ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ಊಟ ಮಾಡುವ ವಿಚಾರಕ್ಕೆ 7ನೇ ತರಗತಿ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ.
ಮೃತ ಸುಪ್ರೀತಾ (13), ನೇಣಿಗೆ ಶರಣಾದ ವಿದ್ಯಾರ್ಥಿನಿ. ಊಟ ಮಾಡುವಾಗ ಅನ್ನ ಚೆಲ್ಲಿದ್ದ ಹಿನ್ನೆಲೆಯಲ್ಲಿ ತಾಯಿ ಮಗಳಿಗೆ ಬುದ್ಧಿವಾದ ಹೇಳಿದ್ದಾರೆ. “ಬರೀ ಟಿವಿ ನೋಡು ಓದಬೇಡ ಚೆಲ್ಲಿದ ಅನ್ನ ಕ್ಲೀನ್ ಮಾಡು” ಎಂದು ತಿಳಿಸಿದ್ದಾರೆ. ಬಳಿಕ ತಾಯಿ ಕೆಲಸಕ್ಕೆ ತೆರಳಿದ್ದು, ತಾಯಿ ಮನೆಯಿಂದ ಹೊರಟ ಬಳಿಕ, ಬಾಲಕಿ ಮನೆಯಲ್ಲೇ ವೇಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಈಜಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು
ಈ ಘಟನೆ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.





