ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತ ದೇಹವನ್ನು ಸಾಗಿಸಲು ಹರಸಾಹಸ ಪಡುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಸಂಕ್ಲಾಪುರ ಗ್ರಾಮದ ನಡೆದಿದೆ.
ಸುಮಾರು 40 ವರ್ಷಗಳಿಂದ ಸೂಕ್ತವಾದ ರಸ್ತೆ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಗುಡ್ಡದ ಮೇಲಿರುವ 20-25 ಮನೆಗಳ ಈ ಗ್ರಾಮವು ಶೃಂಗೇರಿ ಪಟ್ಟಣದಿಂದ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿದೆ. ಅದೇ ಗ್ರಾಮದ ಸರ್ಫುಲ್ಲಾ (65), ಎಂಬ ವ್ಯಕ್ತಿ ಹೃದಯದಿಂದ ಸಾವನ್ನಪ್ಪಿದ್ದರು, ಅವರ ಮೃತ ದೇಹವನ್ನು ಸಾಗಿಸಲು ಗುಡ್ಡದ ದಾರಿಯಲ್ಲಿ ಕಷ್ಟಪಟ್ಟು ಹೊತ್ತು ತರಲಾಯಿತು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ನಾಲ್ಕುವರೆ ವರ್ಷದ ಮಗುವನ್ನು ತಿಂದ ಚಿರತೆ
ಈ ಭಾಗದಲ್ಲಿ ಮೂಲಸೌಕರ್ಯಗಳ ಕೊರತೆ ಹೆಚ್ಚಿದೆ. ಮೃತದೇಹವನ್ನು ಮನೆಯಿಂದ ಮಸೀದಿಗೆ ಕೊಂಡೊಯ್ಯಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಈ ಕುರಿತು ದಶಕಗಳಿಂದ ರಸ್ತೆಗಾಗಿ ಮಾಡಿದ ಮನವಿಗಳಿಗೆ ಸ್ಪಂದನೆ ಸಿಕ್ಕಿಲ್ಲ ಎಂದೆಳುತ್ತಾರೆ ಗ್ರಾಮಸ್ಥರು.





