ಮನರೇಗಾ ಉಳಿಸಿ ಆಂದೋಲನದ ಅಂಗವಾಗಿ ಮೊಂಬತ್ತಿ ಹೊತ್ತಿಸಿ ಪ್ರತಿಭಟನೆ

Date:

ಬಾಗೇಪಲ್ಲಿ:-ಮಹಾತ್ಮ ಗಾಂಧಿಯವರ ಹೆಸರನ್ನು ನರೇಗಾದಿಂದ ತೆಗೆದುಹಾಕಿ ಯೋಜನೆಯ ಮೂಲ ಆಶಯ ಸ್ವರೂಪವನ್ನು ಜನವಿರೋಧಿಯಾಗಿ ಬದಲಾಯಿಸಲು ಹೊರಟಿರುವ ಕೇಂದ್ರ ಸರ್ಕಾರದ ವಿವಾದಿತ ವಿಬಿ ಜಿ ರಾಮ್ ಜಿ ನಾಲ್ಕು ಕಾರ್ಮಿಕ ಸಂಹಿತೆಗಳು ಹಾಗೂ ರೈತ ವಿರೋಧಿ ನೀತಿಗಳ ವಿರುದ್ಧ ಸಿಪಿಐಎಂ ಪಕ್ಷ ಹಾಗೂ ವಿವಿಧ ಸಂಘಟನೆಗಳ ಪ್ರಗತಿಪರ ಸಂಘಟನೆಗಳ ಎಡಪಕ್ಷಗಳ ಒಕ್ಕೂಟವಾದ ಸಂಯುಕ್ತ ಹೋರಾಟ- ಮುಖಂಡರು ಬಸ್ ನಿಲ್ದಾಣ ಬಳಿ ಜಿ.ವಿ.ಶ್ರೀರಾಮ ರೆಡ್ಡಿ ಪುಥಳಿ ಮುಂದೆ ಮುಂಬತ್ತಿ ಹೊತ್ತಿಸಿ ಪ್ರತಿಭಟನೆ ನಡೆಸಿ ಜನ ವಿರೋಧ ವಿಬಿ ಜಿ ರಾಮ್ ಜಿ ಮಸೂದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ ಮಾಡಿದರು.

ತಾಲ್ಲೂಕು ಸಿಪಿಐಎಂ ಪಕ್ಷದ ಕಾರ್ಯದರ್ಶಿ ರಘುರಾಮ ರೆಡ್ಡಿ ಮಾತನಾಡಿ ಅಭಿವೃದ್ಧಿ ಹೆಸರಲ್ಲಿ ದೇಶದಲ್ಲಿ ಕೇಂದ್ರ ಸರ್ಕಾರ ಇಡೀ ದೇಶವನ್ನು ಮಾರುತ್ತಿದೆ ಶಾಂತಿ ಸೌಹಾರ್ದತೆ ಹೆಸರಿನಲ್ಲಿ ಕೋಮುವಾದ, ಜಾತಿವಾದವನ್ನ ಬಿತ್ತುತಿದೆ ಗಾಂಧಿ ಚಿಂತನೆಗಳಿಂದ ಪ್ರಾರಂಭಗೊಂಡ ಅನೇಕ ಯೋಜನೆಗಳನ್ನು ಮೋದಿ ಸರ್ಕಾರ ರದ್ದು ಮಾಡುತ್ತಿದೆ. ಅದರ ಬದಲಿಗೆ ರಾಮನ ಜಪವನ್ನು ಮಾಡುತ್ತಿದೆ ಗಾಂಧಿಯನ್ನು ನೇರವಾಗಿ ಕೊಂದಿದ್ದಲ್ಲದೆ ಪ್ರತಿನಿತ್ಯ ಗಾಂಧಿಯನ್ನು ಕೊಲ್ಲುತ್ತಿದೆ. ನರೇಗಾ ಯೋಜನೆಯನ್ನು ಮುಚ್ಚುವ ಮೂಲಕ ಗ್ರಾಮೀಣ ಬದುಕಿನ ಜನರ ಅನ್ನವನ್ನು ಕಸಿಯುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜನರ ಹಕ್ಕುಗಳನ್ನು, ಮತದಾನದ ಹಕ್ಕುಗಳನ್ನು ಕಿತ್ತುಕೊಳ್ಳಬಾರದು.

