ಚಿಕ್ಕಬಳ್ಳಾಪುರ | ಮೆಕ್ಕೆಜೋಳ ಬೆಳೆಗಾರರಿಗೆ ಸಂಕಷ್ಟ: ದರ ಕುಸಿತಕ್ಕೆ ರೈತ ಕಂಗಾಲು, ಬೆಂಬಲ ಬೆಲೆಗೆ ಆಗ್ರಹ

Date:

ಮೆಕ್ಕೆಜೋಳ(Maize – Zea mays) ಕರ್ನಾಟಕದ ಕೃಷಿ ಆರ್ಥಿಕತೆಯ ಬೆನ್ನೆಲುಬು. ರಾಗಿಯ ನಂತರ ರಾಜ್ಯದಲ್ಲಿ ಅತಿಹೆಚ್ಚು ಬೆಳೆಯಲಾಗುವ ಏಕದಳ ಧಾನ್ಯ. ಇದು ಮಾನವ ಆಹಾರ, ಪಶು ಆಹಾರ, ಕೋಳಿ ಫೀಡ್, ಸ್ಟಾರ್ಚ್ ಮತ್ತು ಎಥನಾಲ್ ಉದ್ಯಮಗಳಿಗೆ ಅತಿ ಮುಖ್ಯ ಕಚ್ಚಾ ವಸ್ತುವಾಗಿದೆ. ಖಾರೀಫ್, ರಬಿ ಹಾಗೂ ಬೇಸಿಗೆ ಮೂರು ಋತುಗಳಲ್ಲೂ ಬೆಳೆಯಬಲ್ಲ ಏಕೈಕ ಪ್ರಮುಖ ಧಾನ್ಯವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 2000ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದು, ಬೆಲೆ ಕುಸಿತದಿಂದ ತೊಂದರೆ ಅನುಭವಿಸುವಂತಾಗಿದೆ. ಪ್ರತಿ ಎಕರೆ ಮೆಕ್ಕೆಜೋಳ ಬೆಳೆಯಲು ₹35,000 ಖರ್ಚಾಗುತ್ತದೆ. ಬೆಲೆ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ರೈತರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಕಬ್ಬು ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿದ ರೀತಿಯಲ್ಲಿಯೇ ಮೆಕ್ಕೆಜೋಳಕ್ಕೂ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಟಿ ಕೆ ಅರುಣ್ ಕುಮಾರ್ ಮಾತನಾಡಿ, “ಸುಮಾರು ಒಂದು ಎಕರೆಯಲ್ಲಿ ಮೆಕ್ಕೆಜೋಳ ಬೆಳೆಯಲು ಸುಮಾರು ₹35,000 ಖರ್ಚಾಗುತ್ತದೆ. ಬೆಳೆ ಬೆಳೆದರೂ ಸರಿಯಾದ ರೀತಿಯಲ್ಲಿ ಬೆಲೆ ಸಿಗದೆ ರೈತರು ನಷ್ಟ ಆನುಭವಿಸುತ್ತಿದ್ದಾರೆ. ಜೋಳಕ್ಕೆ ಹೆಚ್ಚು ಡಿಮ್ಯಾಂಡ್ ಇದ್ದರೂ ಕೂಡ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ, ಬೇರೆ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರಿಗೆ ಅನುಕೂಲಮಾಡಿದೆ. ಆದರೆ ನಮ್ಮ ಬಯಲು ಸೀಮೆ ಭಾಗದಲ್ಲಿ ಹೆಚ್ಚು ಬೆಳೆಯುವ ಜೋಳದ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ, ರೈತರಿಗೆ ಅನುಕೂಲವನ್ನೂ ಮಾಡಿಕೊಟ್ಟಿಲ್ಲ, ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ ರೀತಿ ನಮ್ಮ ಭಾಗದ ಮೆಕ್ಕೆಜೋಳ ಬೆಳೆಯುವ ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಜೋಳವನ್ನು ಕೋಳಿ ಫೀಡ್, ಬಿಸ್ಕತ್, ಪ್ರೋಟೀನ್ ಹಾಗೂ ಇನ್ನು ಹಲವಾರು ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಲಾಗುತ್ತಿದೆ. ಮೆಕ್ಕೆಜೋಳವನ್ನು ಕೆಲವು ದಿವಸ ಸಂಗ್ರಹಿಸಿಟ್ಟರೂ ಕೂಡ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಇಂತಹ ಬೆಳೆಗೆ ಸರ್ಕಾರ ಯಾಕೆ ಬೆಂಬಲ ಬೆಲೆ ಘೋಷಣೆ ಮಾಡುವುದಿಲ್ಲ. ಮೆಕ್ಕೆಜೋಳ ಖರೀದಿ ಮಾಡುವ ದಲ್ಲಾಳಿಗಳು ಹಾಗೂ ಕಂಪೆನಿಯವರು ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಮೆಕ್ಕೆಜೋಳ ಬೆಳೆಯುವ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ನಮ್ಮ ಭಾಗದ ರೈತರು ಬೆಳೆ ಬೆಳೆಯಲು ಖರ್ಚು ಕಡಿಮೆಯಾಗುತ್ತದೆಂದು ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಾರೆ. ಆದರೆ ರೈತರಿಗೆ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಮೂರೂವರೆ ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.

