ʼಸ್ತನ್ಯಪಾನʼ ಅಮೃತ ಸಮಾನ: ತಾಯಿ-ಮಗು ಬಾಂಧವ್ಯಕ್ಕೆ ಅಡಿಗಲ್ಲು

Date:

‘ಸ್ತನ್ಯಪಾನ’ ತಾಯಿ ಮಗುವಿನ ಸಂಬಂಧ ಬೆಸೆಯುವುದಲ್ಲದೆ, ಸುರಕ್ಷಿತ ಆಹಾರದ ಪ್ರಮುಖ ಘಟ್ಟ. ಆರೋಗ್ಯವಾಗಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುವ ಪೋಷಕಾಂಶ ಹಾಗೂ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುವ ಅಮೃತಪಾನ. ಇತ್ತೀಚಿಗಿನ ದಿನಗಳಲ್ಲಿ ಸೌಂದರ್ಯಕ್ಕೆ ಮಾರಕ, ಮೂಢನಂಬಿಕೆಗಳು, ಹಳೆಯ ಸಂಪ್ರದಾಯಗಳಿಗೆ ಮೊರೆ ಹೋಗಿ ಗಂಭೀರ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು, ಬಳಲುತ್ತಿರುವುದು ಸರ್ವೇ ಸಾಮಾನ್ಯ. ಇಂತಹ ವಿಚಾರವಾಗಿ ಸಾಧಕ-ಬಾಧಕ ತಿಳಿಯಲೇಬೇಕು. ಇದರಲ್ಲಿ ಜೀವ-ಜೀವನ ಅಡಗಿದೆ, ಕುಟುಂಬದ ಸ್ವಾಸ್ಥ್ಯವಿದೆ.

ಸ್ತನ್ಯಪಾನಕ್ಕೆ ಆದ್ಯತೆ ನೀಡಬೇಕು. ಅದರಲ್ಲೂ ನಗರ, ಪಟ್ಟಣಗಳಲ್ಲಿ ಇಂದಿನ ಆಧುನಿಕತೆಯ ಒತ್ತಡದ ಜೀವನದಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಸರ್ಕಾರ, ಆರೋಗ್ಯ ಇಲಾಖೆ, ಸಂಘ-ಸಂಸ್ಥೆಗಳು, ಕುಟುಂಬದವರ ಹೊಣೆಗಾರಿಕೆಯೂ ಹೌದು. ಸ್ತನ್ಯಪಾನ ಸಂರಕ್ಷಿಸಲು ಮುಂದಾಗಬೇಕಿದೆ. ಪ್ರಮುಖವಾಗಿ ಮನೆಯ ಸದಸ್ಯರು ತಾಯಿಗೆ ಮಾನಸಿಕ ಬೆಂಬಲ ನೀಡಿ ಪ್ರೋತ್ಸಾಹಿಸಬೇಕು.

