ಯುವಕನೊರ್ವನ ಮೇಲೆ ಜಾತಿ ನಿಂದನೆ ಮಾಡಿ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ಆಲ್ಲೂರು ಪಟ್ಟಣದಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದ ಯುವಕ ಮಧು ಎಂಬಾತ, ಹವಳ್ಳಿ ಮೂಲದ ನಿವಾಸಿ. ಸುಧಾಕರ್ ಎಂಬಾತ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಕಳೆದ ನಾಲ್ಕು ತಿಂಗಳಿಂದಲೂ ಸುಧಾಕರ್, ಮಧು ಅವರನ್ನು ಕಂಡಾಗಲೆಲ್ಲಾ ಅವರ ಜಾತಿಯ ಬಗ್ಗೆ ಹೀಯಾಳಿಸುತ್ತಾ ನಿಂದಿಸುತ್ತಿದ್ದ, ಡಿಸೆಂಬರ್ 27ರಂದು ಮಧ್ಯಾಹ್ನ ಮಧು ರಸ್ತೆಯಲ್ಲಿ ಹೋಗುತ್ತಿದ್ದಾಗ ಸುಧಾಕರ್ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾನೆ.. 27ರಂದು ಸಂಜೆ ಸುಧಾಕರ್, ಮಧುಗೆ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೆ, ತನ್ನ ಫೈನಾನ್ಸ್ ಕಚೇರಿ ಬಳಿ ಬರುವಂತೆ ಹೇಳಿದ್ದಾನೆ. ಅಲ್ಲಿಯೂ ಮತ್ತೆ ಜಾತಿ ನಿಂದನೆ ಮಾಡಿ, ಏಕಾಏಕಿ ಮಚ್ಚಿನಿಂದ ಮಧು ಅವರ ತಲೆಯ ಹಿಂಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಆರೋಪ ಮಾಡಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಪ್ರಾಪ್ತ ಬಾಲಕ ವಾಹನ ಚಲಾಯಿಸಿದಕ್ಕೆ ತಂದೆಗೆ ದಂಡ; ಜೆಎಂಎಫ್‌ಸಿ ನ್ಯಾಯಾಲಯ
ಹಲ್ಲೆಗೆ ಒಳಗಾದ ಯುವಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಸುಧಾಕರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಕುರಿತು ಗಾಯಾಳು ಮಧು ಅವರ ತಂದೆ ಸುಂದರ್ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ಸಮಿತಿ ಸದಸ್ಯ ಹುಣಸೆಮಕ್ಕಿ ಲಕ್ಷ್ಮಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ





