ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ಮೃತ ಶಿಕ್ಷಕನ ಸಾಲ ಮರುಪಾವತಿ ಮಾಡಲ್ಲ ಎಂದ ವಿಮಾ ಕಂಪನಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಶೇಕಡಾ 9 ರಷ್ಟು ಬಡ್ಡಿ ಸಮೇತ ನೀಡುವೆಂತೆ ಆದೇಶ ನೀಡಿದೆ.
ಶಿಕ್ಷಕರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದ ಸರಕಾರಿ ಶಿಕ್ಷಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸಾಲ ಮರುಪಾವತಿಗೆ ವಿಮಾ ಹಣವನ್ನು ಭರಿಸದ ವಿಮಾ ಕಂಪನಿಯ ವಿರುದ್ಧ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಡ್ಡಿ ಸಹಿತ ಹಣ ಪಾವತಿಸುವಂತೆ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ 2025ರ ಜುಲೈ 8 ರಂದು ಎಕ್ಸೈಡ್ ಜೀವ ವಿಮಾ ಕಂಪನಿಯ ಬೆಂಗಳೂರು ಕಚೇರಿಯ ವ್ಯವಸ್ಥಾಪಕರು ಹಾಗೂ ಚಿಕ್ಕಮಗಳೂರು ಶಾಖಾ ವ್ಯವಸ್ಥಾಪಕರು, ಶಿಕ್ಷಕರ ಸಹಕಾರ ಬ್ಯಾಂಕ್‌ನ ಉಡುಪಿ ಪ್ರಧಾನ ಕಚೇರಿ ಮತ್ತು ಚಿಕ್ಕಮಗಳೂರು ಶಾಖೆಯ ವ್ಯವಸ್ಥಾಪಕರ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಆಯೋಗವು ಜನವರಿ 23ರಂದು ತೀರ್ಪು ನೀಡಿದ್ದು, ಎಕ್ಸೈಡ್ ಜೀವ ವಿಮಾ ಕಂಪನಿಯ ಬೆಂಗಳೂರು ಕಚೇರಿ ಹಾಗೂ ಚಿಕ್ಕಮಗಳೂರು ಶಾಖಾ ಕಚೇರಿ ವಿರುದ್ಧದ ದೂರನ್ನು ಖರ್ಚಿನೊಂದಿಗೆ ಭಾಗಶಃ ಪುರಸ್ಕರಿಸಿ ಶಿಕ್ಷಕರ ಸಹಕಾರಿ ಬ್ಯಾಂಕ್‌ನ ಉಡುಪಿ ಪ್ರಧಾನ ಕಚೇರಿ ಮತ್ತು ಚಿಕ್ಕಮಗಳೂರು ಶಾಖೆ ವಿರುದ್ಧದ ದೂರನ್ನು ವಜಾಗೊಳಿಸಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಿಶ್ವ ಸಾಮಾಜಿಕ ನ್ಯಾಯ ದಿನ; ಕಾನೂನು ಅರಿವು ಕಾರ್ಯಕ್ರಮ
ವಿಮಾ ಕಂಪನಿಯು ವಿಮಾ ಪರಿಹಾರ ಮೊತ್ತ 11.50 ಲಕ್ಷ ರೂ.ಗಳನ್ನು 2024ರ ಫೆಬ್ರವರಿ 8 ರಿಂದ ಈವರೆಗೆ ವಾರ್ಷಿಕ ಶೇಕಡಾ 9 ರ ಬಡ್ಡಿ ಸಹಿತ ಪಾವತಿಸುವಂತೆ ಆದೇಶಿಸಲಾಗಿದೆ. ಅಲ್ಲದೆ, ಪರಿಹಾರವಾಗಿ 40 ಸಾವಿರ ರೂ. ಹಾಗೂ ವ್ಯಾಜ್ಯದ ಖರ್ಚು ವೆಚ್ಚವೆಂದು 10 ಸಾವಿರ ರೂ.ಗಳನ್ನು ಜಯಂತಿ ಅವರಿಗೆ ನೀಡುವಂತೆ ಆದೇಶ ನೀಡಲಾಗಿದೆ. ತಪ್ಪಿದಲ್ಲಿ ಆದೇಶದ ಮೊತ್ತಕ್ಕೆ ಶೇಡಕಾ 6 ಭವಿಷ್ಯ ಬಡ್ಡಿಯನ್ನು ಪಾವತಿಸುವಂತೆ ಆದೇಶಿಸಿದೆ. ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ ಮತ್ತು ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಅವರು ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿಅರ್ಜಿದಾರರ ಪರವಾಗಿ ವಕೀಲರಾದ ಎಂ.ಕೆ.ರಮೇಶ್ ಅವರು ವಾದ ಮಂಡಿಸಿದ್ದರು.