ಮಕ್ಕಳ ತಜ್ಞೆ ಡಾ. ಜಯಮಾಲ ಈ ದಿನ.ಕಾಮ್ ಜತೆ ಮಾತನಾಡಿ, “ಮಗು ಜನಿಸಿದ ಅರ್ಧ ಗಂಟೆಯಿಂದ ಒಂದು ಗಂಟೆಯೊಳಗೆ ಮೊದಲ ಬಾರಿಗೆ ಎದೆಹಾಲು ಉಣಿಸಬೇಕು. ಮೊದಲು ಮೂರು ದಿನ ಬರುವ ಗೀಬಿನ ಹಾಲು(ಕೊಲೋಸ್ಟ್ರೋಮ್) ಮಗುವಿಗೆ ಅತ್ಯವಶ್ಯಕ. ಮಗುವಿಗೆ ನೀಡುವುದು ಅಷ್ಟೇ ಮುಖ್ಯವಾದದ್ದು. ಹಳದಿ ವರ್ಣದ(ಗೀಬಾಲು) ಗಟ್ಟಿ ಹಾಲು ಹುಟ್ಟಿದ ಮಗುವಿಗೆ ಮೊದಲ ಲಸಿಕೆಯಾಗಿ ಪರಿಣಮಿಸಲಿದೆ. ಕೊಲೋಸ್ಟ್ರೋಮ್(ಗೀಬಾಲು)ನಲ್ಲಿ ಪೌಷ್ಟಿಕಾಂಶ ಉಕೃಷ್ಟವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲೀನ ಕಾಯಿಲೆಗಳನ್ನು ತಡೆಗಟ್ಟಲು ಪರಿಣಾಮಕಾರಿಯಾಗಲಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸ್ತನ್ಯಪಾನದಿಂದ ಮಗುವಿನ ಜಠರ ಸ್ವಚ್ಛವಾಗಲಿದ್ದು, 6 ತಿಂಗಳು ತುಂಬುವವರೆಗೂ ಕೇವಲ ಎದೆಹಾಲನ್ನೇ ನೀಡಬೇಕು. ಎಂತಹ ಕಡು ಬೇಸಿಗೆಯಾದರೂ ಸರಿಯೇ ನೀರನ್ನು ಕುಡಿಸುವ ಅಗತ್ಯತೆ ಇರುವುದಿಲ್ಲ. ಎದೆಹಾಲನ್ನು ಹೊರತುಪಡಿಸಿ ಹರಳೆಣ್ಣೆ, ಜೇನುತುಪ್ಪ, ಸಕ್ಕರೆ ನೀರು, ಹಸುವಿನ ಹಾಲು, ಪೌಡರ್ ಹಾಲನ್ನು ಯಾವುದೇ ಕಾರಣಕ್ಕೂ ನೀಡಕೂಡದು. 6 ತಿಂಗಳು ತುಂಬಿದ ನಂತರ ಎದೆಹಾಲಿನೊಂದಿಗೆ ಪೂರಕ-ಪೋಷಕ ಮೆದು ಆಹಾರ ಆರಂಭಿಸಬೇಕು” ಎಂಬ ಮಾಹಿತಿ ನೀಡಿದರು.

“ಮಗುವಿಗೆ 2 ವರ್ಷ ತುಂಬುವ ತನಕ ಎದೆಹಾಲನ್ನು ಮುಂದುವರೆಸಬೇಕು. ಇದು ಮಗುವಿನ ಮೆದುಳು ಬೆಳವಣಿಗೆಗೆ ಅವಶ್ಯಕ. ಹಾಗೆಯೇ, ಮಗುವಿನ ಬುದ್ಧಿಮಟ್ಟ ಹೆಚ್ಚಿಸಲು ಸಹಕಾರಿಯಾಗಿರುತ್ತದೆ. ಸೂಕ್ತ ರೀತಿಯಲ್ಲಿ ಎದೆಹಾಲು ಉಣಿಸುವುದರಿಂದ ತಾಯಿ ಬೇಗ ಗರ್ಭ ಧರಿಸುವುದಿಲ್ಲ. ಇದು ನೈಸರ್ಗಿಕ ಕುಟುಂಬ ಯೋಜನೆ ಇದ್ದಂತೆ. 2 ವರ್ಷ ಸರಿಯಾಗಿ ಎದೆಹಾಲುಣಿಸಿದ ತಾಯಂದಿರಿಗೆ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಬರುವುದು ಅಪರೂಪ. ಹಾಗೆಯೇ, ಸ್ತನ್ಯಪಾನ ಮಾಡಿಸುವ ತಾಯಿ-ಮಗುವಿನ ಬಾಂಧವ್ಯ ಸುಮಧುರವಾಗಿರುತ್ತದೆ” ಎಂದರು.

“ಸ್ತನ್ಯಪಾನದಿಂದ ಕುಟುಂಬದ ಆರ್ಥಿಕ ಹೊರೆ ತಗ್ಗಲಿದ್ದು, ದೇಶದ ಆರ್ಥಿಕತೆಗೆ ಸಹಾಯವಾಗುತ್ತದೆ. ಇದರಿಂದಾಗಿ ತಾಯಿ, ಕುಟುಂಬದವರು ಸ್ತನ್ಯಪಾನದ ಮಹತ್ವ ಅರಿತು, ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗುವಂತೆ ನಡೆದುಕೊಳ್ಳಬೇಕು. ಹಾಗೆಯೇ, ಪ್ರೋತ್ಸಾಹಿಸಬೇಕು” ಎಂದು ಹೇಳಿದರು.

