ಚಿಕ್ಕಮಗಳೂರು | ನ್ಯಾಯಾಲಯ ಆವರಣ; ಗಣಪತಿ ದೇವಾಲಯ ನಿರ್ಮಿಸದಂತೆ ದಸಂಸ ಹೋರಾಟದ ಎಚ್ಚರಿಕೆ

Date:

ಚಿಕ್ಕಮಗಳೂರು ನಗರದಲ್ಲಿ ನಿರ್ಮಾಣಗೊಂಡ ಪೂರ್ಣಗೊಳ್ಳುವ ಅಂತದಲ್ಲಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿಯು ಜಿಲ್ಲೆಯ ಜನತೆಯಲ್ಲಿ ಸಂತಸ ತಂದಿದೆ. ಆದರೇ, ನ್ಯಾಯಾಲಯದ ಕಟ್ಟಡದ ಎದುರು ಅನಧೀಕೃತವಾಗಿ ನಿರ್ಮಿಸುತ್ತಿರುವ ಗಣಪತಿ ದೇವಾಲಯದ ಬಗ್ಗೆ ಸಾರ್ವಜನಿಕರಲ್ಲಿ ಆಕ್ಷೇಪವಾಗಿದ್ದು, ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಗಮನಕ್ಕೆ ಬಂದಿದ್ದು, ನ್ಯಾಯಾಲಯದ ಮುಂದೆ ಏಕ ಧರ್ಮ ಏರಿಕೆಯಾಗುತ್ತಿರುವುದನ್ನು ಒಕ್ಕೂಟ ತೀವ್ರವಾದಿ ಖಂಡಿಸುತ್ತದೆ ಎಂದು ದಸಂಸ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದರು. 

ಸರ್ವಧರ್ಮ ಸಮಾನತೆಯ ಸರ್ವಜಾತಗಳಿಗೂ ಸಂವಿಧನಾತ್ಮಕ ಸಮಾನತೆಯನ್ನು ಪ್ರತಿಪಾಧಿಸುವ ಘನ ನ್ಯಾಯಾಲಯದ ಮುಂದೆ ಒಂದು ಧರ್ಮದ, ಜಾತಿಯ, ಆಚರಣೆಯ ಧಾರ್ಮಿಕ ಭಾವನೆಯನ್ನು ಏರಿಕೆ ಮಾಡುವ ಈ ದೇವಾಲಯದ ಅನಧೀಕೃತ ಕಾಮಗಾರಿಯು ನಡೆಯುತ್ತಿರುವುದು ವಿಷಾಧನೀಯ ಸಂಗತಿ. ಸರ್ವಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಹ ಅಂಶವಾಗಿದೆ. ಈ ನಮ್ಮ ಭಾರತ, ದೇಶ ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿಯ ಅಡಿಪಾಯದ ಮೇಲೆ ನಿಂತಿದೆ. ಅದನ್ನೇ ಈ ದೇಶದ ಸಂವಿಧಾನ ಪ್ರತಿಪಾಧನೆಯೂ ಆಗಿದೆ ಎಂದು ದಸಂಸ ಮುಖಂಡ ಉಮೇಶ್ ತಿಳಿಸಿದರು.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಶನ್; ಜ.18ರಂದು ವಾರ್ಷಿಕ ಕಲಾ ಉತ್ಸವ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಒಂದು ಧರ್ಮಕ್ಕೆ ಧಕ್ಕೆ ಆಗದ ರೀತ ಸರ್ವ, ಧರ್ಮ ಸಮಾನತೆಯನ್ನು ಬಯಸಿದ ಬುದ್ಧ, ಬಸವ, ಕನಕದಾಸ, ನಾರಾಯಣಗುರು, ಪೆರಿಯಾರ್, ಗಾಂಧೀಜಿ, ಅಂಬೇಡ್ಕರ್‌ರವರಂತಹ ಮಹಾನಿಯರ ಪ್ರತಿಮೆಗಳನ್ನು ಪ್ರತಿಸ್ಥಾಪಿಸಲಿ, ಇದಕ್ಕೆ ಒಕ್ಕೂಟವು ಹೃತ್ತೂರ್ವಕವಾಗಿ ಸ್ಪಂಧಿಸುತ್ತದೆ.  ಈ ಅನಧೀಕೃತ ದೇವಾಲಯದ ಕಾಮಗಾರಿಗಳನ್ನು ಮಾನ್ಯ ನ್ಯಾಯಾಧೀಶರುಗಳು ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಸರ್ವ ಧರ್ಮಗಳ ಶಾಂತಿ ನೆಲೆಗೊಳಿಸಿ, ನ್ಯಾಯಸಮ್ಮತ. ಸಮಾನತೆ ಸಾರ್ವ ಉದ್ದೇಶದಿಂದ ಅನಧೀಕೃತವಾಗಿ ನಿರ್ಮಾಣಗೊಳ್ಳುತ್ತಿರುವ ದೇವಾಲಯದ ಕಟ್ಟಡದ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಿ, ಇಲ್ಲದಿದ್ದರೆಎಲ್ಲಾ ಸಂಘಟನೆಯ ಒಕ್ಕೂಟದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ದಸಂಸ ಮುಖಂಡರು ತಿಳಿಸಿದರು. ಈ ವೇಳೆ ಶ್ರೀನಿವಾಸ್, ಭೀಮಯ್ಯ, ರಾಕೇಶ್, ಅಂಗಡಿ ಚಂದ್ರು, ಉಮೇಶ್ ಕುಮಾರ್, ಟಿ ಎಲ್ ಗಣೇಶ್, ಹೇಮಂತ್ ಹಾಗೂ ಇನ್ನಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...