ಕೇಂದ್ರ ಸರ್ಕಾರದ ಈ ದೌರ್ಜನ್ಯ ಹೆಚ್ಚು ದಿನ ನಡೆಯುವುದಿಲ್ಲ ಇದಕ್ಕೆ ತಕ್ಕ ಉತ್ತರವನ್ನು ಸಾಮಾನ್ಯ ಜನತೆ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟರು ರೈತ ಮುಖಂಡರು ಲಕ್ಷ್ಮೀನಾರಾಯಣ ರೆಡ್ಡಿ ಮಾತನಾಡಿ ಗ್ರಾಮೀಣ ಭಾಗದ ಸಣ್ಣ ರೈತರಿಗೆ ಕೃಷಿ ಕೂಲಿಕಾರರಿಗೆ ಎಲ್ಲರಿಗೂ ಸಾಮಾಜಿಕ ನ್ಯಾಯ ಮತ್ತು ಆಹಾರ ಭದ್ರತೆ ನೀಡುವ ಸಲುವಾಗಿ ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಯೋಜನೆಯನ್ನು ಜಾರಿಗೆ ತಂದಿದ್ದು ನೀವು ಅದನ್ನು ಇಲ್ಲವಾಗಿಸುವ ಕೆಲಸ ಮಾಡುತ್ತಿದ್ದೀರಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾವು ನರೇಗಾದಲ್ಲಿ ಕೇವಲ ಮಹಾತ್ಮ ಗಾಂಧಿ ಹೆಸರನ್ನು ಕೈ ಬಿಡುತ್ತಾರೆ ಎಂದು ಹೋರಾಟ ಮಾಡುತ್ತಿಲ್ಲ. ಗ್ರಾಮೀಣ ಮಟ್ಟದಲ್ಲಿ ನರೇಗಾ ಯೋಜನೆ ಉದ್ಯೋಗ ಸೃಷ್ಟಿಯ, ಬಡತನ ನಿವಾರಣೆಯ ಹಸಿದವರಿಗೆ ಅನ್ನ ನೀಡುವ ಸರ್ಕಾರದ ಆಶಯ ಮತ್ತು ಕಾರ್ಯಕ್ರಮವಾಗಿತ್ತು ಇದರ ಮೂಲ ಸ್ವರೂಪವನ್ನು ಬದಲಾಯಿಸಿ ರಾಜ್ಯಗಳಿಗೆ ಪಾಲನ್ನು ಭರಿಸುವಂತೆ ಹೇಳುವ ಮೂಲಕ ಯೋಜನೆಯನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ಆಗಲೇ ಹಲವು ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ಸರ್ಕಾರದ ಹೆಗಲಿಗೆ ಹಾಕಿ ಕೈ ತೊಳೆದುಕೊಂಡಿದೆ ಇದರಿಂದ ಎಷ್ಟೋ ಒಳ್ಳೆಯ ಯೋಜನೆಗಳು ಹಳ್ಳ ಹಿಡಿದಿವೆ.‌ ಈ ರೀತಿಯ ಬಹುದೊಡ್ಡ ಸಂಚು ಇದರಲ್ಲಿ ಅಡಗಿದೆ” ಎಂದು ಅಭಿಪ್ರಾಯಪಟ್ಟರು.

ಸಿಪಿಐಎಂ ಪಕ್ಷದ ಮುಖಂಡ ಚನ್ನರಾಯಪ್ಪ ಮಾತನಾಡಿ ಗ್ರಾಮೀಣ ಅಭಿವೃದ್ಧಿಯ ಗುರಿಯೊಂದಿಗೆ ಯುಪಿಎ ಸರಕಾರ ಮನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು ಗ್ರಾಮಗಳಿಗೆ ಅಗತ್ಯವಾದ ಕಾಮಗಾರಿಗಳನ್ನು ಆಯಾ ಗ್ರಾಮಗಳೇ ನಿರ್ಧರಿಸುವಂತೆ ಅಧಿಕಾರವೂ ನೀಡಲಾಗಿತ್ತು ಆದರೆ ಎನ್‌ಡಿಎ ಸರಕಾರ ಮನರೇಗಾ ಯೋಜನೆಯ ಮೂಲ ಉದ್ದೇಶಗಳನ್ನು ಕೈಬಿಟ್ಟು ಗ್ರಾಮಗಳಿಗೆ ಬೇಕಾದ ಕಾಮಗಾರಿಗಳನ್ನು ದೆಹಲಿಯಲ್ಲಿ ಕುಳಿತವರು ನಿರ್ಧರಿಸುವಂತಾಗಿದೆ. ಇದರಿಂದ ಗ್ರಾಮಗಳ ಅಗತ್ಯಗಳು ಹಾಗೂ ಆದ್ಯತೆಗಳಿಗೆ ಯಾವುದೇ ಅವಕಾಶ ಉಳಿದಿಲ್ಲ ಎಂದು ಆರೋಪಿಸಿದರು.

ಇದನ್ನು ಓದಿದ್ದೀರಾ..? ಫಲಪುಷ್ಪ ಪ್ರದರ್ಶನದಲ್ಲಿ ಜನ ಮನಸೂರೆಗೊಂಡ ನರೇಗಾ ಮಾದರಿ

ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ಡಿ.ಟಿ.ಮುನಿಸ್ವಾಮಿ, ಮುನಿಯಪ್ಪ ,ಮುಸ್ತಫಾ,ಸೋಮಶೇಖರ, ವಾಲ್ಮೀಕಿ ಅಶ್ವತ್ಥಪ್ಪ,ಜಿ.ಕೃಷ್ಣಪ್ಪ ರೈತ ಮುಖಂಡರಾದ ಈಶ್ವರೆಡ್ಡಿ ಹಾಗೂ ವಿವಿಧ ಸಂಘಗಳು ಮುಖಂಡರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...