ಸರಗೂರು ಹಾಗೂ ಹೆಗ್ಗಡದೇವನಕೊಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಟಿ ರವಿಕುಮಾರ್ ಈ ದಿನ.ಕಾಮ್ ಜತೆಗೆ ಮಾತನಾಡಿ, “ಜನರಲ್ಲಿನ ಮೂಢನಂಬಿಕೆ, ಹಳೆಯ ಪದ್ಧತಿಗಳನ್ನು ಅಳಿಸಬೇಕು. ಮೊದಲ ಮೂರು ದಿನ ಬರುವ ಗೀಬಿನ ಹಾಲು ಕೆಟ್ಟ ಹಾಲು ಕೊಡಬಾರದು, ಗಟ್ಟಿಯಾದದ್ದು, ಹಳದಿಯಾದದ್ದು ಮಗುವಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ ಎನ್ನುವ ಮೌಢ್ಯ ತೊರೆಯಬೇಕು. ಮಗುವಿನ ಹೊಟ್ಟೆ ಸ್ವಚ್ಛವಾಗುವ ದಿಸೆಯಲ್ಲಿ ಆರಂಭದ ಮೂರು ದಿನಗಳು ಹರಳೆಣ್ಣೆ ಚೀಪಿಸುವ ಪದ್ದತಿಯನ್ನು ತೊಲಗಿಸಬೇಕು. ಇದು ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದು ಸರಿಯಾದ ಕ್ರಮವಲ್ಲ” ಎಂದರು.

“ಹಿರಿಯರಲ್ಲಿ ಕೇವಲ ಎದೆಹಾಲೇ 6 ತಿಂಗಳು ಸಾಕಾಗುವುದಿಲ್ಲ ಎಂಬ ಭಾವನೆಯಿದೆ. ಇದರಲ್ಲಿರುವ ಪೋಷಕಾಂಶದ ಅರಿವು ಮೂಡಿಸಿಕೊಳ್ಳಬೇಕು. ಸ್ತನ್ಯಪಾನದ ಮಹತ್ವ ತಿಳಿದುಕೊಳ್ಳಬೇಕು. ಕುಟುಂಬಗಳಲ್ಲಿ ತಾಯಿಗೆ ಮಾನಸಿಕ ಬೆಂಬಲ ನೀಡುವವರ ಕೊರತೆ ಇರುವುದೂ ಸ್ತನ್ಯಪಾನಕ್ಕೆ ಅಸಹಕಾರಿ ಬೆಳವಣಿಗೆಯಾಗಿದೆ. ಜತೆಗೆ ಕೆಲಸ ಕಾರ್ಯ, ಜವಾಬ್ದಾರಿಗಳ ಹೊಣೆಗಾರಿಕೆಯೂ ಪರಿಣಾಮ ಬೀರಲಿದೆ. ಇದರಿಂದ ಮುಕ್ತರನ್ನಾಗಿಸಬೇಕು” ಎಂದು ಹೇಳಿದರು.

“ಎದೆಹಾಲು ಉಣಿಸುವ ತಾಯಂದಿರಿಗೆ ಬರುವ ಸಂಶಯ ನಿವಾರಿಸಲು ಆಪ್ತಸಮಾಲೋಚನೆಯ ಕೊರತೆ ಹೆಚ್ಚಿದೆ. ಏನೇ ಇದ್ದರೂ ಸಂಬಂಧಪಟ್ಟ ವೈದ್ಯರು, ನರ್ಸ್, ಆಶಾ ಕಾರ್ಯಕರ್ತೆಯರ ಬಳಿ ಮಾತನಾಡಿ, ಸಂಶಯ ಬಗೆಹರಿಸಿಕೊಳ್ಳಬೇಕು. ಸಮಯದ ಒತ್ತಡಕ್ಕೆ, ಮನೆಯವರ ಒತ್ತಡಕ್ಕೆ ಮಣಿದು ತಾಯಂದಿರು ಪೌಡರ್ ಹಾಲು, ಬಾಟಲಿ ಹಾಲಿಗೆ ಮಾರು ಹೋಗಕೂಡದು. ಇದರಿಂದ ಮುಂಬರುವ ರೋಗಗಳಿಗೆ ಮಗು ಸೇರಿದಂತೆ, ತಾಯಿಯೂ ತುತ್ತಾಗಬೇಕಾದ ಸಂದರ್ಭ ಎದುರಾಗಬಹುದು. ಇದರಿಂದಾಗಿ, ಸೂಕ್ತ ಎಚ್ಚರಿಕೆ ವಹಿಸಬೇಕು” ಎಂಬ ಸಲಹೆ ನೀಡಿದರು.

ಸಿಸೇರಿಯನ್ ಆದ ತಾಯಂದಿರಿಗೆ, ಚೊಚ್ಚಲ ಅಪ್ರಾಪ್ತ ಬಾಣಂತಿಯರಿಗೆ, ಅವಳಿ-ಜವಳಿ ಮಕ್ಕಳಿದ್ದು, ಕಡಿಮೆ ತೂಕವಿರುವ ತಾಯಂದಿರಿಗೆ ಸರಿಯಾದ, ಸೂಕ್ತವಾದ ಮಾಹಿತಿ ಕೊರತೆ ಇರುವುದು ತಾಯಿ-ಮಗು ಮರಣಕ್ಕೆ ಕಾರಣವಾಗಬಹುದು. ಆಸಕ್ತಿಯಿಂದ ಆಗಿಂದಾಗ್ಗೆ ಯಾವುದೇ ವಿಚಾರವಿದ್ದರೂ ನಿಸ್ಸಂಶಯವಾಗಿ ಮಾತನಾಡಿ, ಪರಿಹರಿಸಿಕೊಳ್ಳಬೇಕು. ಬಹುಮುಖ್ಯವಾಗಿ ಅರಿತುಕೊಳ್ಳಬೇಕಾದ ವಿಚಾರ ಮಗುವಿಗೆ 2 ವರ್ಷ ತುಂಬುವ ಮುನ್ನ ತಾಯಿ ಮತ್ತೆ ಗರ್ಭಿಣಿಯಾಗುವುದು ಸರಿಯಾದುದಲ್ಲ. ಇದನ್ನು ಕುಟುಂಬದವರು ಎಚ್ಚರಿಕೆ ವಹಿಸಿ, ತಾಯಿ-ಮಗುವಿನ ಕಾಳಜಿಗೆ ಒತ್ತು ನೀಡಬೇಕು” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ತಮಿಳುನಾಡು | ರೈತ ಮುಖಂಡ ಪಿ ಆರ್ ಪಾಂಡಿಯನ್ ಜೈಲಿನಿಂದ ಬಿಡುಗಡೆ: ಸ್ವಾಗತಿಸಿದ ಜಗಜಿತ್ ಸಿಂಗ್ ದಲ್ಲೆವಾಲ್

ಸ್ತನ್ಯಪಾನ ಸಂರಕ್ಷಿಸಲು ತಾಯಿ, ಕುಟುಂಬದವರು ಅನುಸರಿಸಬೇಕಾದ ಕ್ರಮಗಳು:

