ಚಿಕ್ಕಮಗಳೂರು ಜಿಲ್ಲೆಯಲ್ಲಿ 2008ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ( ಶೌರ್ಯ ) ದಿನದ ಕಾರ್ಯಕ್ರಮವನ್ನು ಜನವರಿ 7ರಂದು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಎಲ್ಲರೂ ತಪ್ಪದೇ ಭಾಗವಹಿಸಬೇಕೆಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿಯಿಂದ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಏಕೆ ಆಚರಿಸುತ್ತಾರೆ: ಭಾರತದ ಚರಿತ್ರೆಯಲ್ಲಿ ಬ್ರಿಟಿಷ್ ಪೂರ್ವ ಮತ್ತು ಬ್ರಿಟಿಷ್ ಕಾಲದಲ್ಲಿ ಸಮಾನತೆ ಮತ್ತು ಸ್ವಾಭಿಮಾನಕ್ಕಾಗಿ ಅನೇಕ ಹೋರಾಟಗಳು ನಡೆದಿವೆ. ಅತ್ಯಂತ ಮಹತ್ವವಾದಗಳಲ್ಲಿ ಕೋರೇಗಾಂವ್ ಒಂದಾಗಿದೆ. ಸುಮಾರು 200 ವರ್ಷಗಳ ಹಿಂದೆ ಪೇಶ್ವೇಗಳ ಕಾಲದಲ್ಲಿ ಮನಸ್ಸೃತಿಗೆ ಪ್ರಕಾರ ಅಸ್ಪೃಶ್ಯರು ದಾರಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ಅವರ ನೆರಳು ಬ್ರಾಹ್ಮಣರ ಮೇಲೆ ಬೀಳಬಾರದು , ದಾರಿಯಲ್ಲಿ ಉಗುಳಬಾರದು, ಸಂಜೆ ಮತ್ತು ಬೆಳಗ್ಗೆ ಊರಿನ ಒಳಗೆ ಬರುವಂತೆ ಇರಲಿಲ್ಲ ಆ ಸಮಯದಲ್ಲಿ ನೆರಳು ತುಂಬಾ ಉದ್ದವಾಗಿರುತ್ತದೆನೆರಳು ತುಂಬಾ ಉದ್ದವಾಗಿರುತ್ತದೆ. ಇದು ಆ ಕಾಲಘಟ್ಟದ ಕರಾಳ ವ್ಯವಸ್ಥೆಗೆ ಉದಾಹರಣೆಯಾಗಿತ್ತು.
31/12/1917 ರಂದು ಪುಣೆಯಿಂದ ಮದ್ದು ಗುಂಡುಗಳೊಂದಿಗೆ ಹೊರಟ ಬಾಂಬೆ ರೆಜಿಮೆಂಟ್ ಸೈನ್ಯವು ಸತತ ಹನ್ನೆರಡು ಗಂಟೆಗಳ ನಡಿಗೆಯೊಂದಿಗೆ ಭೀಮ ನದಿ ತೀರದ ಕೋರೆಗಾಂವ್ ಸ್ಥಳದಲ್ಲಿ ಮದ್ದು ಗುಂಡುಗಳ ಸಿಡಿತದೊಂದಿಗೆ ಯುದ್ಧ ಆರಂಭವಾಗಿ ನೂರಾರು ಪೇಶ್ವ ಸೈನಿಕರು ಹತ್ತರಾದರು. ಇಡೀ ರಾತ್ರಿ ನಡೆದ ಯುದ್ಧದಲ್ಲಿ ಪೇಶ್ವೆಗಳ 28,000 ಸೈನಿಕರು ಮರಣ ಹೊಂದುತ್ತಾರೆ 171 ರೆಜಿಮೆಂಟ್ ಸೈನಿಕರ ಬಲಿದಾನದೊಂದಿಗೆ ಜನವರಿ 1, 1818ರಂದು ಬೆಳಗ್ಗೆ ಭೀಮ ನದಿಯಲ್ಲಿ ಸ್ನಾನ ಮಾಡಿ ವಿಜಯೋತ್ಸವ ಆಚರಿಸುತ್ತಾರೆ ಈ ಐತಿಹಾಸಿಕ ಹೋರಾಟಕ್ಕೆ ಸ್ವಾಭಿಮಾನ ಹೋರಾಟದ ನೆನಪಿಗಾಗಿ ಪ್ರತಿ ವರ್ಷ ಜನವರಿ 1ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಡದಿದ್ದರೇ ಸರ್ಕಾರ ವಿರುದ್ಧ ಹೋರಾಟದ ಎಚ್ಚರಿಕೆ; ಎಐಡಿಎಸ್ಓ
ಹಾಗೆಯೇ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನವರಿ 7 ರಂದು ಭೀಮಾ ಕೋರೆಗಾಂವ್ ವಿಜಯೋತ್ಸವಗಳನ್ನು ಅದ್ದೂರಿಯಿಂದ ಆಚರಿಸಲಾಗುತ್ತಿದೆ ಈ ಕಾರ್ಯಕ್ರಮಕ್ಕೆ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಚಿಕ್ಕಮಗಳೂರಿನ ಕ್ಷೇತ್ರ ಮೂಡಿಗೆರೆ ಕ್ಷೇತ್ರ ಶಾಸಕರು, 50 ಸಮಿತಿಯ ಒಕ್ಕೂಟದಿಂದ ಆಯೋಜಿಸಲಾಗಿದ್ದು, ಸಮಸ್ತ ನಾಗರಿಕರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ದಸಂಸ ಮುಖಂಡ ಮರ್ಲೆ ಅಣ್ಣಯ್ಯ ತಿಳಿಸಿದರು. ಈ ವೇಳೆ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ ಸಮಿತಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.





