ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಮಾಡಿ, ಸುತ್ತಮುತ್ತ ಭಾಗದಲ್ಲಿ ವಾಸಿಸುತ್ತಿರುವ ಜನರು ಸಣ್ಣ ಪುಟ್ಟ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅದನ್ನ ಅರಣ್ಯ ಇಲಾಖೆಯಿಂದ ಪದೆ ಪದೇ ನೋಟೀಸ್ ಕೊಟ್ಟು ಅಲ್ಲಿಂದ ವಸತಿರಹಿತ ಹಾಗೂ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ. ಅರಣ್ಯ ಹಾಗೂ ಕಂದಾಯ ಅರಣ್ಯ ಭೂಮಿಯನ್ನು ದೊಡ್ಡ ದೊಡ್ಡ ಭೂ ಮಾಲೀಕರು ಒತ್ತುವರಿ ಮಾಡಿದ್ದಾರೆ. ಅಂತವರನ್ನ ಬಿಟ್ಟು ಕಾಡನ್ನ ರಕ್ಷಣೆ ಮಾಡಿಕೊಂಡು ಬದುಕು ನಿರ್ವಹಣೆಗಾಗಿ ಕೃಷಿ ಅವಲಂಬಿಸಿದವರನ್ನು ಒಕ್ಕಲೆಬ್ಬಿಸುವುದು ಅದೆಷ್ಟು ಸರಿ. ಇದೇ ರೀತಿ ನೋಟೀಸ್ ಕಳಿಸುತ್ತಾ ಬಂದರೆ ಉಗ್ರ ಹೋರಾಟ ಮಾಡುತ್ತೇವೆಂದು ಮಲೆನಾಡು ಉಳಿಸಿ ಅಭಿಯಾನ ಮುಖಂಡ ಕೆ.ಎಲ್ ಅಶೋಕ್ ಈದಿನ. ಕಾಮ್ ಜೊತೆ ಮಾತಾಡಿದ್ದಾರೆ.

ಹೊರನಾಡು, ಇಡಕಿಣಿ ಇನ್ನಿತರ ಕೆಲವು ಗ್ರಾಮಗಳಲ್ಲಿ ಕೆಲವು ಸರ್ವೆ ನಂಬರುಗಳಲ್ಲಿ ಇರುವ ಕಂದಾಯ ಭೂಮಿಯನ್ನು ಪರಿಭಾವಿತ ಅರಣ್ಯದ ಹೆಸರಿನಲ್ಲಿ ಅರಣ್ಯಕ್ಕೆ ವಹಿಸುವ ಪ್ರಸ್ತಾವನೆ ಆ ಪ್ರಯುಕ್ತ ಈಗಾಗಲೇ ಆಯಾಯ ಗ್ರಾಮದ ಕೆಲವು ಸರ್ವೆ ನಂಬರುಗಳಲ್ಲಿ ಕೃಷಿ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಹೊರನಾಡು ಗ್ರಾಮದಲ್ಲೂ ಸ. ನಂ. 62, 65, 76, 81, 90, 98, 175, 229 ಮತ್ತು 166ರಲ್ಲಿ ಒಟ್ಟು 1299.39 ಎಕರೆ ಪ್ರದೇಶವನ್ನು ಅನ್ನಪೂರ್ಣೇಶ್ವರಿ ಮೀಸಲು ಅರಣ್ಯವನ್ನಾಗಿ ಸಂರಚಿಸುವ ಈ ಮೇಲ್ಕಾಣಿಸಿದ ಸರ್ವೆ ನಂಬರುಗಳಲ್ಲಿ ವಾಸಿಸುವ ರೈತರು ಕಾರ್ಮಿಕರಿಗೆ ನೋಟೀಸನ್ನು ನೀಡಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕಂದಾಯ ಭೂಮಿ ಮೀಸಲು ಅರಣ್ಯಕ್ಕೆ ಸೇರಿಸಿ ರೈತರಿಗೆ ಅನ್ಯಾಯ ಮಾಡಬೇಡಿ; ಕಳಸ ರೈತ, ಕಾರ್ಮಿಕ ಹಿತ ರಕ್ಷಣಾ ಸಮಿತಿ
ಈ ವೇಳೆ ಕಳಸ ರೈತ, ಕಾರ್ಮಿಕ ಹಿತರಕ್ಷಣಾ ಸಮಿತಿ, ಕರ್ನಾಟಕ ಜನಶಕ್ತಿ, ಎದ್ದೇಳು ಕರ್ನಾಟಕ, ಮುಖಂಡರು, ಕಾರ್ಯಕರ್ತರಿದ್ದರು





