ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಸಮಿತಿಯ ಅಧ್ಯಕ್ಷರನ್ನು ಜಿಲ್ಲಾಸಮಿತಿ ಉಚ್ಚಾಟನೆ ಮಾಡಿರುವುದರ ವ್ಯಕ್ತಿಗಳ ವಿರುದ್ಧ ಚಿಕ್ಕಮಗಳೂರು ತಾಲೂಕಿನ ರೈತ ಸಂಘಟನೆಯಿಂದ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
ತುಳಸೇಗೌಡ ಮತ್ತು ದಯಾಕರ್ ಎಂಬುವವರು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರಲ್ಲ.ದಯಾಕರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತನಾಗಿದ್ದುಕೊಂಡು ಈಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರೀನ್ ಬ್ರಿಗೇಡ್ ಅಧ್ಯಕ್ಷ ಎಂದು ಹೇಳುತ್ತಾ ಹಲವಾರು ಬಾರಿ ಪತ್ರಿಕಾ ಹೇಳಿಕೆ ನೀಡಿರುವ ವ್ಯಕ್ತಿ. ತುಳಸೇಗೌಡ ಒಬ್ಬ ಯಾವ ಸಂಘಟನೆಯಲ್ಲೂ ನೆಲೆ ಇಲ್ಲದ ವ್ಯಕ್ತಿ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಮೂಲ ರೈತ ಸಂಘ ಎಂದು ಹೇಳಿಕೊಂಡು ಓಡಾಡುತ್ತಿದ್ದು, ಕಳೆದ ಐದಾರು ವರ್ಷಗಳಿಂದ ಹಸಿರು ಶಾಲು ಹಾಕಿಕೊಂಡು ಸ್ವಹಿತಸಕ್ತಿಗೋಸ್ಕರ ರೈತ ಸಂಘದ ಹೆಸರೇಳಿಕೊಂಡು ಓಡಾಡುವ ವ್ಯಕ್ತಿಗಳು. 45 ವರ್ಷಗಳಿಂದ ಸಂಘಟನೆಯಲ್ಲೇ ಇದ್ದುಕೊಂಡು ಸೈದ್ಧಾಂತಿಕ ಹಾಗೂ ಜ್ಯಾತ್ಯಾತೀತ ವಿಚಾರಗಳಿಗೆ ಬದ್ದರಾಗಿ ರೈತಪರ ಚಳುವಳಿ ಹೋರಾಟಗಳಲ್ಲಿ ತೊಡಗಿಸಿಕೊಂಡು ಲಾಟಿ ಏಟು, ಜೈಲು ಶಿಕ್ಷೆಯೆಂದು ಎದೆಗುಂದದೆ ಗಟ್ಟಿಯಾಗಿ ಸಂಘಟನೆಯ ಜೊತೆ ಗುರುತಿಸಿಕೊಂಡು ಬರುತ್ತಿರುವ ಕಾರ್ಯಕರ್ತರ ಶ್ರಮ. ಯಾವುದೇ ಹೋರಾಟ, ಚಳುವಳಿ ಸಂಘಟನೆಯ ಹಿನ್ನೆಲೆಯಿಲ್ಲದ ಇಂತಹ ವ್ಯಕ್ತಿಗಳಿಗೆ ಏನು ಗೊತ್ತು ಎಂದು ರೈತ ಸಂಘಟನೆ ಮುಖಂಡ ಗುರುಶಾಂತಪ್ಪ ತಿಳಿಸಿದರು.