“ಸರ್ಕಾರ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡಿ ಉಗ್ರವಾದ ಹೋರಾಟ ಮಾಡುತ್ತೇವೆ. ಹಸಿರು ಟವೆಲ್ ಹಾಕಿಕೊಂಡ ಮಾತ್ರಕ್ಕೆ ಸರ್ಕಾರ ರೈತರ ಪರವಾಗುವುದಿಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು” ಎಂದು ಒತ್ತಾಯಿಸಿದರು.

ಚಿಂತಾಮಣಿ ತಾಲೂಕಿನ ಕೈವಾರ ಪಂಚಾಯಿತಿ, ಬಣಹಳ್ಳಿ ಗ್ರಾಮದ ರೈತ ಮುಂಜುನಾಥ್ ಮಾತನಾಡಿ, “ನಾವು ಬೆಳೆದಿರುವ ಜೋಳಕ್ಕೆ ಬೆಲೆ ಇಲ್ಲ, ರೈತರು ಸಂಕಷ್ಟದಲ್ಲಿದ್ದೇವೆ. ಸರ್ಕಾರದಲ್ಲಿರುವವರು ಪ್ರತಿದಿನ ಊಟ ತಿನ್ನುತ್ತಾರೆ, ಅವರು ಆ ಸಮಯದಲ್ಲಿ ರೈತರನ್ನು ನೆನಪಿಸಿಕೊಳ್ಳಬೇಕು. ಆದರೆ ಸರ್ಕಾರ ರೈತರನ್ನು ನೆನಪಿಸಿಕೊಳ್ಳುತ್ತಿಲ್ಲ, ನಮ್ಮ ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಬಂದರೂ ನಾವು ರೈತರ ಪರವೆಂದು ಹೇಳುತ್ತಾರೆಯೇ ಹೊರತು ಇವರಾರೂ ರೈತರ ಪರವಾಗಿಲ್ಲ. ರೈತರಿಗೆ ಇವರು ಯಾರೂ ಸಹಾಯ ಮಾಡುತ್ತಿಲ್ಲ” ಎಂಬ ಆರೋಪ ವ್ಯಕ್ತಪಡಿಸಿದರು.

“ಮೆಕ್ಕೆಜೋಳ ಬೆಳೆಯುವ ಉತ್ತಮವಾದ ಬಿತ್ತನೆಬೀಜ, ಕೀಟನಾಶಕ ಹಾಗೂ ಗೊಬ್ಬರಗಳನ್ನೂ ಕೂಡ ರೈತರಿಗೆ ನೀಡುತ್ತಿಲ್ಲ. ಆದರೂ ಕೂಡ ಇಡೀ ಕರ್ನಾಟಕದಲ್ಲೇ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ರೈತರು ತುಂಬಾ ಕಷ್ಟಬಿದ್ದು ಕೆಲಸ ಮಾಡುತ್ತಿದ್ದೇವೆ. ಇಲ್ಲಿನ ರೈತರ ಜೀವನಾಡಿಯೇ ಕೃಷಿಯಾಗಿದೆ. ಇಲ್ಲಿನ ಪ್ರಮುಖ ಬೆಳೆ ಹೆಚ್ಚಾಗಿ ಬೆಳೆಯುವ ಬೆಳೆಗಳು ರಾಗಿ, ಜೋಳ, ಮಾವು. ಆದರೆ ಸಿಎಂ ಸಿದ್ದರಾಮಯ್ಯನವರಿಗೆ ನಮ್ಮ ಬಗ್ಗೆ ಕನಿಕರ ಇಲ್ಲ, ನಿಜವಾಗಿಯೂ ನಿಮಗೆ ರೈತರ ಬಗ್ಗೆ ಕಾಳಜಿ ಇದ್ರೆ ಮೆಕ್ಕೆಜೋಳ ಬೆಳೆದಿರುವ ಸ್ಥಳಕ್ಕೆ ಬಂದು ನೋಡಿ ನೀವು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಿ, ರೈತರು ಉಳಿದರೆ ಮಾತ್ರ ನೀವು ಚೆನ್ನಾಗಿರುತ್ತೀರ. ರೈತ ಉಳಿದರೆ ಮಾತ್ರ ಈ ದೇಶ, ನಾವು ಹಾಕಿರುವ ಬಂಡವಾಳವೂ ಸಿಗುತ್ತಿಲ್ಲ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಿ ರೈತರನ್ನು ಉಳಿಸಬೇಕು” ಎಂದು ಒತ್ತಾಯಿಸಿದರು.

“ನಮ್ಮ ಚಿಕ್ಕಬಳ್ಳಾಪುರ ಭಾಗದಲ್ಲಿ ಅಧಿಕವಾಗಿ ಮೆಕ್ಕೆಜೋಳ ಬೆಳೆಯುತಾರೆ. ಆದರೆ ನಮಗೆ ಸರಿಯಾದ ರೀತಿಯಲ್ಲಿ ಬೆಲೆ ಸಿಗುತ್ತಿಲ್ಲ. ಒಂದೊಮ್ಮೆ ಬೆಲೆ ಹೆಚ್ಚು ಸಿಕ್ಕಿದರೂ ಕೆಲವೇ ದಿನಗಳಲ್ಲಿ ಮತ್ತೆ ಕುಸಿತವಾಗುತ್ತದೆ. ಈ ಕಾರಣದಿಂದ ಜೋಳ ಬೆಳೆದ ರೈತರಿಗೆ ಬಹಳ ತೊಂದರೆಯಾಗುತ್ತಿದೆ. ಸರ್ಕಾರ ಜೋಳ ಬೆಳೆದ ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರನ್ನು ಉಳಿಸುವ ಕೆಲಸ ಮಾಡಬೇಕು” ಎಂದು ರೈತ ತ್ಯಾಗರಾಜ್ ಆಗ್ರಹಿಸಿದರು.

“ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಬೇಕೆಂದು ಹಲವಾರು ಹೋರಾಟಗಳನ್ನು ಮಾಡಿದ್ದೇವೆ. ಕಬ್ಬಿಗೆ ನೀಡಿದ ರೀತಿಯಲ್ಲಿ ಜೋಳಕ್ಕೂ ಸಹ ಬೆಂಬಲ ಬೆಲೆ ನೀಡಬೇಕು. ಬಯಲುಸೀಮೆ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಸೌಲಭ್ಯ ಇಲ್ಲದಿದ್ದರೂ ನಾವು ಹೆಚ್ಚು ಬೆಳೆಗಳನ್ನು ಬೆಳೆಯತ್ತಿದ್ದೇವೆ. ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುವಂತಾಗಿದ್ದು, ಇದನ್ನು ಗಮನಿಸಿ ಸರ್ಕಾರ ₹3,500-₹4,000ದವರೆಗೂ ಬೆಂಬಲ ಬೆಲೆ ನೀಡಬೇಕು” ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಇದನ್ನೂ ಓದಿದ್ದೀರಾ? ಬೀದರ್‌ | ಜಮೆಯಾಗದ ಬೆಳೆ ಹಾನಿ ಪರಿಹಾರ : ತಪ್ಪದ ರೈತರ ಸಂಕಷ್ಟ

ಚಿಕ್ಕಬಳ್ಳಾಪುರ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಣೆ ಮಾಡಲು ಚರ್ಚೆ ನಡೆಯುತ್ತಿದ್ದು, ರಾಜ್ಯ ಮಟ್ಟದ ಕೃಷಿ ಇಲಾಖೆ ಅಧಿಕಾರಿಗಳು ಚರ್ಚೆ ಮಾಡಿ ಮಾಡುತ್ತಾರೆ. ಒಂದು ವಾರದಲ್ಲೇ ಮೆಕ್ಕೆಜೋಳ ಬೆಳಗಾರರಿಗೆ ಸಕಾರಾತ್ಮಕ ಸುದ್ದಿ ಬರುತ್ತದೆ” ಎಂದು ತಿಳಿಸಿದರು.

ಮೆಕ್ಕೆಜೋಳ ರೈತರ ಸಂಕಷ್ಟಗಳು ಸೇರಿದಂತೆ ರಾಜ್ಯಾದ್ಯಂತ ಕೃಷಿ ಸಮಸ್ಯೆಗಳು ಕಂಡುಬರುತ್ತವೆ. ₹35,000 ಖರ್ಚು ಮಾಡಿ ಬೆಳೆದೆ ಬೆಳೆಗೆ ₹1,600-₹1,800 ಬೆಲೆ ಸಿಗುವುದು ರೈತರ ಜೀವನಾಧಾರವನ್ನು ದುರ್ಬಲಗೊಳಿಸುತ್ತದೆ. ಕಬ್ಬು ಬೆಳೆಗೆ ನೀಡಿದಂತೆ ಮೆಕ್ಕೆಜೋಳಕ್ಕೂ ಬೆಂಬಲ ಬೆಲೆ ಘೋಷಣೆ ಮಾಡಿ, MSP ಖರೀದಿ ಖಚಿತಪಡಿಸಿದರೆ, ರೈತರ ಆಶಾಭಾವನೆ ಮರಳಿಬರಬಹುದು. ಸರ್ಕಾರಗಳು ಕೂಡಲೇ ಕ್ರಮ ಕೈಗೊಳ್ಳದಿದ್ದರೆ, ʼಮೆಕ್ಕೆಜೋಳ ಬೆಳೆ’ಯ ರೈತರು ಮತ್ತೊಂದು ಬಾರಿ ನಿರಾಶೆಯಲ್ಲಿ ಸಿಲುಕುತ್ತಾರೆ. ರೈತರ ಧ್ವನಿಗೆ ಓಗೊಟ್ಟು ಶಾಶ್ವತ ಪರಿಹಾರಗಳನ್ನು ಜಾರಿಗೊಳಿಸದಿದ್ದರೆ ಕೃಷಿ ಆರ್ಥಿಕತೆಯೇ ದುರ್ಬಲಗೊಳ್ಳುತ್ತದೆ.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...