ಚಿಕ್ಕಮಗಳೂರು ಜಿಲ್ಲೆಯ, ಶೃಂಗೇರಿ ತಾಲೂಕಿನ ಅಗಲಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಗಲಗಂಚಿ ಗ್ರಾಮದ ನಿವಾಸಿಗಳು ಮೂaಲ ಸೌಕರ್ಯಗಳೊಂದಾದ ಡಾಂಬರೀಕರಣಗೊಳ್ಳದ ರಸ್ತೆಯಿಂದ ಅಲ್ಲಿನ ಗ್ರಾಮಸ್ಥರು ಬೇಸತ್ತಿದ್ದಾರೆ.
ಒಂದು ವರ್ಷದ ಹಿಂದೇ ಶೃಂಗೇರಿ ಕ್ಷೇತ್ರದ ಶಾಸಕರು ಈ ಊರಿಗೆ ಎಂದು ಹಣವನ್ನು ಮೀಸಲಿಡಲಾಗಿದೆ. ಮಳೆಗಾಲ ಕಳೆದ ನಂತರ ಡಾಂಬರ್ ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೂ ಇಲ್ಲಿವರೆಗೂ ಹಾಗಲಗಂಚಿ ಗ್ರಾಮಕ್ಕೆ ಒಳ್ಳೆಯ ಅಭಿವೃದ್ಧಿ ಹೊಂದಿರುವ ರಸ್ತೆಯನ್ನು ಕಾಣದಾಗಿದೆ ಎಂದು ಕರ್ನಾಟಕ ಜನಶಕ್ತಿ ಕೆ ಎಲ್ ಅಶೋಕ್ ಈ ದಿನ. ಕಾಮ್ ಜೊತೆ ಮಾತಾಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಂದಾಯ ಭೂಮಿ ಮೀಸಲು ಅರಣ್ಯಕ್ಕೆ ಸೇರಿಸಿ ರೈತರಿಗೆ ಅನ್ಯಾಯ ಮಾಡಬೇಡಿ; ಕಳಸ ರೈತ, ಕಾರ್ಮಿಕ ಹಿತ ರಕ್ಷಣಾ ಸಮಿತಿ
ಈ ಸಮಸ್ಯೆ ಕುರಿತು ಶಾಸಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.“ಇನ್ನು ಮುಂದೆಯಾದರೂ, ಈ ಸಮಸ್ಯೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರು ಗಮನವಹಿಸಿ ಹಾಗಲಗಂಚಿ ಗ್ರಾಮದ ಸಮಸ್ಯೆಯನ್ನು ಬಗೆಹರಿಸುವರೇ” ಎಂಬುದನ್ನು ಕಾದು ನೋಡಬೇಕಿದೆ.





