ಚಿಕ್ಕಬಳ್ಳಾಪುರ | ನಾಟಿ ಬೀಜಗಳು ಭೂತಾಯಿ ಮಕ್ಕಳಿದ್ದಂತೆ; ಮೈಲಾಪುರ ಕದಿರಮ್ಮ

Date:

ತಲ ತಲಾಂತರಗಳಿಂದ ನಮ್ಮ ಹೊಲಗಳಲ್ಲಿ ನಾಟಿ ಬೀಜಗಳನ್ನೆ ಬಿತ್ತಿ, ಬೆಳೆಸಿ, ಉಳಿಸಿಕೊಂಡು ಬಂದಿದ್ದೇವೆ. ನಾಟಿ ಬೀಜಗಳು ಭೂತಾಯಿ ಮಕ್ಕಳಿದ್ದಂತೆ ಎಂದು ಬೆರಕೆ ಸೊಪ್ಪುಗಳ ಜ್ಞಾನಧಾತೆ ಮೈಲಾಪುರ ಕದಿರಮ್ಮ ಹೇಳಿದರು.

ಪೀಪಲ್ ಟ್ರೀ ಹಾಗೂ ಜನಪರ ಫೌಂಡೇಷನ್ ಸಹಯೋಗದಲ್ಲಿ ಕುರಬೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ (ಕೆವಿಕೆ) ಆಯೋಜಿಸಿದ್ದ, ಕೆರೆ ನಾಟಿನ ನಾಟಿ ಬೀಜಗಳ ಸಮಾಗಮದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆ ಬೀಜಗಳನ್ನೇ ನಮ್ಮ ನೆಲದ ತಾಯಿ ಅಪ್ಪಿಕೊಳ್ಳೋದು, ಒಪ್ಪಿಕೊಳ್ಳೋದು. ಅವುಗಳನ್ನು ಬಿತ್ತಿದ್ರೇನೆ ಹೊಲಕ್ಕೂ ಕಳೆ. ಹಿಂದೆ ನಾವೂ ಅಂಗಡಿಗಳಿಗೆ ಹೋಗಿ ಬೀಜ ಕೊಳ್ಳುತ್ತಿದ್ದ ಉದಾಹರಣೆಗಳೇ ಇಲ್ಲ ಎಂದರು.

ರೇಷ್ಮೆ ಕೃಷಿ ಮಹಾವಿದ್ಯಾಲಯದ ಹಿರಿಯ ವಿಜ್ಞಾನಿ ರಾಮಚಂದ್ರ ನಾಯಕ್ ಮಾತನಾಡಿ, ನಾಟಿ ಬೀಜಗಳು ನಮ್ಮ ಹಿರಿಯರು ಉಳಿಸಿಕೊಂಡು ಬಂದಿರುವಂತಹ ಅಪಾರವಾದ ಸಂಪತ್ತು. ಅದನ್ನು ಎಲ್ಲರೂ ಕಾಪಾಡಿಕೊಳ್ಳಬೇಕಿದೆ. ಎಷ್ಟೇ ತಂತ್ರಜ್ಞಾನ ಆಧುನಿಕರಣ ಬಂದರೂ ಹಿಂದಿನ ಕಾಲದಲ್ಲಿ ಕೃಷಿ ಪದ್ಧತಿಗಳು, ನಾಟಿ ಬೀಜಗಳೇ ಆಹಾರ ಪರಂಪರೆಯನ್ನು ಎತ್ತಿ ಹಿಡಿಯುತ್ತವೆ. ನಾವೂ ಕೂಡ ರೈತರಿಗೆ ಇತ್ತೀಚಿನ ದಿನಗಳಲ್ಲಿ ಸುಸ್ಥಿರ ಬೇಸಾಯಗಳ ಬಗ್ಗೆ ಒತ್ತಿ ಹೇಳುತ್ತಿದ್ದೇವೆ. ಹಳೆಯ ಉತ್ತಮ ಕೃಷಿ ಪದ್ಧತಿಗಳು ಮುನ್ನೆಲೆಗೆ ಬರಬೇಕು ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪೀಪಲ್ ಟ್ರೀ ಚನ್ನಕೇಶವ ಮಾತನಾಡಿ, ನಮ್ಮ ನೆಲದ ದುಡಿವ ಜನರ ಬದುಕನ್ನು ಹಸನಾಗಿ ಇಟ್ಟಿದ್ದ ನಾಟಿ ಬೀಜಗಳನ್ನು ಉಳಿಸಿ, ಬೆಳೆಸುವ ನಿಟ್ಡಿನಲ್ಲಿ ಈ ಕಾರ್ಯಾಗಾರವನ್ನು ನಡೆಸುತ್ತಿದ್ದೇವೆ. ಇಂತಹ ಕಾರ್ಯಾಗಾರವನ್ನು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನಡೆಸಿ ಜನ ಹಿನ್ನೆಲೆಯ ಮೂಲಕ ನಾಟಿ ಬೀಜಗಳ ಬಗ್ಗೆ ಮಾಹಿತಿ ಪಡೆಯುವುದು, ಅವುಗಳನ್ನು ಸಂರಕ್ಷಿಸಿ, ಬೆಳೆಸಿ ಜನ ಜನರ ನಡುವೆ ಹಂಚಿಕೆ ಮಾಡುವ ಹಿರಿಯ ತಲೆಮಾರಿನ ಪದ್ದತಿಗಳನ್ನು ಮರುಕಟ್ಟಲು ಕಾರ್ಯಾಗಾರಗಳನ್ನು ಮಾಡುತ್ತಿದ್ದೇವೆ ಎಂದರು.

ಜನಪರ ಫೌಂಡೇಷನ್‌ ಸಂಸ್ಥೆಯ ಶಶಿರಾಜ್ ಹರತಲೆ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಜನರು ಕೆರೆಗಳ ನಾಡು, ಪಂಚ ನದಿಗಳ ಬೀಡು, ಗುಡ್ಡಗಾಡು, ಹುಲ್ಲುಗಾವಲು ಪ್ರದೇಶ, ಬಯಲು ಸೀಮೆ ಪ್ರದೇಶ ಅಂತಲು ಗುರುತಿಸಬಹುದು. ಈ ಭಾಗದಲ್ಲಿ ಐದಾರು ನದಿಗಳು ಹರಿದ ಗುರುತುಗಳಿವೆ. ಮಳೆ ಅವಲಂಬನೆಯ ಕೃಷಿ ಇಲ್ಲಿ ಪ್ರಧಾನವಾಗಿದೆ.ನದಿ ಹರಿಯುವ ಪ್ರದೇಶ, ಗುಡ್ಡಗಾಡು, ಸಮತಟ್ಟು ಹೊಲಗಳಲ್ಲಿ ವೈವಿದ್ಯಮಯವಾಗಿ ಬೆಳೆಯುವ ಅಗಾಧವಾದ ನಾಟಿ ಸಂಪತ್ತು ನಮ್ಮ ಈ ಭಾಗದಲ್ಲಿತ್ತು ಎಂಬುದಕ್ಕೆ ಅನೇಕ ಪುರಾವೆಗಳಿವೆ. ನಮ್ಮಲ್ಲಿ ಸಾಮಾನ್ಯವಾಗಿ ಪೂರ್ವ ಮುಂಗಾರು ತಡವಾಗಿ ಆರಂಭವಾಗುತ್ತದೆ. ಅದಕ್ಕೆ ಹೊಂದಿಕೊಳ್ಳುವಂತಹ ಅನೇಕ ತರಹದ ನಾಟಿ ಬೀಜಗಳಿವೆ ಎಂದರು.

ಆದಾಯದಲ್ಲಿನ ಉಳಿಕೆ ಹಣವನ್ನು ಕಳ್ಳಕಾಕರಿಂದ ಸುರಕ್ಷಿತವಾಗಿಡಲು ದುಡ್ಡಿನ ಬ್ಯಾಂಕ್‌ಗಳಿವೆ. ಅಪಘಾತ ಮತ್ತು ಅನಾರೋಗ್ಯದ ಸಂದರ್ಭಗಳಲ್ಲಿ ರಕ್ತದ ಶೀಘ್ರ ಪೂರೈಕೆಗಾಗಿ ಬ್ಲಡ್ ಬ್ಯಾಂಕ್‌ಗಳಿವೆ. ಜನರಿಗೆ ಆಹಾರ, ಬದುಕನ್ನು ನೀಡುವ ನಾಟಿ ಬೀಜಗಳ ಬ್ಯಾಂಕ್ ಕೂಡ ಮಾಡಬೇಕಿದೆ. ಇದರಿಂದ ಅಳಿವಿನಂಚಿನಲ್ಲಿರುವ ಬೆರಳೆಣಿಕೆಯಷ್ಟು ಸ್ಥಳಿಯ ಬೀಜಗಳು, ತಳಿಗಳನ್ನು ಉಳಿಸಿದಂತಾಗುತ್ತದೆ ಎಂದು ಕರೆ ನೀಡಿದರು.

ಕಾರ್ಯಾಗಾರದಲ್ಲಿ ಅಳಿವಿನ ಅಂಚಿನಲ್ಲಿರುವ ನಾಟಿ ಬೀಜಗಳಾದ ಅರ ಸಾಮೆ, ಅಂಡು ಕೊರ್ರ, ಎರ್ರ ಕೊರಲು, ತೆಲ್ಲ ಸಾಮಲುನಲ್ಲ ಸಾಮಲು, ಗುತ್ತಿ ಶೆಣಕಾಯಿ, ಚಿಕ್ಕಡಕಾಯಿ, ಆಮಾದುಮು, ಕಾಕಮಾರ ಜೊನ್ನ, ಸೀತಮ್ಮ ಜೊನ್ನ ಎರ್ರನೂಗಲು, ನಲ್ಲ ಅನಪ ಗಿಂಜಲು, ನಾಟಿ ಕಂದಿಲು ಎರ್ರಿನೂಗಲು, ಹಿಪ್ಪೆ, ಎರೆಮಾದಲು, ಕಾನುಗ ಹೀಗೆ ಜನಭಾಷೆಯ ತೆಲಗನ್ನಡದಲ್ಲಿ ಕರೆಯುವ ನಾಟಿ ಬೀಜಗಳು ಸಮಾಗಮಗೊಂಡಿದ್ದವು.

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ತನ್ವೀರ್ ಅಹಮದ್, ಸಂಧ್ಯ, ಜೈವಿಕ ಇಂಧನ ಕೇಂದ್ರದ ವೆಂಕಟೇಶ್, ನಾಟಿ ಬೀಜ ಸಂರಕ್ಷಕ ಬಂಡಕೋಟೆ ರತ್ನಮ್ಮ, ಸಂಪನ್ಮೂಲ ವ್ಯಕ್ತಿಗಳಾದ ಸಾಯಿಲ್ ವಾಸು, ಸಮಾಗಮ ಉಷಾ ರಾವ್, ಮುಳಬಾಗಿಲು ಪ್ರಭಾಕರ್, ದ್ವಿಜಿ ಗುರು, ಯುವ ರೈತರಾದ ಮೈಲಾಪುರ ರವಿ, ನಾಗಸಂದ್ರ ಗಡ್ಡೆ ಸುರೇಶ್, ಕೊಡಿಗೆಹಳ್ಳಿ ದೇವರಾಜ್, ಸೋರಪಲ್ಲಿ ಪುಷ್ಪ, ನಾರಮಾಕಲ ಹಳ್ಳಿ ಚಲಪತಿ ಹುಲುಗುಮ್ಮನ ಹಳ್ಳಿ ಮಂಜುನಾಥ್, ಪೀಪಲ್ ಟ್ರೀ ಮತ್ತು ಜನಪರ ಫೌಂಡೇಷನ್‌ ಕಾರ್ಯಕರ್ತರು ಸೇರಿದಂತೆ ಮಹಿಳಾ ರೈತರು, ಯುವ ರೈತರು ಹಾಗೂ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ 50ಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...