ಬಾಗೇಪಲ್ಲಿ:ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2026 ರ ಅಂಗವಾಗಿ ಪಾತಪಾಳ್ಯ ಪೊಲೀಸ್ ಠಾಣಾ ವತಿಯಿಂದ ಪೋಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸಂಚಾರ ನಿಯಮಗಳು ವಾಹನ ದಾಖಲಾತಿಗಳು 112 ಸಹಾಯವಾಣಿ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಗಳ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.
ಚೇಳೂರು ಪೋಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಎಂ. ಶ್ರೀನಿವಾಸ್ ಮಾತನಾಡಿ ಪ್ರತಿಯೊಬ್ಬರ ಸುರಕ್ಷತೆಗೆ ಪೊಲೀಸರು ಬೇಕು. ಆದರೆ ಸಂಚಾರ ನಿಯಮ ಉಲ್ಲಂಘಿಸಿದಾಗ ದಂಡ ಹಾಕಿದರೆ ಅವರ ವಿರುದ್ಧವೇ ತಿರುಗಿ ನಿಲ್ಲುವುದು ಎಷ್ಟು ಸರಿ? ಸಂಚಾರ ನಿಯಮವನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ವಾಹನಗಳನ್ನು ಓಡಿಸುತ್ತಲೇ ಮೊಬೈಲ್ ಫೋನ್ನಲ್ಲಿ ಮಾತಾನಾಡುವುದು ಅಪರಾಧ. ಅಪ್ರಾಪ್ತರಿಗೆ ವಾಹನ ನೀಡುವುದು ತಪ್ಪು ಎಂದರು.
ವಾಹನದ ದಾಖಲಾತಿ ಸುರಕ್ಷಿತ ವಾಹನ ಚಾಲನೆ ಸಂಚಾರ ನಿಯಮ ರಸ್ತೆ ಬದಿಗಳಲ್ಲಿ ಅಳವಡಿಸಲಾದ ಎಚ್ಚರಿಕೆ ಹಾಗೂ ಸೂಚನಾ ಫಲಕಗಳ ಬಗ್ಗೆ ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ..? ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಿರಿ: ರೈತ ಸಂಘಟನೆ ಆಗ್ರಹ
ಈ ಸಂದರ್ಭದಲ್ಲಿ ಪಾತಪಾಳ್ಯ ಪೋಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಸೈಯದ್ ಅನ್ಸರ್, ಎ.ಎಸ್.ಐ. ರಾಜಣ್ಣ , ನಂಜುಂಡ ಶರ್ಮ ಹಾಗೂ ಸಾರ್ವಜನಿಕರು ಹಾಜರಿದ್ದರು.
ಪಾತಪಾಳ್ಯ ಪೊಲೀಸ್ ಠಾಣಾ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
Date:
ಪೋಸ್ಟ್ ಹಂಚಿಕೊಳ್ಳಿ:




