ಚಿಕ್ಕಮಗಳೂರಿನಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಡ್ರೈವಿಂಗ್ ಸ್ಕೂಲ್ ಕುರಿತು ಹೊಸ ಅಸೊಶಿಯೇಷನ್ ಮಾಡಲಾಗಿದೆ ಎಂದು ಮಲೆನಾಡು ಮೋಟಾರ್ ಡ್ರೈವಿಂಗ್ ಸ್ಕೂಲ್ ಅಸೊಶಿಯೇಷನ್ ವತಿಯಿಂದ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ಚಾಲನಾ ತರಬೇತಿ ಶಾಲೆಗಳ ವತಿಯಿಂದ ಶುಕ್ರವಾರ ದಿ. 30-01-2026 ರಂದು ಪ್ರಾದೇಶಿಕ ಕಛೇರಿ, ಚಿಕ್ಕಮಗಳೂರಿನಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ್ದು, ಅಂದೆ ನಮ್ಮ ಎಲ್ಲಾ ಡ್ರೈವಿಂಗ್ ಶಾಲೆಗಳ ಸಮ್ಮುಖದಲ್ಲಿ ನೂತನವಾಗಿ ಅವಿರೋಧವಾಗಿ ಡಿ.ಟಿ. ಮಂಜುನಾಥ್, ದಂಟರಮಕ್ಕಿ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹಾಗೂ ನಂತರ ಅವರ ಮುಂದಾಳತ್ವದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ಎಲ್ಲಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದು ಹಾಗೂ ರಕ್ತದಾನ ಶಿಭಿರಗಳನ್ನು ಏರ್ಪಡಿಸುತ್ತೇವೆ ಹಾಗೂ ತರಬೇತಿ ಶಾಲೆಗಳಲ್ಲಿ ಉತ್ತಮವಾದ ಚಾಲನಾ ತರಬೇತಿ ನೀಡಲು ಸೂಕ್ತ ಸಲಹೆಗಳನ್ನು ಎಲ್ಲಾ ಚಾಲಾನ ತರಬೇತಿ ಶಾಲೆಗಳಿಗೆ ನೀಡಿ ಜಾಗೃತಿ ಮೂಡಿಸುತ್ತೆವೆಂದು ಟಿ.ಡಿ ಮಂಜುನಾಥ್ ತಿಳಿಸಿದರು.
ಈಗಾಗಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸರ್ಕಾರದ ವತಿಯಿಂದ ನಮ್ಮ ಜಿಲ್ಲೆಯಲ್ಲಿ ಸುಮಾರು 42 ಡ್ರೈವಿಂಗ್ ಶಾಲೆಗಳು ಮಾನ್ಯತೆ ಪಡೆದಿರುತ್ತವೆ. ನಮ್ಮ ಮುಖ್ಯ ಹೋರಾಟ ನಮ್ಮ ಜಿಲ್ಲೆಯಲ್ಲಿ 49 ವೈಜ್ಞಾನಿಕವಾಗಿ ಸುಸಜ್ಜಿತವಾದ ಚಾಲನಾ ಪರೀಕ್ಷೆಗೆ ಉಪಯುಕ್ತವಾದ ಚಾಲನಾ ಪಥ(ಡ್ರೈವಿಂಗ್ ಟ್ರಾಕ್) ಮಾಡಿಸಲು ನಮ್ಮ ಸಂಘವು ಮನವಿ ಸಲ್ಲಿಸುತ್ತೇವೆ. ಶೀಘ್ರ ಚಾಲನಾ ಪಥ(ಡ್ರೈವಿಂಗ್ ಟ್ರಾಕ್) ಸ್ಥಾಪಿಸಲು ಹೋರಾಟ ಮಾಡುತ್ತೇವೆಂದು ಸುರೇಶ್ ಎಚ್. ಪಿ ತಿಳಿಸಿದರು.
ಅಪಘಾತ ನಿಯಂತ್ರಣ ಮಾಡಲು ಈ ರೀತಿಯಲ್ಲಿ ಹೊಸ ಆಯಮವನ್ನು ಕಂಡುಕೊಂಡಿದ್ದೇವೆ. ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಸೀಟ್ ಬೆಲ್ಟ್ ಧರಿಸದೆ, ಹೆಲ್ಮೆಟ್ ಹಾಕದೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ. ಈಗಾಗಲೇ 42 ಶಾಲೆಯ ಪ್ರಾಂಶುಪಾಲರನ್ನು ಜೊತೆ ಮಾತನಾಡಿದ್ದೇವೆ ಶಾಲಾ ಮಕ್ಕಳಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿ ತಿಳಿಸಲು ಕಾರ್ಯಕಾರಗಳ ಮೂಲಕ ಮುಂದಿನ ದಿನಗಳಲ್ಲಿ ಕಾರ್ಯ ಕೈಗೊಳ್ಳಲಿದ್ದೇವೆ. ಹಾಗೆಯೇ ಚಿಕ್ಕಮಗಳೂರಿನ ಭಾಗದಲ್ಲಿ 12 ಡ್ರೈವಿಂಗ್ ತರಬೇತಿಗಳಿವೆ, ದ್ವಿಚಕ್ರ ವಾಹನ ಸಂಚಾರ ಮಾಡುವ ಪ್ರಯಾಣಿಕರು ಇತ್ತೀಚಿನ ದಿನಗಳಲ್ಲಿ ಸಾವಿರ ಕೇಸ್ ದಾಖಲಾಗಿದೆ ಅದರಲ್ಲೂ ಪ್ರಯಾಣಿಸುವಾಗ ದ್ವಿಚಕ್ರ ವಾಹನದಲ್ಲಿ ಕನ್ನಡಿಗಳು ಇಲ್ಲದೆ ಇರುವುದರಿಂದ ಇಂತಹ ಪ್ರಹ ಕನ್ನಡಿಗಳು ಇಲ್ಲದೆ ಇರುವುದರಿಂದ ಇಂತಹ ಪ್ರಕರಣಗಳು ಹೆಚ್ಚಾಗಿದೆ ಎಂದು ಅಸೋಸಿಯೇಷನ್ ಮುಖಂಡರು ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರಿಂದ ಸಂಕೇತಿಕಾ ಉಪವಾಸ ಧರಣಿ
ಈ ವೇಳೆ ನೂರುಲ್ಲಾ ಖಾನ್, ಬಲರಾಮ್ ನಾಯಕ್, ಸುಧೀರ್, ಇನಾಯತ್, ತೀರ್ಥಸ್ವಾಮಿ, ಹಾಗೂ ಇತರರಿದ್ದರು.





