ಚಿಕ್ಕಮಗಳೂರು l ಕಂದಾಯ ಭೂಮಿ ಮೀಸಲು ಅರಣ್ಯಕ್ಕೆ ಸೇರಿಸಿ ರೈತರಿಗೆ ಅನ್ಯಾಯ ಮಾಡಬೇಡಿ; ಕಳಸ ರೈತ, ಕಾರ್ಮಿಕ ಹಿತ ರಕ್ಷಣಾ ಸಮಿತಿ

Date:

ಹೊರನಾಡು, ಇಡಕಿಣಿ ಇನ್ನಿತರ ಕೆಲವು ಗ್ರಾಮಗಳಲ್ಲಿ ಕೆಲವು ಸರ್ವೆ ನಂಬರುಗಳಲ್ಲಿ ಇರುವ ಕಂದಾಯ ಭೂಮಿಯನ್ನು ಪರಿಭಾವಿತ ಅರಣ್ಯದ ಹೆಸರಿನಲ್ಲಿ ಅರಣ್ಯಕ್ಕೆ ವಹಿಸುವ ಪ್ರಸ್ತಾವನೆ ಆ ಪ್ರಯುಕ್ತ ಈಗಾಗಲೇ ಆಯಾಯ ಗ್ರಾಮದ ಕೆಲವು ಸರ್ವೆ ನಂಬರುಗಳಲ್ಲಿ ಕೃಷಿ ಮಾಡಿಕೊಂಡು ವಾಸ ಮಾಡುತ್ತಿರುವ ಕೆಲವಷ್ಟು ರೈತರಿಗೆ ತಮ್ಮ ಅನುಭವದಲ್ಲಿರುವ ಪ್ರದೇಶದ ಪೂರಕವಾಗಿರುವ ದಾಖಲಾತಿಗಳೊಂದಿಗೆ ಅಕ್ಷೇಪಣೆಗಳಿದ್ದರೆ ಲಿಖಿತ ಮನವಿಯನ್ನು ನೀಡುವಂತೆ ಕಳಸ ವಲಯ ಅರಣ್ಯಾಧಿಕಾರಿಗಳು 25-11-2025ಕ್ಕೆ ಖುದ್ದು ಹಾಜರಾಗಿ ವಿಚಾರಣೆಗೆ ಒಳಪಡುವಂತೆ ನೋಟೀಸ್ ನೀಡಿದ್ದಾರೆ ಎಂದು ರೈತ ಮುಖಂಡ ಸುರೇಶ್ ಭಟ್ ತಿಳಿಸಿದರು.

ಹಾಗೆಯೇ, ಈ ಹಿಂದೆ 2-3 ಬಾರಿ ಇದೇ ರೀತಿ ನೋಟೀಸನ್ನು  ಕೊಟ್ಟಿದ್ದಾರೆ. ಮೊದಲ ಬಾರಿ ಕಡೂರಿನಲ್ಲಿರುವ ವ್ಯವಸ್ಥಾಪನಾಧಿಕಾರಿ ಕಛೇರಿಗೆ ದಾಖಲಾತಿ ಹಾಗೂ ಆಕ್ಷೇಪಣೆಯನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ಕಳಸದಲ್ಲೂ ಆಕ್ಷೇಪಣೆಯನ್ನು ಪಡೆದುಕೊಂಡಿದ್ದರು, ನಾವುಗಳು ಪ್ರತಿಬಾರಿಯೂ ಆಕ್ಷೇಪಣೆಯನ್ನು ಸಲ್ಲಿಸಿದರು ಕಳಕೋಡು ಗ್ರಾಮದಲ್ಲಿ ಸ. ನಂ. 20, 55, 70 ಮತ್ತು 80ರಲ್ಲಿ ಒಟ್ಟು 550.19 ಎಕರೆ ಪ್ರದೇಶವನ್ನು ಮೀಸಲು ಅರಣ್ಯವನ್ನಾಗಿ ಸಂರಚಿಸುವ ಪ್ರಸ್ತಾವನೆ ಇರುತ್ತದೆ. ಸ. ನಂ. 20ರಲ್ಲಿ 123.30 ಎಕರೆ ಕಂದಾಯ, 100 ಎಕರೆ ಅರಣ್ಯ, ಸ. ನಂ. 70ರಲ್ಲಿ 129.00 ಕಂದಾಯ, 474 ಎಕರೆ ಅರಣ್ಯ. ಸ. ನಂ. 80ರಲ್ಲಿ 407,06 ಎಕರೆ ಕಂದಾಯ, 175 ಎಕರೆ ಅರಣ್ಯ, ಸ. ನಂ. 55ರಲ್ಲಿ ಇದು ಕಾಫಿ ಖರಾಬಾಗಿದ್ದು, 49.38 ಎಕರೆ ಇರುತ್ತದೆ. ಈ ಸರ್ವೆ ನಂಬರುಗಳಲ್ಲಿ ಒಟ್ಟು 709.34 ಗೋಮಾಳ ಭೂಮಿ ಇದ್ದು, 749 ಅರಣ್ಯವಾಗಿರುತ್ತದೆ. ರೈತರು ತಲ ತಲಾಂತರ ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದು ಕಳಕೋಡು ಗ್ರಾಮದ ರೈತ ನವೀನ್ ಮಾತಾಡಿದರು.

ಹೊರನಾಡು ಗ್ರಾಮದಲ್ಲೂ ಸ. ನಂ. 62, 65, 76, 81, 90, 98, 175, 229 ಮತ್ತು 166ರಲ್ಲಿ ಒಟ್ಟು 1299.39 ಎಕರೆ ಪ್ರದೇಶವನ್ನು ಅನ್ನಪೂರ್ಣೇಶ್ವರಿ ಮೀಸಲು ಅರಣ್ಯವನ್ನಾಗಿ ಸಂರಚಿಸುವ ಕುರಿತು ಈ ಮೇಲ್ಕಾಣಿಸಿದ ಸರ್ವೆ ನಂಬರುಗಳಲ್ಲಿ ವಾಸಿಸುವ ರೈತರು ಕಾರ್ಮಿಕರಿಗೆ ನೋಟೀಸನ್ನು ನೀಡಿದ್ದು, 3 ಬಾರಿ ದಾಖಲಾತಿಗಳನ್ನು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲಾಗಿದೆ. ಈ ರೀತಿ ಪದೇ ಪದೇ ನೋಟೀಸನ್ನು ನೀಡುತ್ತಿರುವುದು ಇಲ್ಲಿನ ರೈತರಿಗೆ ಆತಂಕ ಮತ್ತು ಹಿಂಸೆಯನ್ನು ನೀಡಿದಂತಾಗುತ್ತಿದೆ. ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡುತ್ತೇವೆಂದು ಕಳಸ ರೈತ ಕಾರ್ಮಿಕ ಹಿತರಕ್ಷಣಾ ಸಮಿತಿಯಿಂದ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಬಿಸಿಯೂಟ ಅಡುಗೆ ಸಿಬ್ಬಂದಿಯ ಗೌರವಧನ ಕೇಂದ್ರ ಸರ್ಕಾರ ಹೆಚ್ಚಿಸಿಲ್ಲ; ಶಾಸಕ ಹೆಚ್.ಡಿ ತಮ್ಮಯ್ಯ

ಈ ವೇಳೆ ರೈತ ಸಂಘದ ಅಧ್ಯಕ್ಷರು ಸುರೇಶ್ ಭಟ್, ಗೌಸ್ ಮೋಹದ್ದಿನ್ ಕರ್ನಾಟಕ ಜನಶಕ್ತಿ, ಕೆ.ಎಲ್ಅಶೋಕ್ ಮಲೆನಾಡು ಉಳಿಸಿ ಅಭಿಯಾನ, ಕೆ.ಎಲ್ ವಾಸು ಕಳಸ, ಗುರು ರಾಜೇಶ್ ಸಂಸೆ, ನವೀನ್ ಕಳಕೋಡು, ಮುನ್ನ ಕಡೂರು,ನವೀನ್, ಶ್ರೀನಿವಾಸ್ ಸಂಸೆ, ಸಂದೀಪ್ ಹಾಗೂ ಇನ್ನಿತರರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...