ಚಿಕ್ಕಮಗಳೂರು | ಜುಲೈ 30ರಂದು ಜನ-ದನಿ ಸಮಾವೇಶ

Date:

ಮಲೆನಾಡಿಗರ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜುಲೈ 30ರಂದು ಬಾಳೆ ಹೊನ್ನೂರಿನಲ್ಲಿ ಜನ-ದನಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಮುಕ್ತ ಸಂವಾದಕ್ಕೆ ಜನಪ್ರತಿನಿಧಿಗಳನ್ನು ಅಹ್ವಾನಿಸಲಾಗಿದೆ ಎಂದು ಕರ್ನಾಟಕ ಜನಶಕ್ತಿ ನಾಯಕ ಹಾಗೂ ಎದ್ದೇಳು ಕರ್ನಾಟಕದ ಮುಖಂಡ ಕೆ.ಎಲ್ ಅಶೋಕ್ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ಮಲೆನಾಡಿಗರ ಕೂಗು ಒಂದು ರೀತಿಯಲ್ಲಿ ಅರಣ್ಯ ರೋದನವೇ ಸರಿ. ಬೆಲೆ ಏರಿಕೆ, ಭ್ರಷ್ಟಾಚಾರ, ದ್ವೇಷ ರಾಜಕಾರಣ ಮುಂತಾದ ಸಮಸ್ಯೆಗಳು ರಾಜ್ಯದ ಜನರಿಗೆಲ್ಲಾ ಇರುವಂತೆ ನಮಗೂ ಇದೆ. ಇವುಗಳಲ್ಲದೆ ಮಲೆನಾಡಿಗರಿಗೆ ಸಾಲು ಸಾಲು ಸಮಸ್ಯೆಗಳು, ಅರಣ್ಯ ಇಲಾಖೆಯ ನಿತ್ಯ ಕಿರುಕುಳ, ತಲೆಯಮೇಲೆ ಒಕ್ಕಲೆಬ್ಬಿಸುವ ತೂಗುಕತ್ತಿ. ನಾನಾ ರೀತಿಯ ಬೆಳೆ ರೋಗಗಳು, ಪ್ರಾಕೃತಿಕ ವಿಕೋಪಗಳು ಬಂದೆರಗುತ್ತವೆ. ಇಂದಿನ ಮಲೆನಾಡೆಂದರೆ ಕುವೆಂಪು ಅವರ ಕಾದಂಬರಿಯಲ್ಲಿ ಬರುವ ಅಂದಿನ ‘ಮಲೆಗಳಲ್ಲಿ ಮಧುಮಗಳು” ಅಲ್ಲ. “ಕೆಂಡದ ಮೇಲೆ ಬಿದ್ದ ತರಗೆಲೆಗಳು, ಬಾಯಿ ಬಡಿದುಕೊಂಡರೂ ಈವರೆಗೆ ಯಾವುದೇ ಜನ ಪ್ರತಿನಿಧಿಗಳೂ ನಮ್ಮತ್ತ ತಿರುಗಿ ನೋಡಲಿಲ್ಲ. ಯಾವೊಂದು ಸಮಸ್ಯೆಗೂ ಪರಿಹಾರ ನೀಡಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಮಲೆನಾಡಿಗರ ಅಳಲನ್ನು ಆಲಿಸದ ಜನಪ್ರತಿನಿಧಿಗಳ ದುರಹಂಕಾರಕ್ಕೆ ಅಂತ್ಯ ಹಾಡಲೇಬೇಕೆಂದು ನಿರ್ಧರಿಸಿ ಜನರೆಲ್ಲರೂ ಮನದೊಳಗೆಯೇ ತೀರ್ಮಾಸಿದ್ದುದರ ಫಲಿತಾಂಶ ಕಣ್ಮುಂದಿದೆ. ಹೊಸ ಸರ್ಕಾರ ರಚನೆಯಾಗಿದೆ, ಹೊಸ ಶಾಸಕರುಗಳು ಗೆದ್ದು ಬಂದಿದ್ದಾರೆ. ಗೆದ್ದವರ ಸರ್ಕಾರವೇ ಅಧಿಕಾರದಲ್ಲಿದೆ. ಇದಕ್ಕಿಂತ ಉತ್ತಮ ಸಂದರ್ಭ ಸುಲಭ ಸಾಧ್ಯವಿಲ್ಲ. ಈಗಲಾದರೂ ಮಲೆನಾಡಿಗರ ನೋವು ಸರ್ಕಾರಕ್ಕೆ ತಲುಪಬೇಕು. ದಶಕಗಳ ಸಮಸ್ಯೆಗೆ ಪರಿಹಾರ ದೊರಕಲೇಬೇಕು. ಯಾವ ಜಾತ್ರೆ, ಯಾವ ಧರ್ಮ, ಯಾವ ಪಕ್ಷ ಎಂಬ ಬೇಧವಿಲ್ಲದೆ ಎಲ್ಲರ ಸಮಸ್ಯೆಗಳಿಗೂ ಪರಿಹಾರ ದೊರಕಬೇಕು” ಎಂದು ಒತ್ತಾಯಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಓಟು ಹಾಕಿದರೆ ಮಾತ್ರ ನಾಗರಿಕರಾಗಿ ನಮ್ಮ ಕರ್ತವ್ಯ ಮುಗಿಯಲಿಲ್ಲ. ಯಾವುದಕ್ಕಾಗಿ ಓಟು ಹಾಕಿದೆವೋ ಆ ಉದ್ದೇಶ ಈಡೇರುವ ತನಕ ನಾವು ಒಟ್ಟಾಗಿ ಮತ್ತು ಗಟ್ಟಿಯಾಗಿ ದನಿ ಎತ್ತಬೇಕು. ಸಮಸ್ಯೆಯ ಪರಿಹಾರಕ್ಕೆ ಸೃಜನಶೀಲ ರೀತಿಯ ಪ್ರಯತ್ನ ಮುಂದುವರೆಸಲೇಬೇಕು. ಆ ನಿಟ್ಟಿನಲ್ಲಿ ಇದೊಂದು ವಿನೂತನ ಕ್ರಮ ಜುಲೈ 30 ರಂದು ಬಾಳೆ ಹೊನ್ನೂರಿನಲ್ಲಿ ಜನ-ದನಿ ಸಮಾವೇಶವನ್ನು ಹಮ್ಮಿಕೊಂಡಿದ್ದು, ಜನ ಪ್ರತಿನಿಧಿಗಳ ಜೊತೆ ಮುಕ್ತ ಸಂವಾದ ನಡೆಸುತ್ತೇವೆ” ಎಂದರು.

“ಸೆಕ್ಷನ್ 4 ಅರಣ್ಯ ಹಕ್ಕು ಪತ್ರಕ್ಕೆ ಕಂದಾಯ ಭೂಮಿ ಬಡವರು, ತಳವರ್ಗ, ದೀನದಲಿತರಿಗೆ ತೊಂದರೆ ಆಗುತ್ತಿದೆ. ಭೂಮಿಯನ್ನು ಲೀಸ್‌ಗೆ ತೆಗೆದುಕೊಳ್ಳುತ್ತಿರುವ ಕಾರ್ಪೊರೇಷನ್ ಕಂಪನಿಗಳಿಗೆ ಅಸ್ತಾಂತರ ಮಾಡುತ್ತಿದ್ದಾರೆ. 2 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ದೊರೆಸ್ವಾಮಿ ನೇತೃತ್ವದಲ್ಲಿ ಅಕ್ರಮ ಸಕ್ರಮ ದೊಡ್ಡ ಹೋರಾಟ ಮಾಡಿದ್ದೆವು. ಪ್ರಯೋಜನವಾಗಲಿಲ್ಲ. ಇದೀಗ ಎಲ್ಲ ಶಾಸಕರು ಪಶ್ಚಿಮ ಘಟ್ಟದವರೆಗು ಸ್ಪಂದಿಸಬೇಕು. ಕೇರಳ ರಾಜ್ಯದಲ್ಲಿ ಮಾಡಿರುವ ಡಿ ನೋಟಿಫಿಕೇಶನ್ ತರಹ ಬದಲಾಗಬೇಕು. ಕಾಟಚಾರಗಳ ಭರವಸೆ ಆಗಬಾರದು” ಎಂದು ಆಗ್ರಹಿಸಿದರು.

“ಚಿಕ್ಕಮಗಳೂರು ಜಿಲ್ಲೆಯಿಂದ ಗೆದ್ದ ಶಾಸಕರೆಲ್ಲರೂ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದಲ್ಲಿ ನಾಗರಿಕ ಚಳವಳಿಯ ಸಂಚಲನ ಮೂಡಿಸಿದ ‘ಎದ್ದೇಳು ಕರ್ನಾಟಕ’ ಅಭಿಯಾನದ ಪ್ರಮುಖ ರಾಜ್ಯ ನಾಯಕರುಗಳು ಆಗಮಿಸುತ್ತಿದ್ದಾರೆ. ಜನ–ದನಿ ಸಮಾವೇಶ ಜನರ ಹಾಗೂ ಜನಪ್ರತಿನಿಧಿಗಳ ನಡುವಿನ ಸಂಬಂಧ ಹೇಗಿರಬೇಕು ಎಂಬುದಕ್ಕೆ ಹೊಸ ಮಾದರಿಯನ್ನು ಹುಟ್ಟುಹಾಕಲಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರಲ್ಲಿ ಸೇರಿದ್ದ ಎಲ್ಲರೂ ಪ್ರಧಾನಿ ಅಭ್ಯರ್ಥಿಗಳೇ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸಂಘಟನೆಯ ಹಿರಿಯ ಮುಖಂಡ ಗೌಸ್ ಮೊಹಿದ್ದೀನ್ ಮಾತನಾಡಿ, “ಬಹುತೇಕ ವರ್ಷಗಳಿಂದ ಭೂಮಿ ಇಲ್ಲದೆ ಹಾಗೂ ಇರುವ ಭೂಮಿಗೆ ಹಕ್ಕು ಪತ್ರವಿಲ್ಲದೆ ಮಲೆನಾಡಿನ ಜನರು ತತ್ತರಿಸುತ್ತಿದ್ದಾರೆ. ಪ್ರಸ್ತುತ ಸರ್ಕಾರ ಸರಿಯಾದ ಕ್ರಮದಲ್ಲಿ ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸಬೇಕು. ಸಮಾವೇಶಕ್ಕೆ ಚಿಕ್ಕಮಗಳೂರು ಜಿಲ್ಲೆಯ ಐದು ಮಂದಿ ಶಾಸಕರನ್ನೂ ಬರಲು ತಿಳಿಸಿದ್ದೇವೆ. ಅದರಲ್ಲಿ ಮೂಡಿಗೆರೆ, ಶೃಂಗೇರಿ, ಚಿಕ್ಕಮಗಳೂರು ಶಾಸಕರು ಒಪ್ಪಿಗೆ ಕೊಟ್ಟಿದ್ದಾರೆ. ಜನರ ಮುಂದೆ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಬೇಕು” ಎಂದು ಕೋರಿದರು.

ಕರ್ನಾಟಕ ಜನಶಕ್ತಿ ಕಡೂರು ಮುನ್ನ, ಬಣಕಲ್ ಅಸಿನಬ್ಬ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...