ್ ಕಡತದಲ್ಲೇ ಉಳಿಯಿತೇ?

ಶಿಬಿರಾರ್ಥಿಗಳು ತಾವು ಕಲಿತ ಜಾನಪದ ಕಲಾ ಪ್ರಕಾರಗಳಾದ ಬೀಸು ಕಂಸಾಳೆ, ಕೋಲಾಟ , ಮಾರಿ ಕುಣಿತ, ಪೂಜಾ ಕುಣಿತ ನೃತ್ಯಗಳನ್ನು ಮತ್ತು ಮಂಟೇಸ್ವಾಮಿ ಮಹಾಕಾವ್ಯದ ಕೆಂಪಚಾರಿ ಸಾಲಿನ ಕಿರು ನಾಟಕವನ್ನು ಪ್ರದರ್ಶಿಸುವುದರ ಜೊತೆಗೆ ನೀಲಗಾರರ ಹಾಡುಗಳನ್ನು ಹಾಡಿ ಪೋಷಕರ ಮತ್ತು ಗಣ್ಯರ ಮೆಚ್ಚುಗೆ ಗಳಿಸಿದರು.
ಈ ವಿಶೇಷ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ಕೊಡಗಿನ ಆದಿವಾಸಿ, ದಲಿತ, ಶೋಷಿತರ ಬದುಕು ಹಸನಾಗಲಿಲ್ಲ; ನಿರೀಕ್ಷೆ ತಪ್ಪಲಿಲ್ಲ!

ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ಶಿಕ್ಷಕ ಕರಿಯಪ್ಪ, ಹಿರಿಯ ರಂಗಕರ್ಮಿ ಆನಂದ್ ಶೆಟ್ಟಿ, ಪ್ರಾಧ್ಯಾಪಕಿ ಡಾ. ತ್ರಿವೇಣಿ, ಬಿ.ಆರ್.ಸಿ. ಹೇಮಲತಾ, ಶಿಬಿರ ನಿರ್ದೇಶಕ ಹುಣಸೂರು ಅರ್ಜುನ್, ಈ.ಸಿ.ಓ. ಸುನೀಲ್ ಕುಮಾರ್ ಬಿ.ಎ.ಆರ್.ಟಿ. ತ್ರಿನೇಶ್, ಸಿ.ಆರ್.ಪಿ. ಮಮತ, ಟ್ಯಾಲೆಂಟ್ ವಿದ್ಯಾಸಂಸ್ಥೆಯ ನವೀನ್ ರೈ, ಶಾಲೆಯ ಶಿಕ್ಷಕ ವೃಂದ, ಎಸ್ಡಿಎಂಸಿ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಹರಿಣಾಕ್ಷಿ, ಸದಸ್ಯರುಗಳು, ಪೋಷಕರು, ವಿದ್ಯಾರ್ಥಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳು ಇದ್ದರು.





