ಪುಸ್ತಕ ಅವಲೋಕನ | ಸಮತೆಯ ಹಾಡು ಹಾಡಿದ “ತೊಗಲಯೋಗಿ”

Date:

ಜಾತಿ-ತಾರತಮ್ಯ ಈ ಸಮಾಜದ ಕಾಯಿಲೆ ಇದು ನೆನ್ನೆ ಮೊನ್ನೆಯದಲ್ಲ ಬದಲಾಗಿ ಬಹಳ ಹಿಂದಿನಿಂದಲೂ ಬಂದಿರುವ ಕ್ರೌರ್ಯ. ಈ ಹೊತ್ತಿನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಬದಲಾಗಿರುವ ಹಾಗೆ ಕಂಡರೂ ದಲಿತರ ಶೋಷಣೆ ಮುಂಚಿನಷ್ಟೇನೂ ಇಲ್ಲ ಎನ್ನುವುದು ಎಷ್ಟು ಗಮನಾರ್ಹ ಸಂಗತಿಯೋ ಮತ್ತದು ವರ್ತಮಾನದ ಆಧುನಿಕ ಯುಗದಲ್ಲಿ ಹೊಸ ಹೊಸ ಆಯಾಮಗಳನ್ನು ಪಡೆದುಕೊಂಡಿದೆ ಎಂಬುದು ಕೂಡ ಅಷ್ಟೇ ಸೂಕ್ಷ್ಮವಾಗಿ ಗಮನಿಸಬೇಕಾದ ಸಂಗತಿ. ಆ ನಿಟ್ಟಿನಲ್ಲಿ ಶಿವಣ್ಣ ತಿಮ್ಮಲಾಪುರ ರವರು ಇವತ್ತಿನ ಸಾಮಾಜಿಕ ರಾಜಕೀಯ ತಲ್ಲಣಗಳ ಮಧ್ಯೆ ತಮ್ಮ ಪೂರ್ವಜರ ಗಾಢವಾದ ಸಂವೇದನೆಗಳ ಚಹರೆಯನ್ನು ಮೆಲುಕು ಹಾಕುತ್ತಾ, ಅವನ್ನು ತಮ್ಮೊಳಗಿನ ಇಂದಿನ ಸವಾಲುಗಳೊಂದಿಗೆ ಸಮೀಕರಿಸಿ ಬರೆದ ಈ ಕವಿತೆಗಳು ಆಧುನಿಕ ದಲಿತ ಹೋರಾಟಕ್ಕೆ ಒಂದು ರೀತಿಯ ಫ್ಲ್ಯಾಶ್ ಬ್ಯಾಕ್ ನಂತಿವೆ.

“ತೊಗಲ-ಯೋಗಿ” ಎಂಬ ಶೀರ್ಷಿಕೆಯೇ ಓದುಗರನ್ನು ಸೆಳೆಯುತ್ತದೆ. ಉಳುವ ಕಾಯಕವ ಧ್ಯಾನವೆಂದು ಪರಿಗಣಿಸಿದ ರಸ ಋಷಿ ರೈತನನ್ನು ʼನೇಗಿಲ ಯೋಗಿʼ ಎಂದರು. ಅದರಂತೆ ಚಮ್ಮಾರನ ಕಾಯಕವೂ ಸಹ ಧ್ಯಾನಸ್ಥ ರೀತಿಯದ್ದೆ ಎಂದು ಹೇಳುವ ಕವಿ ಆತನಿಗೆ ತೊಗಲಯೋಗಿ ಎಂಬ ಪುರಸ್ಕಾರ ನೀಡಿ, ಆ ಕಾಯಕದ ಘನತೆಯನ್ನು ಹೆಚ್ಚಿಸಿದ್ದಾರೆ. ಮತ್ತಿದು ಇಲ್ಲಿನ ಬಹಳಷ್ಟು ಕವಿತೆಗಳಲ್ಲಿ ನಿರೂಪಿತವಾಗಿದೆ ಕೂಡ. 

