ಬಾಗೇಪಲ್ಲಿ : ಪಟ್ಟಣದ ಹೊರವಲಯದ ಗಿರಿಜಾ ಕಲ್ಯಾಣ ಮಂಟಪ ಗಡಿದಂ ನಲ್ಲಿ ಬಾಗೇಪಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಸರ್ವ ಸದಸ್ಯರ ಸಭೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಕಳೆದಿದೆ ಆದರೆ ಇಂದಿಗೂ ಜನರಿಗೆ ನಿವೇಶನ ಮನೆ ಭೂಮಿ ವಸತಿ ಸಿಕ್ಕಿಲ್ಲ ಸಾಮಾಜಿಕ ಶೈಕ್ಷಣಿಕ ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅಸಮಾನತೆ, ಜಾತಿ ತಾರತಮ್ಯ ನಡೆಯುತ್ತಿವೆ. ದಲಿತರ ಹಿಂದುಳಿದವರ, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ಅತ್ಯಾಚಾರ ನಡೆಯುತ್ತಿವೆ ಎಂದು ಹೇಳಿದರು
ನಿವೃತ್ತ ಉಪನ್ಯಾಸಕ ಎ.ಕೆ.ನಿಂಗಪ್ಪ ಮಾತನಾಡಿ ಈ ನಾಡಿನ ಶೋಷಿತರ ಧ್ವನಿಯಾಗಿ, ಸರಕಾರ ಹಾಗೂ ವ್ಯವಸ್ಥೆಯ ವಿರುದ್ಧ ಹಲವಾರು ಪ್ರಮುಖ ಹೋರಾಟಗಳನ್ನು ರೂಪಿಸಿ ನ್ಯಾಯ ಒದಗಿಸಿಕೊಡುವಲ್ಲಿ ಸಫಲವಾಗಿದೆ. ಸಂಘಟನೆಯ ಕಾರ್ಯಕರ್ತರು ಬುದ್ಧ ಬಸವ ಅಂಬೇಡ್ಕರ್ ಹಾಗೂ ಸಾಮಾಜಿಕ ಪರಿವರ್ತನಕಾರರ ವಿಚಾರಧಾರೆಗಳನ್ನು ಅರಿತು ಸಮಾಜ ಪರಿವರ್ತನೆಯಲ್ಲಿ ತೊಡಗಬೇಕು ಎಂದರು.
ಮಾಜಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷಎ.ನಂಜುಂಡಪ್ಪ ಮಾತನಾಡಿ ಇಂದಿನ ನೂತನ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಘಟನೆಯ ಕಾರ್ಯಚಟುವಟಿಕೆಗಳ ಮೂಲಕ ಶೋಷಿತರ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಹಿರಿಯರ ಮಾರ್ಗದರ್ಶನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಹಕಾರದೊಂದಿಗೆ ನೂತನ ಸಮಿತಿಯು ಇನ್ನಷ್ಟು ಮುತುವರ್ಜಿ ವಹಿಸಿ ಈ ತಾಲ್ಲೂಕಿನಲ್ಲಿ ಕೋಮುವಾದ ಜಾತಿವಾದ ದಲಿತ ನೌಕರರಿಗೆ ಆಗುತ್ತಿರುವ ಕಿರುಕುಳಗಳ ವಿರುದ್ಧ ನಿರಂತರ ಹೋರಾಟ ನಡೆಸುವುದರ ಜೊತೆಗೆ ಸಂಘಟನೆಯ ಕಾರ್ಯಕರ್ತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಮೂಲಕ ತಾಲ್ಲೂಕು ಸಂಘಟನೆಯು ಬಲಿಷ್ಠವಾಗಿ ಮೂಡಿ ಬರಲಿ ಎಂದು ಹಾರೈಸಿದರು.
ಇದನ್ನು ಓದಿದ್ದೀರಾ..? ಆರೋಗ್ಯ ಇಲಾಖೆಯ 30 ಕೋಟಿ ವೆಚ್ಚದ ಸೌಲಭ್ಯಗಳಿಗೆ ಇಂದು ದಿನೇಶ್ ಗುಂಡೂರಾವ್ ಲೋಕಾರ್ಪಣೆ
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಚಿಂತಾಮಣಿ ಜಂಗಮಪ್ಪ, ಬಿ.ವಿ.ಚಲಪತಿ, ಕೋಟಪ್ಪ, ಬಿ.ಎಂ.ವೆಂಕಟನಾರಾಯಣಪ್ಪ,ಬಿ.ಎನ್.ನರಸಿಂಹ ಮೂರ್ತಿ, ಚಂಡೂರು ಸಿ.ಎ.ವೆಂಕಟೇಶ್, ಗಂಗುಲಪ್ಪ ಹಾಗೂ ಇತರೆ ಪದಾಧಿಕಾರಿಗಳು ಹಾಜರಿದ್ದರು





