ಸುಮಾರು ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಅತಿವೃಷ್ಟಿಗೆ ರಸ್ತೆಗಳು ಹಾಗೂ ಸೇತುವೆಗಳು ಕುಸಿದಿದ್ದವು, ಇದನ್ನು ಸರಿಪಡಿಸಲು ನಮ್ಮ ಸರ್ಕಾರ ಸಾಕಷ್ಟು ಅನುದಾನವನ್ನು ನೀಡಿದೆ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ತಿಳಿಸಿದ್ದಾರೆ.
ಕ್ಷೇತ್ರದಲ್ಲಿ ಇನ್ನು ಶಿಥಿಲಗೊಂಡಿರುವ ಹಲವು ಸೇತುವೆ ಹಾಗೂ ರಸ್ತೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಅತಿವೃಷ್ಟಿಯಿಂದ ಉಂಟಾಗಿದ್ದ ನೇರಲುಕೊಡಿಗೆ ಸೇತುವೆ, ಗಡಿಕಲ್-ಮೇಗೂರು, ಹಾಗೂ ನಾರ್ವೆ, ಕಮ್ಮರಡಿ ಬಳಿ ಭೂಕುಸಿತಕ್ಕೆ ತಡೆಗೋಡೆ ನಿರ್ಮಾಣ ಮಾಡುವ ಕೆಲಸ ನಡೆಸಲಾಗುತ್ತಿದೆ.
ಕಳೆದ ವಾರ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಮಳೆಯಿಂದ ಹಾನಿಯಾದ ರಸ್ತೆ, ಸೇತುವೆಗಳನ್ನು ಪರಿಶೀಲನೆ ನಡೆಸಿ, ಆಲ್ಲೂರು- ಕುಂದೂರು ನಡುವಿನ ರಸ್ತೆಗೆ ಅನುದಾನ ನೀಡುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಕೋಡಿಗಲ್ ರಮೇಶ್ ಮೇಲೆ ಹಲ್ಲೆ ಖಂಡಿಸಿ ಅಪರಾಧಿಗಳನ್ನು ಬಂಧಿಸಿವಂತೆ ದಸಂಸ ಒತ್ತಾಯ
ಹಾಗೆಯೇ, ವಸ್ತಾರೆ ಮಾರ್ಗದಿಂದ ಶೃಂಗೇರಿವರೆಗೆ ರಸ್ತೆಯ ಎರಡು ಬದಿ ಒಂದೊಂದು ಮೀಟರ್ ಅಗಲೀಕರಣ ಮಾಡಿ ಡಾಂಬರೀಕರಣ ಮಾಡುವ ಕುರಿತು ಸಚಿವರು ಭರವಸೆ ನೀಡಿದ್ದಾರೆ. ಮಳೆ ಕಡಿಮೆಯಾದ ಮೇಲೆ ಗುಣಮಟ್ಟದಿಂದ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಶಾಸಕ ರಾಜೇಗೌಡ ತಿಳಿಸಿದರು.