ಮೂವತ್ತೖದು  ಕವಿತೆಗಳಿರುವ ಈ ಸಂಕಲನದ ಭಾಷೆ, ವಿಷಯ ವಸ್ತು, ಮತ್ತದನ್ನು ಕಟ್ಟಿಕೊಡುವ ಬಗೆ ಚೆನ್ನಾಗಿದ್ದು ಕೆಲವು ಕವಿತೆಗಳಂತೂ ಎದೆಗಿಳಿಯುತ್ತವೆ. ಹಾಗೆ ನೋಡುವುದಾದರೆ, ಮೊದಲ ಕವಿತೆಯಲ್ಲಿ ಬರುವ “ಹಳಸಿದ ಅನ್ನ ನೀಡಿದವರ ಮಕ್ಕಳಿಗೆ ಪ್ರತಿಯಾಗಿ ನೀಡುತ್ತಿದ್ದೇವೆ ಇಂದು ಅನ್ನ ಅರಿವೇ ಅಕ್ಷರ”ಈ ಸಾಲುಗಳಿಗೆ ಎಷ್ಟು ಅರ್ಥಗಳಿವೆ… ಇಡೀ ಕವಿತೆಯಲ್ಲಿ ಈ ಸಾಲುಗಳು ಹೆಚ್ಚು ಧನಿಸುತ್ತವೆ. ಮುಂದುವರೆದು, “ಪರವಶನಾಗಿ ಅಣ್ಣತಲೆಯ ಮೇಲೆ ಹೊತ್ತು ದೇವರ ಪಾದಕೆಗಳಿವು ಶರಣು ಶರಣಾರ್ಥಿ ಎಂದಿತು ಚರಿತ್ರೆ..! ಈ ಸಾಲುಗಳು ತೊಗಲಯೋಗಿ ಎಂಬ ನಾಮಾಂಕಿತಕ್ಕೆ ಹೇಳಿ ಬರೆಸಿದಂತಿವೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜಾಡಮಾಲಿ ಕವಿತೆಯಲ್ಲಿ ದಲಿತರ ಕಾಯಕದ ಮಹತ್ವವೇನು ಎಂಬುದನ್ನು ಕಟ್ಟಿಕೊಡುವ ಕವಿ ಕೊನೆಯಲ್ಲಿ,”ನಿನ್ನ ಕಾಯಕಕ್ಕೆ ಎಣೆಯುಂಟೆ?, ಕುಲದ ಕುಲುಮೆಯಲಿ, ಕುದಿವ ಈ ಜಗದಿ” ಎಂಬ ಸಾಲುಗಳು ನಮ್ಮಲ್ಲಿ ಇದ್ದ ವರ್ಣವ್ಯವಸ್ಥೆಯ ತೀವ್ರತೆಯನ್ನು ಧ್ವನಿಸುತ್ತವೆ.

1001240401

“ಬೆಳಕು ಬೇಕು ಶಾಂತಿ ಬೇಡ, ಖಾದಿ ಬೇಕು ತತ್ವ ಬೇಡ,ಬಾಬಾ ಸಾಹೇಬ ಬೇಕು, ಸಮಾನತೆ ಬೇಡ”ಸಮಾನತೆ ಹೆಸರಿನಲ್ಲಿ ಮುಖವಾಡ ತೊಟ್ಟವರ ಮುಖಭಂಗ ಮಾಡುವ ಬಂಡಾಯದ ಕಿಚ್ಚು ಈ ಸಾಲುಗಳಲ್ಲಿ ಕಾಣಬಹುದು. ಕಟುವಾದ ವಾಸ್ತವವನ್ನು ಇಲ್ಲಿ ಹೇಳಿದ್ದಾರೆ. 

“ಬುದ್ಧನೆದೆಯಿಂದ ಬಸವನೆದೆಗೆ,ಬಸವನೆದೆಯಿಂದ ಬಾಬಾ ಸಾಹೇಬ ನೆದೆಗೆ, ಎದೆಯಿಂದ ಎದೆಗೆ  ಹಣತೆ ಹಚ್ಚುತ್ತಿದ್ದೇವೆ.”ಈ ಎದೆಯಿಂದ-ಎದೆಗೆ ಹಣತೆ ಹಚ್ಚುವ ಪರಿಕಲ್ಪನೆಯೆ ವಿಶೇಷ. ಅಂಧಕಾರದ ಜಗತ್ತಿನಲ್ಲಿ ಬುದ್ಧ ಬಸವ ಬಾಬಾ ಸಾಹೇಬರಂತ ಧೀಮಂತ ಭರವಸೆಯ ಬೆಳಕುಗಳು ಅಂದು ಇಂದು ಮುಂದೆಯೂ ಬೇಕು ಮತ್ತದನ್ನು ನಾವು ಎದೆಯಿಂದ ಎದೆಗೆ ದಾಟಿಸಬೇಕು. 

ಮುಂದೆ ‘ಹಂಸಪಕ್ಷ’ ಎಂಬ ಕವಿತೆಯಲ್ಲಿ, “ಎಲ್ಲಾ ಮರೆತಿದ್ದೇವೆ..!, ಮರೆಯುವುದನ್ನು ಕಲಿತಿದ್ದೇವೆ”ಎಂದು ಹೇಳುವ ಕವಿ ಹಳೆಯ ಸಂಕಟಗಳನ್ನು ನೆನೆಯುತ್ತಾ ಸಮತೆಯ ಹಾಡು ಹಾಡುತ್ತೇವೆ ಎಂದು ಹೇಳುವುದು ಇದೆಯಲ್ಲಾ…  

ಮುಂದುವರೆದು,  “ಬಡತನ ಬೇಗೆ, ಉದ್ಯೋಗ ವಂಚನೆ, ಮದುವೆಯ ಮೋಸ, ಕೊನೆಗೆ ಹೇಡಿತನನೇಣಿನ ಕುಣಿಕೆಗೂ ಬರಲಿಲ್ಲ ಕನಿಕರ, ಸಾವಿಗೆ ಮಾಡಿದ ಪ್ರಯತ್ನ..! ಬದುಕಿಗೇಕಿಲ್ಲ?”ನೇಣಿನ ಕುಣಿಕೆ ಇದು ಈ ಹೊತ್ತಿನ ದಲಿತ ಸಂವೇದನೆಯನ್ನು ಹೇಳುವುದರೊಂದಿಗೆ ಸಾವಿಗೆ ಮಾಡಿದ ಪ್ರಯತ್ನ ಬದುಕಿಗೇಕಿಲ್ಲ? ಎಂಬ ಪ್ರಶ್ನೆ ಹೊಸ ಭರವಸೆಯ ಬದುಕಿಗೆ ಕಾರಣವಾಗುವಂತಹ ಜೀವ ಪರ ಕಾಳಜಿ ಕವಿಯದ್ದು ಎಂದು ತಿಳಿಸುತ್ತದೆ.

 ‘ಕಾಲ’ ಎಂಬ ಕವಿತೆಯಲ್ಲಿ ಫಿಲಾಸಫಿಯ ಅಂಶಗಳು ಕಾಣಸಿಗುತ್ತವೆ. ಈ ಕವಿತೆಯ ಕೊನೆಯಲ್ಲಿ ಕವಿ, “ನಾಬಲ್ಲೆ ಕಾಲಕ್ಕೆ ಕಲ್ಲಿದ್ದಲನ್ನೂ, ವಜ್ರವಾಗಿಸುವ ಶಕ್ತಿಯಿದೆ ಎಂದು” ಎಂದು ಹೇಳುತ್ತಾರೆ ಈ ಸಾಲುಗಳು ಇಡೀ ಕವಿತೆಯಲ್ಲಿ ಹೆಚ್ಚು ಸದ್ದು ಮಾಡುತ್ತವೆ.

