ಚಿಕ್ಕಮಗಳೂರು l ಉರುಸ್ ಹಬ್ಬದಲ್ಲಿ ಅವ್ಯವಸ್ಥೆ; ಆಡಳಿತಾಧಿಕಾರಿಗಳ ನಿರ್ಲಕ್ಷ್ಯವೆಂದ ಜನರು

Date:

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಬಾಬಾ ಬುಡನ್ ಗಿರಿಯಲ್ಲಿ ಸುಮಾರು ವರ್ಷಗಳಿಂದ ಉರುಸ್ ಹಬ್ಬದ ಆಚರಣೆಯನ್ನು ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಈ ಹಬ್ಬಕ್ಕೆ ಹಿಂದೂ ಹಾಗೂ ಎಲ್ಲಾ ಸಮುದಾಯದವರು ಭಾಗವಹಿಸುವುದು ವಾಡಿಕೆಯಿದೆ.

Screenshot 2025 03 16 20 09 40 37 965bbf4d18d205f782c6b8409c5773a4
ಬಾಬಾ ಬುಡನ್ ಗಿರಿಯಲ್ಲಿ ಪ್ರವಾಸಿಗರಿಲ್ಲದೆ ಖಾಲಿ ಕಾಣುತ್ತಿರುವ ಪ್ರದೇಶ

ಅದೇ ರೀತಿಯಲ್ಲಿ 15 ರಿಂದ ಶುರುವಾಗಿ ಮೂರು ದಿನಗಳ ಕಾಲ ಉರುಸ್ ಆಚರಣೆ ನಡೆಯುತ್ತದೆ. ಶನಿವಾರದಂದು ಎಂದಿನಂತೆ ಉರುಸ್ ಹಬ್ಬದ ಆಚರಣೆ ವಿಜೃಂಭಣೆಯಿಂದ ನಡೆದಿದೆ. ಆದರೆ, ವ್ಯವಸ್ಥೆ ಮಾತ್ರ ಕುಂಠಿತವಾಗಿದೆ ಎನ್ನಬಹುದು. ಈದಿನ.ಕಾಮ್ ತಂಡ ಉರುಸ್ ಹಬ್ಬದ ಆಚರಣೆ ಕುರಿತು ಜನಾಭಿಪ್ರಾಯ ಸಂಗ್ರಹ ಮಾಡಲು ತೆರಳಿದಾಗ ಅಲ್ಲಿನ ಜನರು ಉರುಸ್ ಹಬ್ಬದ ಅವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ.

“ಸುಮಾರು ವರ್ಷಗಳಿಂದ ವ್ಯಾಪಾರ ನಡೆಸಿಕೊಂಡು ಜೀವನ ಸಾಗಿಸುತ್ತಾ ಇದ್ದೇವೆ, 25 ವರ್ಷಗಳಿಂದ ಉರುಸ್ ನಡೆಯುವ ಸಮಯದಲ್ಲಿ ಈ ಭಾಗಕ್ಕೆ ಚಿಕ್ಕಮಗಳೂರಿನಿಂದ ಗಿರಿಗೆ ಬಸ್ ಹಾಗೂ ಇತರ ವಾಹನಗಳ ವ್ಯವಸ್ಥೆ ಇತ್ತು, ದೂರದ ಊರುಗಳಿಂದ ಹಾಗೂ ಜಿಲ್ಲೆಗಳಿಂದ ಬರುವ ಜನರಿಗೆ ಅನುಕೂಲವಾಗುತ್ತಿತ್ತು. ಬರುವ ಜನರು ಬಹಳ ಸಂತೋಷದಿಂದ ಬಂದು ಹೋಗುತ್ತಿದ್ದರು. ಆದರೆ, ಈಗ ಉರುಸ್ ಹಬ್ಬದ ಸಮಯದಲ್ಲಿ 3 ದಿನಗಳ ಕಾಲ ಬಸ್ ಬಿಡುತ್ತೇವೆಂದು ಜಿಲ್ಲಾಡಳಿತ ತಿಳಿಸಿತ್ತು. ಇಲ್ಲಿ ನೋಡಿದರೆ ಬಸ್ಸು ಇಲ್ಲ, ಯಾವ ವಾಹನಗಳು ಇಲ್ಲ, ಅದರಲ್ಲೂ ಪ್ರವಾಸಿಗರು ಬರದಂತೆ 3 ದಿನಗಳ ಕಾಲ ನಿರ್ಬಂಧ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಉಪವಾಸದಲ್ಲೂ ದೂರದಿಂದ ಬರಬೇಕು. ಅವರೆಲ್ಲ ಏನು ಮಾಡಬೇಕು, ಕೆಲವರು ಬಡವರು ಹೇಗೋ ಹಣ ಉಳಿತಾಯ ಮಾಡಿ ಉರುಸ್ ಹಬ್ಬಕ್ಕೆ ಬರುತ್ತಾರೆ. ವಾಹನ ಬಾಡಿಗೆದಾರರು 100 ರೂ. ಬದಲು 500-1000 ಬಾಡಿಗೆ ಹೇಳಿದರೆ ಉರುಸ್ ಹಬ್ಬಕ್ಕೆ ಬರುವ ಜನರ ಪರಿಸ್ಥಿತಿ ಏನಾಗಬೇಕು” ಎಂದು ಅಭಿಬುಲ್ಲ ಖಾನ್ ಮತ್ತು ದಾವಣಗೆರೆಯ ಮಹಾಂತೇಶ್ ಈದಿನ ಡಾಟ್ ಕಾಮ್ ಜೊತೆ ಅಳಲು ತೋಡಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
IMG 20250316 WA0034
ಕುಡಿಯುವ ನೀರಿನ ಟ್ಯಾಂಕರ್

ನೀರು ಹರಿಯುವ ಗುಡ್ಡಗಾಡು ಪ್ರದೇಶ ನಮ್ಮದು. ಮೋಟಾರಿಂದ ನೀರನ್ನು ಬೇಕಾದಷ್ಟು ಬಳಸಬಹುದು. ವಾಟರ್ ಮ್ಯಾನ್ ಇದ್ದರು. ಅವರು ಈಗ ನಿವೃತ್ತಿ ಆಗಿದ್ದಾರೆ. ಕೇಳಿದರೆ ಸಮಿತಿ ನಿರ್ಧಾರ ಮಾಡಬೇಕು, ಜಿಲ್ಲಾಧಿಕಾರಿಯವರಿಗೆ ಈ ವಿಚಾರ ನಿರ್ಧಾರ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಸದ್ಯಕ್ಕೆ ಬೇರೆಯವರನ್ನು ಉರುಸ್ ಸಮಯದಲ್ಲಿ ತಾತ್ಕಾಲಿಕವಾಗಿ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಜವಾಬ್ದಾರಿ ಹೊತ್ತ ಇಓ ಅವರಿಗೆ ತಿಳಿಸಿದರೆ, ಬರಿ ಸರಿ ಎನ್ನುತ್ತಾರೆ ಬಿಟ್ಟರೆ ಏನೂ ಪ್ರಯೋಜನವಿಲ್. ಕೆಲಸ ಮಾತ್ರ ಶೂನ್ಯವಾಗಿದೆ. ನಮಗೆ ಉರುಸ್ ಸಮಯದಲ್ಲಿ ವಿದ್ಯುತ್, ನೀರಿನ ಸಮಸ್ಯೆ ಆಗಿದೆ. ನಿರಂತರವಾಗಿ ಅಧಿಕಾರಿಗೆ ಒತ್ತಡ ಹಾಕಿದ ನಂತರ ನೀರನ್ನು ತರಿಸಿ ಕೊಟ್ಟಿದ್ದಾರೆಂದು ಸ್ಥಳೀಯ ನಿವಾಸಿ ಮುನ್ನ ಈದಿನ ಡಾಟ್‌ ಕಾಮ್‌ಗೆ ತಿಳಿಸಿದ್ದಾರೆ.

Screenshot 2025 03 16 20 26 49 09 965bbf4d18d205f782c6b8409c5773a4

ಹಾಗೆಯೇ, ಒಂದು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದಾರೆ. ಆದರೆ ಸುಮಾರು ವರ್ಷಗಳಿಂದ ಈ ಭಾಗದಲ್ಲಿದ್ದ, ಸ್ಥಳೀಯ ಜನರು ಹಾಗೂ ಸಮಿತಿಯ ಸದಸ್ಯರನ್ನು ಬಿಟ್ಟು ಬೇರೆಯವರನ್ನು ಕರೆಸಿ ಸಭೆ ನಡೆಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಉರುಸ್ ಹಬ್ಬಕ್ಕೆ ಸರಿಯಾದ ತಯಾರಿ ಮಾಡಿಲ್ಲ, ಕುಂದು ಕೊರತೆ ಬಗ್ಗೆ ಕೇಳೋರು ಯಾರು ಇಲ್ಲದಾಗಿದೆ. ಸ್ಥಳೀಯರು ಹಾಗೂ ಪ್ರವಾಸಿಗರು ಪ್ಲಾಸ್ಟಿಕ್ ನೀರಿನ ಬಾಟಲ್ ಉಪಯೋಗಿಸಬಾರದು, ಪರಿಸರಕ್ಕೆ ಹಾನಿಯಾಗುತ್ತದೆಂದು ಆಡಳಿತಾಧಿಕಾರಿಗಳು ಹೇಳುತ್ತಾರೆ. ಆದರೆ, ಆಡಳಿತಾಧಿಕಾರಿಗಳು ಏನೂ ಮಾಡ್ತಾ ಇದ್ದಾರೆ? ಅವರು ಮಾತ್ರ ಪ್ಲಾಸ್ಟಿಕ್ ನೀರಿನ ಬಾಟಲಿಗಳು ಬಳಸಬಹುದಾ? ಎಂದು ಬಾಬಾ ಬುಡನ್ ಗಿರಿಯ ಸ್ಥಳೀಯರು ಹಾಗೂ ನೆರದಿದ್ದ ಜನರು ಆಡಳಿತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

IMG 20250316 WA0033
ನಮಾಜ್ ಮಾಡುವ ಮೊದಲು ವಝು ಮಾಡುವುದಕ್ಕೆ ಶೌಚಾಲಯದ ಬಜೆಟ್ ಹಾಗೂ ನೀರನ್ನು ಬಳಸುತ್ತಿರುವ ದೃಶ್ಯ

ಬೇರೆ ಬೇರೆ ಆಚರಣೆಗಳು ಇದ್ದಾಗ ಒಂದು ಚೂರು ಅವ್ಯವಸ್ಥೆಯಾಗದ ರೀತಿಯಲ್ಲಿ ಆಡಳಿತ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಹಾಗೆಯೇ, ಪ್ರವಾಸಿಗರು ಹಾಗೂ ಪ್ರತಿಯೊಬ್ಬರೂ ಹಾಜರಾಗುವ ಅವಕಾಶವಿರುತ್ತದೆ. ಆದರೆ, ಉರುಸ್ ಆಚರಣೆ ವೇಳೆ ಮಾತ್ರ ಪ್ರವಾಸಿಗರ ನಿರ್ಬಂಧ ಹಾಗೂ ಬೇರೆ ಸಮುದಾಯದ ಜನರು ಬರದಂತೆ ನಿರ್ಬಂಧವನ್ನು ಯಾಕೆ ಹೇರಲಾಗುತ್ತದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಹಾಗೆಯೇ ಎಲ್ಲಾ ಸಮುದಾಯದ ಸ್ಥಳೀಯ ನಿವಾಸಿಗಳು ಹಾಗೂ ನೆರದಿದ್ದ ಜನರು ಆಡಳಿತಾಧಿಕಾರಿಗಳನ್ನು ಟೀಕಿಸಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮಾರ್ಚ್ 15 ರಿಂದ 17ರವರೆಗೆ ಪ್ರವಾಸಿಗರ ನಿರ್ಬಂಧ 

ಬಾಬಾ ಬುಡನ್ ಗಿರಿಯಲ್ಲಿ ಹಿಂದೂ ಅಥವಾ ಮುಸ್ಲಿಂ ಸಮುದಾಯದವರು ಭಾವೈಕ್ಯತೆಯಿಂದ ಆಚರಿಸುವ ಹಬ್ಬ ಯಾವುದೇ ಇರಲಿ, ಆಚರಣೆಗಳು ಮಾಡುವಾಗ ಸರಿ ಸಮನಾದ ವ್ಯವಸ್ಥೆ ಆಗಬೇಕು. ಎಲ್ಲಾ ಸಮುದಾಯದವರು ಭಾಗಿಯಾಗಿ ಬರುವ ಜನರಿಗೆ ಸಂತೋಷ  ಅನಿಸಬೇಕೇ ಹೊರತು ಹೊರೆಯಾಗಬಾರದು. ಹಾಗೆಯೇ, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಆಗದಂತೆ ಆಡಳಿತ ವರ್ಗ ಹಾಗೂ ಸಮಿತಿಯವರು ಜಾಗರೂಕತೆಯಿಂದ ನೆರವೇರಿಸಬೇಕೆಂದು ದೂರದ ಊರುಗಳಿಂದ ಬಂದಂತಹ ಜನರು ಅಭಿಪ್ರಾಯ ವ್ಯಕಪಡಿಸಿದರು.

WhatsApp Image 2024 10 24 at 12.02.30
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...