ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು ಬಾಳೂರು ಹೋಬಳಿ ಕೆಳಗೂರು ಮತ್ತು ಮೇಗೂರು ಗ್ರಾಮದ ವಿವಿಧ ಸರ್ವೆ ನಂಬರಗಳನ್ನು ಟೀ ಮತ್ತು ಕಾಫಿ ಎಸ್ಟೇಟ್ ಹೊಂದಿರುವ ಡಿ.ಬಿ.ಎಸ್.ಎಲ್. ಮಥಾಯಿಸ್ ಮತ್ತು ಅವರ ಮಕ್ಕಳು ತಮ್ಮ ಹಿಡುವಳಿ ಜಮೀನು ಬಿಟ್ಟು ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಕುರಿತು ರಾಜ್ಯ ಕಂದಾಯ ಆಯುಕ್ತರಿಗೆ ಗ್ರಾಮಸ್ಥ ರಮೇಶ್ ದೂರು ನೀದಿದ್ದರು.

ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಮೂಡಿಗೆರೆ ತಹಸೀಲ್ದಾರ್‌ರವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದ್ದರಿಂದ ಮೇಗೂರು ಗ್ರಾಮದ 98 ಸರ್ವೆ ನಂಬರ್ ಸರ್ವೆ ನಡೆಸಿದಾಗ ಒತ್ತುವರಿಯಾಗಿರುವುದು ದೃಡಪಟ್ಟಿದೆ. ಆದರೇ, ಕೆಳಗೂರು ಟೀ ಎಸ್ಟೇಟ್ ಮಾಲೀಕರು ಉದ್ದೇಶಪೂರ್ವಕವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು, ಮೂಡಿಗೆರೆ ತಹಸೀಲ್ದಾರ್, ಬಾಳೂರು ರೆವಿನ್ಯೂ ಇನ್ಸ್‌ಪೆಕ್ಟರ್ ಗ್ರಾಮ ಲೆಕ್ಕಾಧಿಕಾರಿ, ಮೂಡಿಗೆರೆ ತಾಲ್ಲೂಕು ಎ.ಡಿ.ಎಲ್.ಆರ್. ರವರನ್ನು ಪಾರ್ಟಿದಾರರನ್ನಾಗಿ ಮಾಡಿ ಮೂಡಿಗೆರೆ ನ್ಯಾಯಾಲಯದಲ್ಲಿ ಇದೇ ಸರ್ಕಾರಿ ಜಮೀನಿಗೆ ಇಂಜೆಕ್ಷನ್ ತರಲು ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಸಂದೇಶ: ಆರೋಪಿ ಬಂಧನ; ಶಾಸಕಿ ಪ್ರತಿಕ್ರಿಯೆ
ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಸರ್ಕಾರಿ ಜಮೀನಿನಲ್ಲಿರುವ ಲಕ್ಷಾಂತರ ಬೆಲೆಬಾಳುವ ಸಿಲ್ವರ್ ಮರಗಳನ್ನು ಕಟಾವು ಮಾಡಿ ಟಿಂಬರ್ ಕೊಟ್ಟಿರುವುದು. ಇದೇ ದಂದೆಗಾಗಿಯೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಸರ್ಕಾರಿ ಜಮೀನಿನ ಬೆಲೆಬಾಳುವ ಮರಗಳನ್ನು ಸರ್ಕಾರದ ವಶಕ್ಕೆ ಪಡೆದು ಅಕ್ರಮ ಮರ ಕಡಿಯುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಮರಗಳನ್ನು ಸರ್ಕಾರದ ಸುಪರ್ದಿಗೆ ಬಳಸಿಕೊಳ್ಳಬೇಕೆಂದು ಗ್ರಾಮದ ರಮೇಶ್ ತಿಳಿಸಿದರು.





