ಚಿಕ್ಕಮಗಳೂರು ನಗರದ ಪ್ರೆಸ್‌ಕ್ಲಬ್‌ನಲ್ಲಿ ಗ್ರಾಹಕರು, ಬ್ಯಾಂಕ್‌ಗಳು ಮತ್ತು ಬ್ಯಾಂಕ್ ಅಧಿಕಾರಿಗಳ ನಡುವೆ ಹೇಗೆ ಲೀಡ್ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ ಎಂದು ಕ್ಲಬ್ ವತಿಯಿಂದ ತಿಂಗಳ ಅತಿಥಿ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಯಿತು.

ಯೂನಿಯನ್ ಬ್ಯಾಂಕ್ ಆರ್‌ಬಿಐನ ಪ್ರತಿನಿಧಿಯಾಗಿ ಲೀಡ್ ಬ್ಯಾಂಕ್‌ನ ಜವಾಬ್ದಾರಿಯನ್ನು ಅತ್ಯಂತ ಮುತುವರ್ಜಿಯಿಂದ ನಿರ್ವಹಿಸುತ್ತಿದೆ. ಲೀಡ್ ಬ್ಯಾಂಕ್ ಕೇಂದ್ರ ಮತ್ತು ರಾಜ್ಯ ಸರಕಾರಗಳ ಬ್ಯಾಂಕ್ ಸಂಬಂಧಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ಒದಗಿಸುವುದರೊಂದಿಗೆ ಬ್ಯಾಂಕಿಂಗ್ ಕ್ಷೇತ್ರವನ್ನು ಗ್ರಾಮೀಣ ಜನರಿಗೆ ತಲುಪುವ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆನ್‌ಲೈನ್ ವಂಚನೆಗಳಂತಹ ಪ್ರಕರಣಗಳಿಗೆ ತಡವಾದರೂ ಪತ್ತೆ ಮಾಡಿ ಕಡಿವಾಣ ಹಾಕಲಾಗುತ್ತದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ ತಿಳಿಸಿದರು.
ಜೆಎಂಎಫ್‌ಸಿ ನ್ಯಾಯಾಲಯದ ಒಪ್ಪಿಗೆಯ ಆದೇಶದೊಂದಿಗೆ ಸರ್ಫೇಸಿ ಕಾಯ್ದೆಯಡಿಯಲ್ಲಿ ಸಾಲ ಮರುಪಾವತಿ ಮಾಡದೆ ಸುಸ್ಥಿದಾರರಾದ ಬೆಳೆಗಾರರ ಆಸ್ತಿ, ಜಮೀನುಗಳನ್ನು ಬ್ಯಾಂಕ್‌ಗಳು ಮುಟ್ಟುಗೋಲು ಹಾಕಿಕೊಂಡು ಹರಾಜು ಹಾಕಲು ಅವಕಾಶ ಇದೆ. ಸಾಲ ಸುಸ್ಥಿಯಾಗಿದ್ದಲ್ಲಿ ಬೆಳೆಗಾರರಿಗೆ 60 ದಿನಗಳ ಕಾಲ ಸಾಲ ಮರುಪಾವತಿಗೆ ಕಾಲಾವಕಾಶವನ್ನು ಬ್ಯಾಂಕ್ ಗಳು ನೀಡುತ್ತವೆ. ನಂತರ ನೋಟಿಸ್ ನೀಡಿ ಮತ್ತೆ 7 ದಿನಗಳವರೆಗೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಲಾಗುತ್ತದೆ. ಹಾಗೆಯೇ, ಜಿಲ್ಲೆಯಲ್ಲಿ ಪಿಎಂ ಸ್ವ-ನಿಧಿ ಯೋಜನೆ, ಪಿಎಂ ವಿಶ್ವಕರ್ಮ ಯೋಜನೆ, ಪಿಎಂಎಫ್‌ಎಂಎ ಯೋಜನೆಗಳು ಸೇರಿದಂತೆ ರಾಜ್ಯ ಸರಕಾರದ ಬ್ಯಾಂಕ್ ಸಂಬಂಧಿ ಯೋಜನೆಗಳನ್ನು ಲೀಡ್ ಬ್ಯಾಂಕ್ ಮೂಲಕ ಅರ್ಹರಿಗೆ ತಲುಪುತ್ತಿದೆ. ಹಾಗೆಯೇ, ರಾಜಕಾರಣಿ, ಪ್ರಭಾವಿ ವ್ಯಕ್ತಿಗಳಿಗೆ ಮಣಿಯದೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಹೆಣ್ಣು ಮಗುವಿಗೆ ಜನ್ಮ: ಪೋಕ್ಸೋ ಪ್ರಕರಣ ದಾಖಲು
ಈ ಸಂದರ್ಭದಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಸಿ.ಡಿ ಚಂದ್ರೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ಪ್ರಧಾನ ಕಾರ್ಯದರ್ಶಿ ಎನ್.ಕೆ. ಗೋಪಿ, ಸಹಕಾರ್ಯದರ್ಶಿ ರುದ್ರಯ್ಯ ಹಾಗೂ ಸದಸ್ಯರು, ಪ್ರತ್ರಿಕಾ ಬಳಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





