ಚಿಕ್ಕಮಗಳೂರು ನಗರದಲ್ಲಿ ದಿನವಿಡೀ ಕುಂದು-ಕೊರತೆ ವಿಚಾರಣೆ ಮತ್ತು ಬಾಕಿ ಪ್ರಕರಣಗಳ ವಿಲೇವಾರಿ ಮಾಡಿ ಸ್ಥಳದಲ್ಲೇ ಆದೇಶವನ್ನು ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ ಗುರುವಾರದಂದು ಹೊರಡಿಸಿದರು.
ಶೃಂಗೇರಿ ತಾಲೂಕಿನ ಶಾರದಮ್ಮ ಎಂಬುವರ ಪ್ರಕರಣದಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ಅವರ ಪತಿ ಮರಣ ಹೊಂದಿ 15 ವರ್ಷ ಕಳೆದರೂ ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯ ತಲುಪಿಲ್ಲ. ಸೇವಾ ರಿಜಿಸ್ಟರ್ (ಎಸ್.ಆರ್) ಇಲ್ಲ ಎಂಬ ಕಾರಣಕ್ಕೆ ವಿಳಂಬ ಮಾಡಲಾಗಿದೆ ಎಂಬ ವಿಷಯ ವಿಚಾರಣೆ ವೇಳೆ ಬಹಿರಂಗವಾಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಶಿಕ್ಷಕರ ವಿರೋಧ
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ದೂರುದಾರರ ಸಭೆಯಲ್ಲಿ ಲೋಕಾಯುಕ್ತದಲ್ಲಿ ಬಾಕಿ ಇರುವ ಜಿಲ್ಲೆಯ 84 ಪ್ರಕರಣಗಳನ್ನು ಕೈಗೆತ್ತಿಕೊಂಡರು. ಬಹುತೇಕ ಕಂದಾಯ ಮತ್ತು ಅರಣ್ಯ ಭೂಮಿ ಸಮಸ್ಯೆಗಳು, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ನಿವೇಶನ ಸಮಸ್ಯೆ, ಜಮೀನುಗಳ ಅಳತೆ ವಿಳಂಬ, ಇನಾಂ ಭೂಮಿ ಸಮಸ್ಯೆ, ಪಿಂಚಣಿ ಸೇರಿದಂತೆ ಹಲವು ಸಮಸ್ಯೆಗಳು ಉಲ್ಬಣವಾಗಿದೆ.