‘ಅಲ್ಲಮನಿಗೊಂದು ಅಂತರಂಗ ಪತ್ರ’ ಅಬ್ಬಾ..! ಈ ಪರಿಕಲ್ಪನೆಯೇ ಅಚ್ಚರಿ ಮೂಡಿಸುವಂತಿದೆ. ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾದ ಕವಿತೆ ಇದು. ಬಯಲಿನ ಜ್ಞಾನ ಯೋಗಿಗೆ ಇವತ್ತಿನ ತೊಗಲ ಯೋಗಿಯ ತಲ್ಲಣಗಳನ್ನು ಪತ್ರದ ರೂಪದಲ್ಲಿ ತಿಳಿಸುವುದು ಬಹಳ ಅನನ್ಯವಾದ ಪ್ರಯತ್ನ. ಕವಿ ಹೇಳುತ್ತಾರೆ,

“ದಲಿತ ಕವಿಗಳದ್ದಲ್ಲ ಜಾಸ್ತಿ ಆಯ್ತಂತೆ ಗದ್ದಲ, ಅಲ್ಲಿಯೂ ಅವರ ಪ್ರತಿಭಟನೆಗೆ ಹೆದರಿಪ್ರತ್ಯೇಕ ಬಂದೀಖಾನೆಯಲ್ಲಿ ಇರಿಸಿದ್ದಾರಂತೆ ನಿಜವೇ ಗುರುವೇ..!” ಎಂದು ಕೇಳುತ್ತಾ ಇಂದಿನ ಸರ್ಕಾರ ಆಡಳಿತ ವ್ಯವಸ್ಥೆ ಕುರಿತು ಅನುಭವ ಮಂಟಪದ ಅಲ್ಲಮನಿಗೆ ಅಪ್ಡೇಟ್ ನೀಡುವ ಕವಿ ಮುಂದೊಂದು ಪದ್ಯದಲ್ಲಿ ‘ನನಗೊಮ್ಮೆ ಪಟ್ಟಕೊಟ್ಟು ನೋಡಿ’ ಎಂದು ಧ್ವನಿಯೆತ್ತುತ್ತಾರೆ. ಈ ಕವಿತೆ ಇವತ್ತಿನ ವ್ಯವಸ್ಥೆ ಹೇಗಿರಬೇಕು ಮತ್ತು ಏನೆಲ್ಲಾ ಆಗಬೇಕು ಎಂಬುದನ್ನು ಮಾರ್ಮಿಕವಾಗಿ ತಿಳಿಸುತ್ತದೆ.

ಕವಿತೆಗಿದು ಕಾಲವಲ್ಲ ಎನ್ನುವಾಗಲೇ ಕವಿತೆಗೆ ಇದುವೇ ಸುಭೀಕ್ಷವಾದ ಕಾಲ ಎನ್ನುವಂತೆ ಇಲ್ಲಿನ ಕವಿತೆಗಳು ರಚನೆಯಾಗಿವೆ.ಹೊಸ ತಲೆಮಾರಿನ ದಲಿತ ಸಂವೇದನೆಯನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಕವಿಯ ಈ ಪ್ರಯೋಗ ಮೆಚ್ಚುವಂಥದ್ದು. ಈ ಕೃತಿಗೆ ಎಲ್ಲಾ ಒಳಿತುಗಳು ಲಭಿಸಲಿ ಕವಿ-ಕವಿತೆಗಳ ಮುಖೇನ ಕಂಡ ಕನಸು ನನಸಾಗಲಿ ಕವಿಯ ಆಶಯದಂತೆ ಲೋಕವೆಲ್ಲ ‘ಸಮತೆಯ ಹಾಡು ಹಾಡುವಂತಾಗಲಿ’.

1001240276

ಬರಹ – ದರ್ಶನ್ ಎಸ್ ಆರ್, ವಿದ್ಯಾರ್ಥಿ, ಡಾ. ಡಿ.ವಿ.ಜಿ.ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...