KSRTC ಬಸ್ ಹರಿದು ಎರಡು ವರ್ಷದ ಮಗುವೊಂದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಿದೆ.
ಪರಸಪ್ಪ ದ್ಯಾವಪ್ಪ ಹುಣಸ್ಯಾಳ ಅವರ ಪುತ್ರಿ ಲಕ್ಷ್ಮಿ (2) ಮೃತ ಮಗು. ಅಂಗಳದಲ್ಲಿ ಆಡುತ್ತಿದ್ದ ಮಗು ಆಕಸ್ಮಿಕವಾಗಿ ರಸ್ತೆ ಬದಿ ಬಂದಾಗ ಘಟನೆ ಸಂಭವಿಸಿದೆ. ಕೂಡಲಗಿ ಗ್ರಾಮದಿಂದ ಸುರಪುರಕ್ಕೆ ಹೊರಟಿದ್ದ KA 33 F0346 ಬಸ್ನ ಎರಡು ಚಕ್ರಗಳು ಮಗುವಿನ ಮೇಲೆ ಹರಿದಿದ್ದು, ದೇಹ ಛಿದ್ರಗೊಂಡಿದೆ. ಸ್ಥಳದಲ್ಲಿ ಮಗುವಿನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಘಟನೆ ಸಂಬಂಧ ತನಿಖೆ ಆರಂಭವಾಗಿದೆ.





