ಚಿಕ್ಕಮಗಳೂರು ಜಿಲ್ಲೆಯ ಅಗಳಗಂಡಿ ಗ್ರಾಮ ಪಂಚಾಯಿತಿ ಹೆಗ್ಗಾರು ಗ್ರಾಮ ವ್ಯಾಪ್ತಿಗೆ ಸೇರುವ ಹುಲ್ತಾಳ್, ಬಂಗಾಡಿ ಮತ್ತು ನಾಕೃಗೋಳಿ ಈ ಕಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಗಿಡ ನೆಡುವ ಯೋಜನೆಯಡಿಯಲ್ಲಿ ನೈಸರ್ಗಿಕ ಕಾಡನ್ನು ಹಾಳುಮಾಡಿ ಪರಿಸರ ವಿನಾಶ ಕೃತ್ಯ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಕಳೆದ ಒಂದು ತಿಂಗಳಿಂದೆ ಸಾಕಷ್ಟು ಪ್ರತಿಭಟನೆಯ ನಂತರವು,ಗಿಡ ನೆಡಲು ಗುಂಡಿ ತೆಗೆಯುವ ಕೆಲಸವನ್ನು ಮುಂದುವರಿಸಿದ್ದಾರೆ. ಈ ಯೋಜನಗೆ ಗ್ರಾಮಸ್ಥರು ತೀರ್ವ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಡಿನ ಒಳಗೆ ಗಿಡ ನೆಡುವ ಹಾಗೂ ಮಲೆನಾಡಿನ ನೀರು ಟ್ಯಾಂಕ್ ಎಂದು ಕರೆಸಿಕೊಳ್ಳುವ ಹುಲ್ಲು ಗುಡ್ಡದೊಳಗೆ ಅರಣ್ಯ ಇಲಾಖೆ ಈ ಯೋಜನೆಯನ್ನು ನಿಲ್ಲಿಸವರೆಗೂ ಹಾಗೂ ಜಿಲ್ಲಾ ಆಡಳಿತ ಈ ಬಗ್ಗೆ ಅದಿವಾಸಿಗಳಿಗೆ ಭರವಸೆ ನೀಡುವ ತನಕವು ಸ್ಥಳದಲ್ಲೆ ಉಪವಾಸ ಸತ್ಯಾಗ್ರಹವನ್ನು ಮಾಡಲು ಹತ್ತಾರು ಹಳ್ಳಿಗಳ ಗ್ರಾಮಸ್ಥರು ನಿರ್ಧರಿಸಿದ್ದೇವೆಂದು ಗ್ರಾಮಸ್ಥರು ಈದಿನ.ಕಾಮ್ ಜೊತೆ ಮಾತಾಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಕುಡಿಯಲು ನೀರು, ಡಾಂಬರ್ ರಸ್ತೆಯಿಲ್ಲದೆ ಗ್ರಾಮಸ್ಥರ ಪರದಾಟ
ಈ ಹೋರಾಟಕ್ಕೆ ಎಲ್ಲಾ ಅದಿವಾಸಿ ಸಮುದಾಯಕ್ಕೆ ಸೇರಿದ ಜನರು, ರೈತರು, ಎಲ್ಲಾ ಸಂಘಟನೆಗಳು, ಎಲ್ಲಾ ಹೋರಾಟಗಾರರು ಹೋರಾಟಕ್ಕೆ ಬೆಂಬಲಿಸಿದ್ದಾರೆ. ನಮ್ಮ ಪರಿಸರದ ಜೊತೆಗೆ ಅದಿವಾಸಿಗಳ ಸಂವಿಧಾನ ಬದ್ಧ ಬದುಕಿನ ಹಕ್ಕುಗಳಿಗಾಗಿ ಪ್ರಜ್ಞಾವಂತ ನಾಗರಿಕರು, ಜನಪರ ಸಂಘಟನೆ, ಆಡಳಿತ ವರ್ಗ ಅದಿವಾಸಿಗಳ ನ್ಯಾಯ ಬದ್ಧ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ.





