ಕೊಪ್ಪ ತಾಲೂಕು ಪುರಭವನದಲ್ಲಿ ಶುಕ್ರವಾರದಂದು ಏರ್ಪಡಿಸಿದ್ದ, ಸತ್ಯಮೇವ ಜಯತೇ’ ಸಮ್ಮಿಲನ ಸಭೆಯಲ್ಲಿ ‘ನ್ಯಾಯಾಲಯದ ಮೂಲಕವೇ ಜನರಿಗೆ ಸತ್ಯ ಗೊತ್ತಾಗಲಿ ಎಂದು ಶಾಸಕ ಟಿ.ಡಿ ರಾಜೇಗೌಡ ತಿಳಿಸಿದರು.
‘ಕ್ಷೇತ್ರಕ್ಕೆ ಕಪ್ಪುಚುಕ್ಕಿ ತರುವ ಕೆಲಸ ಮಾಡಿಲ್ಲ. ಜನರಿಗೆ ಸತ್ಯಕ್ಕೆ ನ್ಯಾಯಕ್ಕೆ ಹತ್ತಿರವಾಗಿದ್ದೇವೆ. ಬಿಜೆಪಿಗರು ನಮ್ಮ ಕುಟುಂಬದ ಮೇಲೆ ನಿರಂತರ ಕಿರುಕುಳ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ಮಾಡಿಸಿದ್ದರು. ದಾಳಿ ವೇಳೆ ಅಧಿಕಾರಿಗಳಿಗೆ ಬಂದು ಹೋದ ಖರ್ಚು ಕೂಡ ಶೋಧ ವೇಳೆ ಸಿಗಲಿಲ್ಲ. ಮೈತುಂಬಾ ವಿಷ ದ್ವೇಷದ ರಾಜಕಾರಣ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ದೂರಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಶಾಸಕ ರಾಜೇಗೌಡರೊಂದಿಗೆ ನಾವಿದ್ದೇವೆ; ಕಾಂಗ್ರೆಸ್ ಕಾರ್ಯಕರ್ತರ ನಿಲುವು
ಶಂಕರಾಚಾರ್ಯ ಪ್ರತಿಮೆ ಮೇಲೆ ಮುಸ್ಲಿಂ ಬಟ್ಟೆ ಹಾಕಿ ದ್ವೇಷ ರಾಜಕೀಯಕ್ಕೆ ಮುಂದಾದರು. ನಿರಂತರವಾಗಿ ಸುಳ್ಳನ್ನು ಪ್ರಚಾರ ಮಾಡಿದರು. ಸಿದ್ದಾರ್ಥ ಹೆಗ್ಡೆ ಮತ್ತು ನನ್ನ ನಡುವೆ ಅವಿನಾಭಾವ ಸಂಬಂಧ ಇತ್ತು. ಸಂಕಷ್ಟದ ಸಂದರ್ಭದಲ್ಲಿ ಆ ಕುಟುಂಬದ ಪರವಾಗಿ ನಿಂತೆ. ಈ ವಿಚಾರದಲ್ಲಿ ಮಾಳವಿಕ ಹೆಗ್ಡೆ ಸ್ಪಷ್ಟನೆ ನೀಡಿದರೂ ಲೋಕಾಯುಕ್ತಕ್ಕೆ ದೂರು ನೀಡಿದರು. ಯಾವುದೇ ಮಾನದಂಡ ಅನುಸರಿಸದೆ ಪ್ರಕರಣ ದಾಖಲಿಸಿದ್ದರು. ತಡೆಯಾಜ್ಞೆ ತರಲು ಅವಕಾಶ ಇತ್ತು. ಆದರೆ ನ್ಯಾಯಾಲಯದ ಮೂಲಕವೇ ಜನರಿಗೆ ಸತ್ಯ ಗೊತ್ತಾಗಲಿ ಎಂದು ಸುಮ್ಮನಾದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಮಾತಾಡಿದರು.





