ಕಾಂಗ್ರೆಸ್ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದ ವ್ಯಕ್ತಿಯಿಂದಲೇ ಮರು ಪ್ರಕರಣ ದಾಖಲು
ಈ ಕೊಲೆ ಪ್ರಕರಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪ್ರಮುಖ ಆರೋಪಿ ಸಂಜಯ್, ಇದೀಗ ಮೃತ ಗಣೇಶ್ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಸಂಜಯ್ ನೀಡಿದ ದೂರಿನಲ್ಲಿ ಮೃತ ಗಣೇಶ್, ಕತ್ತೆ ಸಂದೀಪ, ಕೋಳಿ ಅಂಗಡಿ ಅಪ್ಪು, ಚಂದು, ಅಭಿ, ಬಿಂದು, ರೋಷನ್ ಹಾಗೂ ಶ್ರೀಕಾಂತ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಆರಂಭದಲ್ಲಿ ದತ್ತಜಯಂತಿಯ ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ತೆಗೆಯುವ ವಿಚಾರದಲ್ಲಿ ಗಲಾಟೆ ನಡೆದು ಈ ಕೊಲೆ ಸಂಭವಿಸಿದೆ ಎಂದು ಹೇಳಲಾಗಿತ್ತಾದರೂ, ಪೊಲೀಸರ ತನಿಖೆಯಲ್ಲಿ ಹಳೆಯ ವೈಷಮ್ಯವೇ ಈ ಘಟನೆಗೆ ಮುಖ್ಯ ಕಾರಣವಾಗಿರುವ ಸಾಧ್ಯತೆ ಇದೆ ಎಂದು ಸಧ್ಯಕ್ಕೆ ಹೇಳಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಮಹಿಳೆಯ ಮಾಂಗಲ್ಯ ಸರ ಕಳ್ಳತನ
ಬಂಟಿಂಗ್ಸ್‌ಗಳನ್ನು ಬಿಚ್ಚುವ ಸಂದರ್ಭದಲ್ಲಿ ಸಂಜಯ್, ಗಣೇಶ್ ಸ್ನೇಹಿತರನ್ನು ಮಾತನಾಡುವುದಕ್ಕೆ ಯತ್ನಿಸಿದಾಗ ಹಲ್ಲೆ ಆರಂಭವಾಗಿದೆ ಎಂಬ ಮಾತು ಕೇಳಿ ಬಂದಿದೆ ಮತ್ತೊಂದು ಹೇಳಿಕೆಯ ಪ್ರಕಾರ, ಸಂಜಯ್ ಗಣೇಶನ ಮುಖವನ್ನು ನೋಡಿದ್ದಕ್ಕೆ ಗಣೇಶ್‌ನಿಂದಲೇ ಹಲ್ಲೆ ಆರಂಭವಾಯಿತು ಎನ್ನಲಾಗಿದೆ. ಸದ್ಯಕ್ಕೆ ಈ ಘಟನೆ ಹಳೇ ವೈಷಮ್ಯದಿಂದಲೇ ಗಲಾಟೆ ಮತ್ತು ಕೊಲೆಯಲ್ಲಿ ಅಂತ್ಯವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಸದ್ಯ ಸಖರಾಯಪಟ್ಟಣ ಠಾಣೆಯಲ್ಲಿ ಮೃತ ಗಣೇಶ್ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಯನ್ನು ಯಾರು ಮತ್ತು ಏಕೆ ಮಾಡಿದ್ದಾರೆ ಎಂಬ ಸತ್ಯಾಂಶವು ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ಹೊರಬರಬೇಕಿದೆ.





