ಕರ್ನಾಟಕ ಬಿಕ್ಕು ಸಂಘ, ರಾಜ್ಯ ಬೌದ್ಧ ಸಂಘ ಮತ್ತು ವಿಶ್ವ ಮೈತ್ರಿ ಬುದ್ಧ ವಿಹಾರ ಸಹಯೋಗದಲ್ಲಿ ಇದೇ ಅಕ್ಟೋಬರ್.14 ರಿಂದ 15 ರ ವರೆಗೆ ಐತಿಹಾಸಿಕ ‘ಬೌದ್ಧ ಮಹಾ ಸಮ್ಮೇಳನ‘ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಮಾಜಿ ಮಹಾಪೌರರಾದ ಪುರಷೋತ್ತಮ್ ಅವರು ಕಾರ್ಯಕ್ರಮದ ಕುರಿತಾಗಿ ಮಾತನಾಡಿ ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಬೌದ್ಧ ಸಾಂಸ್ಕೃತಿಕ ಸಂಗಮದ ಮೂಲಕ ಮಾನವ ಮೈತ್ರಿಯ ಪಯಣ ಹಮ್ಮಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಬೌದ್ಧ ಬಿಕ್ಕುಗಳನ್ನು ಗೌರವಿಸಲಾಗುತ್ತದೆ ಎಂದರು.
ಧ್ಯಾನ, ಚಿಂತನೆ ಮತ್ತು ವಿಚಾರಗಳನ್ನೊಳಗೊಂಡ ಐತಿಹಾಸಿಕ ಬೌದ್ಧ ಸಮ್ಮೇಳನ ಇದಾಗಿದ್ದು ಅ.14 ರಂದು ದೇಶದ ವಿವಿಧ ಭಾಗಗಳಿಂದ ಆಗಮಿಸುವ 200ಕ್ಕೂ ಹೆಚ್ಚಿನ ಬೌದ್ಧ ಬಿಕ್ಕುಗಳಿಗೆ ಭೋದನೆ ನಡೆಯಲಿದೆ. ಇದೇ ವೇಳೆ ಸ್ವೇಯಿಚ್ಛೆಯಿಂದ ಧಮ್ಮ ಸ್ವೀಕಾರ ಮಾಡುವವರಿಗೆ ದೀಕ್ಷೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಅ.15 ರಂದು ಮುಖ್ಯಮಂತಿಗಳಾದ ಸಿದ್ದರಾಮಯ್ಯನವರು ಸೇರಿದಂತೆ ಸಚಿವರು, ಜನಪ್ರತಿನಿದಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಬೌದ್ಧ ಧಮ್ಮ ರಾಜಕೀಯ ಆಶ್ರಯದ ಶಾಂತಿ ಸಂದೇಶವನ್ನು ನೀಡಲಿದೆ. ಬೌದ್ಧ ಸಂದೇಶದೊಟ್ಟಿಗೆ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು. ಇದೇ ಸಂದರ್ಭದಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಮನವಿ ಮಾಡಲಾಗುವುದು ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಶಾಸಕ ಜಿ ಡಿ ಹರೀಶ್ ಗೌಡ ಅವಿರೋಧ ಆಯ್ಕೆ
ಕಾರ್ಯಕ್ರಮದಲ್ಲಿ ನಾಲ್ಕು ಸಮಾನಾಂತರ ವೇದಿಕೆ ರೂಪಿಸಲಾಗುವುದು. ಸಮ್ಮೇಳನಕ್ಕೆ ರಾಜ್ಯ, ದೇಶದಾದ್ಯಂತ ಸೇರಿ ಐದು ಲಕ್ಷಕ್ಕೂ ಹೆಚ್ಚಿನ ಜನ ಸೇರುವ ನಿರೀಕ್ಷೆಯಿದೆ ಎಂದು ಹೇಳಿದರು.