  • ಹೆರಿಗೆಗೆ ಮುನ್ನವೇ ತಾಯಿಗೆ ‘ಗೀಬಾಲು(ಕೊಲೋಸ್ಟ್ರೋಮ್)ʼ ಬಗ್ಗೆ ಮಾಹಿತಿ ಇರಬೇಕು. ತಾಯಿ ಮಗುವಿನ ಆರೋಗ್ಯಕ್ಕೆ ಪೂರಕವಾಗಿ ಇರುವ ಅಗತ್ಯತೆ ಬಗ್ಗೆ ತಿಳುವಳಿಕೆ ಚಾಚುತಪ್ಪದೇ ನೀಡಬೇಕು.
  • ಹೆರಿಗೆಯ ನಂತರ ಆಸ್ಪತ್ರೆಯಿಂದ ಹೋಗುವ ಮುನ್ನವೇ ತಾಯಂದಿರು ಯಶಸ್ವಿಯಾಗಿ ಮಗುವಿಗೆ ಹಾಲುಣಿಸಬಲ್ಲೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸಮಸ್ಯೆ ಇದ್ದಲ್ಲಿ ವೈದ್ಯರೊಂದಿಗೆ ಸಂವಾದಿಸಿ ಪರಿಹರಿಸಿಕೊಳ್ಳುವುದು ಉತ್ತಮ.
  • ತಾಯಂದಿರು ಎದೆಹಾಲುಣಿಸುವ ಅವಧಿಯಲ್ಲಿ ಇಡೀ ಕುಟುಂಬದ ಸದಸ್ಯರು ಸಹಕಾರ ನೀಡಬೇಕು. ಯಾವುದೇ ಒತ್ತಡ ಹೇರಬಾರದು. ಇಂತಹ ಸಂದರ್ಭದಲ್ಲಿ ಪ್ರೋತ್ಸಾಹ ಅತ್ಯಗತ್ಯ.
  • ತಾಯಿಗೆ ಪೌಷ್ಠಿಕ ಆಹಾರ ನೀಡಿ, ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು. ಆರೈಕೆ ಉತ್ತಮವಾಗಿದ್ದರೆ, ತಾಯಿ ಸಹ ಆರೋಗ್ಯಕರವಾಗಿರಲು ಸಾಧ್ಯ. ಮಾನಸಿಕವಾಗಿ, ದೈಹಿಕವಾಗಿ ಆರಾಮದಾಯಕ ಎನಿಸುವಂತೆ ಇರಬೇಕು.
  • ಕಾರ್ಯನಿರತ ತಾಯಂದಿರಿಗೆ ಎದೆಹಾಲು ತೆಗೆಯುವ, ಸಂರಕ್ಷಿಸುವ ವಿಧಾನವನ್ನು ಕಲಿಸುವುದು, ಕೆಲಸದ ಸ್ಥಳದಲ್ಲಿಯೂ ಎದೆಹಾಲುಣಿಸಲು ಅನುಕೂಲ ಮಾಡಿಕೊಡುವುದು ಪ್ರಮುಖವಾದ ಕರ್ತವ್ಯವಾಗಿರುತ್ತದೆ.
  • ಮಗು ತೀವ್ರ ನಿಗಾ ಘಟಕದಲ್ಲಿದ್ದರೆ, ಎದೆಹಾಲನ್ನು ನೀಡುವ ವಿಧಾನ, ಕಡಿಮೆ ತೂಕದ ಮಗು ಜನಿಸಿದಾಗ ‘ಕಾಂಗರೂ ಮದರ್ ಕೇರ್’ ವಿಧಾನ ತೋರಿಸಿಕೊಡುವುದು, ಅನುಸರಿಸುವುದು ಬಹಳ ಮುಖ್ಯವಾದದ್ದು. ತಾಯಂದಿರಿಗೆ ಪೌಡರ್ ಹಾಲು, ಬಾಟಲಿ ಹಾಲಿನ ಅಪಾಯದ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಅವುಗಳ ಮೊರೆ ಹೋಗದಂತೆ ಎಚ್ಚರ ವಹಿಸಬೇಕು.

    ಪ್ರಕೃತಿಯನ್ನ ರಕ್ಷಿಸುವಂತೆ, ಸ್ತನ್ಯಪಾನ ಬೆಂಬಲಿಸಬೇಕಿದೆ. ಈ ಬಗ್ಗೆ ಕುಟುಂಬ, ತಾಯಿ ಮುತುವರ್ಜಿ ವಹಿಸಬೇಕು. ತಾಯಿ, ಮಗುವಿನ ಆರೈಕೆ ಮುಂದಿನ ದೃಷ್ಟಿಕೋನದಲ್ಲಿ ಗಮನವಿಟ್ಟು, ಆಧರಿಸಿ ಪಾಲಿಸಬೇಕು. ಗಂಭೀರ ಸಮಸ್ಯೆ ಮುಂದೆ ಬಾರದಂತೆ ಆಗಿಂದಾಗಲೇ ವೈದ್ಯರ ಸಲಹೆ, ಸೂಚನೆಗಳಿಗೆ ಬದ್ಧರಾಗಿ ಆರೋಗ್ಯವಂತ ಜೀವನಕ್ಕೆ ಮುನ್ನುಡಿಯಾಗಬೇಕು.
WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...