ರಾಜ್ಯ ರೈತ ಸಂಘದ ಆಂತರಿಕ ವಿಚಾರಗಳಿಗೆ ಮೂಗು ತೂರಿಸಲು ಇವರಾರು? ಸಂಬಂಧವಿಲ್ಲದ ಇವರಿಂದ ರೈತ ಸಂಘಟನೆ ಹೇಳಿಸಿಕೊಳ್ಳುವಷ್ಟು ದುರ್ಬಲವಾಗಿಲ್ಲ. ಸುನಿಲ್ ಕುಮಾರ್ ತಾಲ್ಲೂಕು ಅಧ್ಯಕ್ಷರಾಗಿ ಮುಂದುವರೆಯುತ್ತಾರೆ ಎಂದು ಹೇಳಲು ಇವರಿಗೇನು ನೈತಿಕತೆ ಇದೆ?. ಸುನಿಲ್ ಕುಮಾರ್ ಪರ ಹೇಳಿಕೆಯು ಇವರದಲ್ಲ. ಈ ಹೇಳಿಕೆ ಹಿಂದೆ ಇರುವ ಕಾಣದ ಕೈಯನ್ನು ಗುರುತಿಸಲಾರದಷ್ಟು ಅಸಮರ್ಥತೆ ರೈತ ಸಂಘಟನೆಗೆ ಬಂದಿಲ್ಲ. ಸಂಜೆ ಪತ್ರಿಕಾ ಗೋಷ್ಠಿ ಕರೆದು ಬೆಳಗ್ಗೆ ಗೊಂದಲದಲ್ಲಿ ಪತ್ರಿಕಾ ಗೋಷ್ಠಿ ರದ್ದು ಮಾಡಲು ಹೋಗಿ ಉಗಿಸಿಕೊಂಡಿರುವುದು ಗೊತ್ತಿದೆ. ಪತ್ರಕಾ ಗೋಷ್ಠಿಗೆ ಹಣ ಒದಗಿಸಿದವರ ಮಾಹಿತಿಯೂ ರೈತ ಸಂಘಟನೆಗೆ ತಿಳಿದಿದೆ. ಈಗಾಗಲೇ ತುಳಸೇಗೌಡ ರೈತ ಸಂಘಕ್ಕೆ ಸದಸ್ಯತ್ವ ಮಾಡುತ್ತಿದ್ದೇನೆ. 500 ರೂ ಕೊಡಿ ಎಂದು ಅನೇಕ ರೈತರೊಂದಿಗೆ ಬೇಡಿಕೆ ಇಟ್ಟಿರುವುದಾಗಿ ರೈತರು ದೂರುತ್ತಿದ್ದಾರೆ. ಈತ ಯಾವ ರೈತ ಸಂಘಕ್ಕೆ ಸದಸ್ಯತ್ವ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಈತನಿಗೆ ರೈತ ಸಂಘಟನೆಯಲ್ಲಿ ನೆಲೆ ಕಂಡುಕೊಳ್ಳಲಾಗಿಲ್ಲ ಎಂದು ರೈತ ಸಂಘಟನೆ ಮುಖಂಡ ಗುರುಶಾಂತಪ್ಪ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಜ. 7ರಂದು 208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ
ರೈತ ಸಂಘದ ತಾಲ್ಲೂಕು ಸಮಿತಿಗೆ ಸ್ವಾಮೀಜಿಯೊಬ್ಬರನ್ನು ಸದಸ್ಯರನ್ನಾಗಿ ಮಾಡಿ ಅವರನ್ನು ತಾಲ್ಲೂಕು ಸಲಹ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿರುವುದಾಗಿ ವ್ಯಾಟ್ಸಪ್, ಫೇಸ್‌ಬುಕ್ ನಂತಹ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ರೈತ ಸಂಘ ಗಂಭೀರವಾಗಿ ಪರಿಗಣಿಸಿದೆ, ಸೈದ್ಧಾಂತಿಕ ಹಾಗೂ ಜಾತ್ಯಾತೀತ ತತ್ವದ ತಳಹದಿಯಲ್ಲಿ ಕಟ್ಟಿರುವ ಸಂಘಟನೆಗೆ ಇಂತಹ ಸ್ವಾಮಿಯಿಂದ ಸಲಹೆ ಪಡೆಯುವಷ್ಟು ದುರ್ಬಲವಾಗಿಲ್ಲ ಹಾಗೂ ಬೌದ್ಧಿಕವಾಗಿ ದಿವಾಳಿಯಾಗಿಲ್ಲ. ರೈತ ಸಂಘಟನೆಯ ಆಂತರಿಕ ವಿಚಾರಗಳಿಗೆ ಬಾಹ್ಯ ವ್ಯಕ್ತಿಗಳ ಮೂಗು ತೂರಿಸುವಿಕೆಯನ್ನು ಸಂಘಟನೆ ಸಹಿಸುವುದಿಲ್ಲವೆಂದು ರೈತ ಸಂಘದ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ರೈತ ಸಂಘದ ಗುರುಶಾಂತಪ್ಪ, ಕುಮಾರಸ್ವಾಮಿ, ಎಂ ಸಿ ಬಸವರಾಜು, ದೇವರಾಜು, ಉಮೇಶ್, ರಾಜು ಉಪಸ್ಥಿತರಿದ್ದರು.





